ವಿದ್ಯಾರ್ಥಿಗಳು ಸಾಧನೆಯ ಪಥದತ್ತ ಸಾಗಬೇಕು
ಮುನವಳ್ಳಿ,ಆ.23: ಪಟ್ಟಣದ ಜೆ.ಎಸ್.ಪಿ ಸಂಘದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಬಿಎ.ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು.
ಡಾ|| ರಾಜಶೇಖರ ಬಿರಾದಾರ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದರು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಓದಿನಕಡೆ ಗಮನ ಹರಿಸಬೇಕು. ದುಶ್ಚಟಗಳಿಂದ ದೂರವಿರಿ ನಿಮ್ಮ ಆರೊಗ್ಯದಕಡೆ ಗಮನ ಹರಿಸಿ. ಶಿಕ್ಷಣದೊಂದಿಗೆ ವೃತ್ತಿ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳಸಿಕೊಂಡು ಅಭಿವೃದ್ದಿಹೊಂದಿ ಸಾಧನೆಯ ಪಥದತ್ತ ಸಾಗಬೇಕೆಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಎಸ್.ಯಕ್ಕುಂಡಿ ಮಾತನಾಡಿ ವಿದ್ಯಾರ್ಥಿಗಳು ಹೆಚ್ಚಿನ ಸಮಯ ಓದಿನಕಡೆ ಕೊಟ್ಟು ಉನ್ನತಶ್ರೇಣಿಯತ್ತ ಸಾಗಬೇಕು ಎಂದರು.
ಸಂಸ್ಥೆಯ ಕೋಶಾಧ್ಯಕ್ಷ ರವೀಂದ್ರ ಯಲಿಗಾರ ಮಾತನಾಡಿ ರಾಷ್ಟ್ರದ ಅಭಿವೃದ್ಧುಗೆಯುವಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಪ್ರಾಚಾರ್ಯ ಡಾ. ಎಂ.ಎಸ್.ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಂ.ಎ.ಕಮತಗಿ, ಬಿ.ಬಿ.ನಾವಲಗಟ್ಟಿ, ಪ್ರಕಾಶ ಕಮಲಾಪೂರ, ಟಿ.ಎನ್.ಮುರಂಕರ, ಬಸವರಾಜ ತುಳಜಣ್ಣವರ, ವೀರೇಶ ಬೆನಚಿನಮರಡಿಮಠ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಎಂ.ಆರ್.ಗೋಪಶೇಟ್ಟಿ ಅಧ್ಯಕ್ಷತೆ ವಹಿಸಿದ್ದರು, ಸುದಾಕರ ರೇಣಕೆ, ಬಿ.ಜಿ.ಜಾವೂರ, ಅಮಿತ ಕರಿಕಟ್ಟಿ, ಎಸ್.ಪಿ.ಕಾಮಣ್ಣವರ, ಶ್ರೀಧರ ಯಲಿಗಾರ, ಶ್ರೀಶೈಲ ಗೋಪಶೆಟ್ಟಿ, ಪಿ.ಎಫ್.ಪಟ್ಟಣಶೆಟ್ಟಿ, ಬಿ.ಎಲ್.ರಾಯನಗೌಡ್ರ, ಪಿ.ಬಿ.ಪಾಟೀಲ, ವಿಜಯ ಜಂತ್ಲಿ, ಟಿ.ಎ.ತುಪ್ಪಳ್ಳಿ, ಡಿ.ಎಂ.ಅಗಸಿಮನಿ, ಮಂಜುನಾಥ ಕಂಬಾಳಿಮಠ, ಪಿ.ವಿ ಪೋಳ, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಪೂಜಾ ಕಾಮಣ್ಣವರ ಹಾಗೂ ಲಕ್ಷ್ಮೀ ಶಿರಸಂಗಿ ಕಾರ್ಯಕ್ರಮ ನೀರೂಪಿಸಿದರು, ಕವಿತಾ ಮಹೇಂದ್ರಕರ ವಂದಿಸಿದರು.