ಹೆಚ್ಚಿನ ಇಳುವರಿಗೆ ಸೂಕ್ತವಾದ ತಳಿಗಳ ಆಯ್ಕೆ ಅವಶ್ಯ:ಡಾ.ಎಸ್.ವಿ.ಪಾಟೀಲ
ಬೀದರ, ಆ.23: ಜಿಲ್ಲೆಯ ಹವಾಗುಣಕ್ಕನುಗುಣವಾಗಿ ಹಾಗೂ ಮಣ್ಣಿನ ಫಲವತ್ತೆಯ ಅನುಸಾರ ರೈತರು ಸೂಕ್ತವಾದಂತಹ ತಳಿಗಳನ್ನು ಆಯ್ದುಕೊಂಡಲ್ಲಿ ಹೆಚ್ಚಿನ ಇಳುವರಿಯನ್ನು ಕಂಡು ಕೊಳ್ಳಬಹುದೆಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಹೇಳಿದರು.
ಅವರು ಬುಧವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಮತ್ತು ತೋಟಗಾರಿಕೆ ಇಲಾಖೆ, ಬೀದರ ಇವರುಗಳ ಸಹಯೋಗದೊಂದಿಗೆ 2024-25 ನೇ ಸಾಲಿನ ಎರಡನೆ ತ್ರೈ ಮಾಸಿಕ ತೋಟಗಾರಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರೈತರು ಕೃಷಿ ವಲಯದಲ್ಲಿ ನಿಗದಿತ ಮಟ್ಟದ ಲಾಭವನ್ನು ಕಂಡುಕೊಳ್ಳುವಲ್ಲಿ ವಿಫಲವಾದರೆ ಅವರ ಒಲವು ಕೃಷಿಕಡೆಗೆ ಕಡಿಮೆಯಾಗುತ್ತಾ ಹೋಗುತ್ತದೆ. ಆದ್ದರಿಂದ ಅಧಿಕಾರಿಗಳು ಬರೀ ತಮ್ಮ ಕಛೇರಿಯಲ್ಲಿ ಸೀಮಿತವಾಗಿರದೆ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ಸೂಕ್ತವಾದಂತಹ ಸಲಹೆ ಹಾಗೂ ಮಾರ್ಗದರ್ಶನವನ್ನು ಒದಗಿಸಿ ರೈತರ ಏಳಿಗೆಗೆ ಶ್ರಮಿಸಿಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬೀದರ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ವಿಶ್ವನಾಥ ಝಿಳ್ಳೆ, ಹಿರಿಯ ಸಹಾಯಕರಾದ ಸುನೀಲ ಗಂಗಶ್ರೀ, ಡಾ.ಅಬ್ದುಲ್ ಕರೀಮ್, ಡಾ.ವಿಜಯಮಹಾಂತೇಶ, ಡಾ.ವಿ.ಪಿ.ಸಿಂಗ್, ಡಾ. ವಿ.ಪಿ. ಸಿಂಗ್., ವಿಸ್ತರಣಾ ಮುಂದಾಳು, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಬೀದರ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿ ಹೇಳಿ ಎಲ್ಲಾ ಗಣ್ಯರಿಗೆ ಸ್ವಾಗತಿಸಿದರು. ಡಾ. ಹರೀಷ ಟಿ., ಸಹಾಯಕ ಪ್ರಾಧ್ಯಾಪಕರು ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಅಂಬರೀಶ, ಸಹಾಯಕ ಪ್ರಾಧ್ಯಾಪಕರು, ಇವರು ವಂದಿಸಿದರು. ಬೀದರ ಜಿಲ್ಲೆಯ 50 ಸಹಾಯಕ ತೋಟಗಾರಿಕೆ ಅಧಿಕಾರಿಗಳು ಈ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದು ಇದರ ಲಾಭ ಪಡೆದರು.