ಜೀವ ಬಲಿಗಾಗಿ ಕೈ ಬೀಸಿ ಕರೆಯುತ್ತಿದೆ ವಿದ್ಯುತ್ ಪರಿವರ್ತಕ, ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಬ.ಬಾಗೇವಾಡಿ ಕೆಇಬಿ ಅಧಿಕಾರಿಗಳು
ದೇವರಹಿಪ್ಪರಗಿ :ಆ.23: ಸಮಸ್ಯೆಯ ಅವಾಂತರ ಕಣ್ಣಿಗೆ ಕಾಣುತ್ತಿದ್ದರು. ಕಣ್ಣಿದ್ದು ಕುರುಡರಂತೆ ಕುಳಿತ ಬಸವನ ಬಾಗೇವಾಡಿ ಕೆ ಇ ಬಿ ಅಧಿಕಾರಿಗಳು ಭಯದ ವಾತಾವರಣದಲ್ಲಿ ಶಾಲಾ ಮಕ್ಕಳು ಗ್ರಾಮಸ್ಥರು ,
ಹೌದು ಇಂದು ನಾವು ತಮ್ಮಮುಂದೆ ಹೇಳಲೂ ಹೊರಟಿರುವ ಸುದ್ದಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿನ ಟಿಸಿ (ವಿದ್ಯುತ್ ಪರಿವರ್ತಕ)ಗೆ ರಕ್ಷಣೆ ತಂತಿ ಬೇಲಿ ಇಲ್ಲದ ಪರಿಣಾಮ ಯಾವುದೇ ಸಂದರ್ಭ ಅಮಾಯಕ ಜನರನ್ನು ಇಲ್ಲಿ ಅಳವಡಿಸಲಾದ ವಿದ್ಯುತ್ ಟಿಸಿ ಪರಿವರ್ತಕ ಬಲಿಗಾಗಿ ಕಾಯುವಂತಿದೆ.ಈ ವಿದ್ಯುತ್ ವರ್ತಕ ನೆಲದಿಂದ ಎರಡೇ ಅಡಿ ಅಂತರವಿದೆ, ಟಿ ಪೆÇ್ರಡಕ್ಷನ್ ಕಿಟ್ ಮೂರು ಅಡಿ ಅಂತರವಿದೆ ಈ ಜಾಗ ತುಂಬಾ ಅಪಾಯಕಾರಿಯಾಗಿ ಮಾರ್ಪಟ್ಟಿದೆ.
ಮಾರ್ಕಬ್ಬಿನಹಳ್ಳಿ ಗ್ರಾಮದ ಊರ ಒಳಗೆ ಹೋಗುವ ಮುಖ್ಯ ರಸ್ತೆಯಲ್ಲಿ ಜನ ಎದುರಿಸುತ್ತಿರುವ ಚಿತ್ರಣ ಇದಾಗಿದೆ. ಈ ವಿದ್ಯುತ್ ಪರಿವರ್ತಕ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಂಪೆÇೀಂಡಕ್ಕೆ ಹತ್ತಿರವಿದೆ.ಮುಖ್ಯ ರಸ್ತೆಯ ಪಕ್ಕದಲ್ಲಿ.ನೂರಾರು ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ಜಾನುವಾರು ಅಲ್ಲದೆ ರೈತರ ಎತ್ತಿನ ಬಂಡಿ ಸೇರಿ ನಿತ್ಯ ನೂರಾರು ವಾಹನಗಳು ಈ ರಸ್ತೆಗೆ ಸಂಚಾರ ಮಾಡುತ್ತವೆ.ಹೀಗಾಗಿ ಇಕ್ಕಟಾದ ರಸ್ತೆ ವಾಹನಗಳು ಬೈಪಾಸಾಗಬೇಕಾದರೆ ಯಾವುದೇ ಸಂದರ್ಭ ವಿದ್ಯುತ್ ಪರಿವರ್ತಕಕ್ಕೆ ತಾಗಿದರೆ ಅಮಾಯಕರು ಬಲಿಯಾಗಬೇಕಾಗುತ್ತದೆ. ಇದರಿಂದ ಗ್ರಾಮದ ಜನರು ಬಯದ ಆಂತಕ ದಲ್ಲಿದ್ದಾರೆ.
ಇದರ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೂ ತಂದು ಲಿಖಿತ ದೂರು ನೀಡಿದರು. ಏನು ಪ್ರಯೋಜನ ಆಗಿರುವುದಿಲ್ಲ.ಇದಕ್ಕೂ ತಮಗೂ ಸಂಬಂಧವೇ ವಿಲ್ಲವೆಂಬಂತೆ ನಿದ್ರೆಗೆ ಜಾರಿ ಇಲ್ಲಿನ ಗ್ರಾಮಸ್ಥರ ಹಾಗೂ ಶಾಲಾ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.ಎಂದು ಕೆ ಇ ಬಿ ಅಧಿಕಾರಿಗಳು ವಿರುದ್ಧ ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಅನೇಕ ವರ್ಷಗಳಿಂದ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪರಿವರ್ತಕ ಅಳವಡಿಸಲಾಗಿದೆ. ಶಾಲೆಯ ವಿದ್ಯಾರ್ಥಿಗಳು ವಿರಾಮದ ವೇಳೆ ಮೂತ್ರ ವಿಸರ್ಜನೆ ಮಾಡಲು ಇದೇ ಜಾಗದ ಬಳಿ ಬರುತ್ತಿದ್ದಾರೆ. ಒಮ್ಮೊಮ್ಮೆ ವಿದ್ಯುತ್ ಪೂರೈಕೆಯಲ್ಲಿ ಹೆಚ್ಚಿನ ಲೋಡ್ ಆದ ವೇಳೆ ಬೆಂಕಿ ಕಿಡಿ ಹೊತ್ತಿಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.
ಇದೇ ಟಿಸಿಯಿಂದ ವಿದ್ಯುತ್ ಸ್ಪರ್ಶವಾಗಿ ಈಗಾಗಲೇ ಕೆಲವು ಆಡು, ಕುರಿ, ಎಮ್ಮೆ, ಆಕಳುಗಳು ಮೃತಪಟ್ಟಿವೆ.ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಈ ಎರಡು ಶಾಲೆ ಮದ್ಯದಲ್ಲಿ ಈ ವಿದ್ಯುತ್ ಟಿಸಿ (ಪರಿವರ್ತಕ) ಇರುವುದರಿಂದ ಶಿಕ್ಷಕರು, ಶಾಲಾ ಮಕ್ಕಳು,ಪಾಲಕರು ಭಯ ಪಡುವಂತಾಗಿದೆ.ಮಕ್ಕಳ್ಳನ್ನು ಶಾಲೆಗೆ ಹೇಗೆ ಕಳಿಸುವುದು ಎಂಬ ಚಿಂತೆ ಕಾಡುತ್ತಿದೆ.ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಾಂಪೆÇೀಂಡಕ್ಕೆ ಹತ್ತಿರ ಇದೆ.ಭಯದ ವಾತಾವರಣದಲ್ಲಿ ಶಾಲಾ ಮಕ್ಕಳು ಶಿಕ್ಷಣ ಕಲಿವಂತಾಗಿದೆ.
ಇದರಿಂದ ಯಾವುದೆ ಜೀವ ಹಾನಿಯಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ನಿರ್ಲಕ್ಷ್ಯ ತೋರದೆ ನಿದ್ದೆಯಿಂದ ಎದ್ದು ಈ ವಿದ್ಯುತ್ ಪರಿವತರ್ಕ ( ಟಿಸಿ) ಬೇರೆಡೆ ಸ್ಥಳಾಂತರ ಮಾಡಿ ಗ್ರಾಮಸ್ಥರಿಗೆ ಮತ್ತು ಶಾಲಾ ಮಕ್ಕಳಿಗೆ ಹಾಗೂ ಈ ರಸ್ತೆಗೆ ಅಡ್ಡಾಡುತ್ತಿರುವ ಸಾರ್ವಜಕರಿಗೆ ಅನುಕೂಲ ಮಾಡಿ ಕೊಡಬೇಕು. ಒಂದು ವೇಳೆ ಇದರ ಬಗ್ಗೆ ಇನ್ನೂ ನಿರ್ಲಕ್ಷ್ಯ ವಹಿಸಿದ್ದಲ್ಲಿ. ಗ್ರಾಮಸ್ಥರು ಕೆಇಬಿ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡುವುದಕ್ಕೆ ಎಚ್ಚರಿಕೆ ನೀಡಿದ್ದಾರೆ.