ವಿಜೃಂಭಣೆಯ ರಥೋತ್ಸವ
ಲಕ್ಷ್ಮೇಶ್ವರ,ಆ.23: ಪಟ್ಟಣದ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನಿಮಿತ್ಯ ಕೊನೆಯ ದಿನವಾದ ಗುರುವಾರ ರಾಯರ ರಥೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ನೂರಾರು ಭಕ್ತರ ವೇದಘೋಷದ ನಡುವೆ ವಾದ್ಯವೈಭವಗಳೊಂದಿಗೆ ಭಕ್ತಿ ಸಂಗೀತದಲ್ಲಿ ತಾಳಕ್ಕೆ ಹೆಜ್ಜೆ ಹಾಕುತ್ತಾ ರಥೋತ್ಸವ ಕಾರ್ಯಕ್ರಮವು ವೈಭದಿಂದ ನೆರವೇರಿತು.
ಪ್ರತಿದಿನ ಮುಂಜಾನೆ ಸುಪ್ರಭಾತ, ಅಷ್ಟೋತ್ತರ, ಹರಿವಾಯು ಸ್ತುತಿ, ಅಭಿಷೇಕ ಅಲಂಕಾರ ಪೂಜೆ, ಅನ್ನಸಂತರ್ಪಣೆ, ಅಲ್ಲದೆ ಸಂಜೆ ತಾರತಮ್ಯ ಭಜನೆ, ಉಪನ್ಯಾಸ, ಸ್ಥಳಿಯರಿಂದ ಸಂಗೀತ ಸೇವೆಗಳು ನಡೆದವು. ರಥೋತ್ಸವದ ನಂತರ ಶ್ರೀಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಲಾಯಿತು.
ನಂತರ ಮಾತನಾಡಿದ ಶ್ರೀಮಠದ ಧರ್ಮದರ್ಶಿ ಹನುಮಂತಾಚಾರ್ಯ ಹೊಂಬಳ ಅವರು ನಂಬಿದ ಭಕ್ತರನ್ನು ರಾಯರು ಕೈಬಿಟ್ಟ ಉದಾಹರಣೆಗಳಿಲ್ಲ, ನೂರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಎಲ್ಲರ ಸಹಾಯ ಸಹಕಾರದಿಂದ ಆರಾಧನೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಸೇವೆ ಮಾಡಿದವರಿಗೆ ಇಷ್ಟಾರ್ಥಗಳನ್ನು ಈಡೇರಿಸುವ ರಾಯರ ಕಾರ್ಯಕ್ರಮವನ್ನು ಎಲ್ಲ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸುವ ಸಂಪ್ರದಾಯ ನಮ್ಮ ಭಾಗದಲ್ಲಿ ಉತ್ತಮ ಪರಂಪರೆಯಾಗಿದೆ. ಆರಾಧನೆ ಕಾರ್ಯಕ್ರಮ ಯಶಸ್ವಿಯಾಗಿರುವದಕ್ಕೆ ಎಲ್ಲರಿಗೂ ರಾಯರು ಆಶೀರ್ವದಿಸಲಿ ಎಂದರು.
ಈ ಸಂದರ್ಭದಲ್ಲಿ ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್, ವ್ಹಿ.ಎಲ್.ಪೂಜಾರ, ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ, ಚಂಬಣ್ಣ ಬಾಳಿಕಾಯಿ, ಶರಣು ಗೋಡಿ, ಶಂಕರ ಬೆಟಗೇರಿ, ಕೆ.ಎಸ್.ಕುಲಕರ್ಣಿ, ಎ.ಪಿ.ಕುಲಕರ್ಣಿ, ವೆಂಕಟೇಶ ಗುಡಿ, ಗುರುರಾಜ ಪಾಟೀಲಕುಲಕರ್ಣಿ, ವೇದವ್ಯಾಸ ಹೊಂಬಳ, ಅರವಿಂದ ದೇಶಪಾಂಡೆ, ಮನೋಜ ಹೊಂಬಳ, ಅನಿಲ ಕುಲಕರ್ಣಿ, ಮಹೇಶ ಹೊಗೆಸೊಪ್ಪಿನ್, ಶರಣು ಗೋಡಿ, ಬಾಬು ಅಳವಂಡಿ, ಗಂಗಾಧರ ಗೋಡಿ, ಶ್ರೀಪಾದರಾಜ ಹೊಂಬಳ, ಗುರುರಾಜ ಸುಳ್ಳದ, ಕೃಷ್ಣ ಕುಲಕರ್ಣಿ(ತಂಗೋಡ), ರಾಘವೇಂದ್ರ ಗೊಗ್ಗಿ, ಕೃಷ್ಣಕುಮಾರ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಶ್ರೀನಿವಾಸ ಹುಲಮನಿ, ಶ್ರೀಕಾಂತ ಪೂಜಾರ, ಡಾ.ಪ್ರಸನ್ನ ಕುಲಕರ್ಣಿ, ಡಿ.ಎಂ.ಪೂಜಾರ ಮಂಜುನಾಥ ಒಂಟಿ, ಪ್ರಾಣೇಶ ಬೆಳ್ಳಟ್ಟಿ, ರಮೇಶ ತೊರಗಲ್, ದೃವ ಬೆಟಗೇರಿ, ರವೀಂದ್ರ ರಾಯಚೂರ, ಗಂಗಾಧರ ಹಳ್ಳಿಕೇರಿ, ಸೇರಿದಂತೆ ನೂರಾರು ಮಹಿಳೆಯರು ಸಹ ಈ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.