ಪ್ರಕೃತಿ ದೇವರ ಅದ್ಭುತ ಕೊಡುಗೆ
ಚನ್ನಮ್ಮನ ಕಿತ್ತೂರು-23, ಪ್ರಕೃತಿ ಮತ್ತು ಮನು?À್ಯನಿಗೆ ಅವಿನಾಭಾವ ಸಂಬಂಧ. ಮನು?À್ಯ ಪ್ರಕೃತಿಯ ಮೇಲೆ ಅವಲಂಬಿತ. ಈ ಭೂಮಿಯ ಮೇಲಿನ ಜೀವಸಂಕುಲ ಪ್ರಕೃತಿಗೆ ಪೂರಕವಾಗಿಯೇ ಬದುಕಬೇಕು ಹೊರತು ಜೀವನ ಪ್ರಕ್ರಿಯೆಯಲ್ಲಿ ಪ್ರಕೃತಿಗೆ ಹಾನಿ ಮಾಡಿದರೆ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗುತ್ತದೆ. ಎಂದು ತಾಪಂ ಇಓ ಕಿರಣ ಗೋರ್ಪಡೆ ಹೇಳಿದರು.
ತಾಪಂ ಕಿತ್ತೂರು ಮತ್ತು ಸಾಮಾಜಿಕ ಅರಣ್ಯ ವಲಯ ಹಾಗೂ ಪ್ರಾದೇಶಿಕ ಅರಣ್ಯ ವಲಯ ಬೈಲಹೊಂಗಲ ಇವರುಗಳ ಸಹಯೋಗದಲ್ಲಿ ತಾಲೂಕಿನ ಉಗರಖೋಡ ಗ್ರಾಪಂ ವ್ಯಾಪ್ತಿಯ ದೇಮಟ್ಟಿ ಗ್ರಾಮದ ಉರ್ದು ಶಾಲೆ ಆವರಣದಲ್ಲಿ ಮತ್ತು ಗೈರಾಣ ಜಾಗೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಾಯಿ ನೆನಪಿಗಾಗಿ ಸಸಿ ನಡುವ ಕಾರ್ಯಕ್ರಮದಲ್ಲಿ ಅಧ್ಯಕ್ಷಸ್ಥಾನವಹಿಸಿಕೊಂಡು ಸಸಿ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯನ ಆಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸುವುದು ಉತ್ತಮ. ಪ್ರಕೃತಿ ದೇವರ ಅದ್ಭುತ ಕೊಡುಗೆಯಾಗಿದೆ. ಸುಂದರವಾದ ಹೂ ಬಿಡುವ ಗಿಡಗಳು, ಹಸಿರು ಎಲೆಗಳು ಮತ್ತು ಇಬ್ಬನಿ ತುಂಬಿದ ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆದರೆ ನಮ್ಮ ಹೃದಯವು ಅತ್ಯಂತ ಸಂತೋಷಗೊಳ್ಳುತ್ತದೆ.
ಪ್ರಕೃತಿ ನಮ್ಮ ಮನಸ್ಸನ್ನು ಸಂತೋಷಪಡಿಸುವುದಲ್ಲದೆ, ನಮ್ಮ ಆತ್ಮಗಳಿಗೆ ಆಧ್ಯಾತ್ಮಿಕ ಚಿಕಿತ್ಸೆ ನೀಡುತ್ತದೆ. ಮಾನಸಿಕ ಮತ್ತು ದೈಹಿಕ ಕ್ಷೇತ್ರಗಳಲ್ಲಿ, ಮರಗಳು ಮತ್ತು ಸಸ್ಯಗಳು ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ನಮಗೆ ಸಹಾಯ ಮಾಡುತ್ತವೆ ಎಂದರು.
ಈ ವೇಳೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಿರ್ದೇಶಕ ಲಿಂಗರಾಜ ಹಲಕರ್ಣಿಮಠ, ಗ್ರಾಪಂ ಕಾರ್ಯದರ್ಶಿ ರಾಮಣ್ಣಾ ವನ್ನೂರ, ತಾಂತ್ರಿಕ ಸಹಾಯಕರು ಶಿವಾನಂದ ನಂದೆಣ್ಣವರ, ಐಇಸಿ ಸಂಯೋಜಕಿ ಎಸ್,ಬಿ,ಜವಳಿ, ಅಕ್ಬರ ಅತ್ತಾರ, ಸುಂದ ಕೆಳಗಡೆ, ಮಂಜುನಾಥ ಪೂಜಾರ, ಪಿಡಿಓ, ಗ್ರಾಪಂ-ಅಧ್ಯಕ್ಷ-ಉಪಾಧ್ಯಕ್ಷ-ಸರ್ವಸದಸ್ಯ- ಶಾಲಾ ಪ್ರದಾನ ಗುರು, ಸಹಶಿಕ್ಷರು, ಮಕ್ಕಳು, ಗ್ರಾಪಂ ಸಿಬ್ಬಂದಿ ಸಾರ್ವಜನಿಕರಿದ್ದರು.