ದಲಿತ ವ್ಯಕ್ತಿ ಹತ್ಯೆಗೆ ತೀವ್ರ ಖಂಡನೆ
ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಪ್ರತಿಭಟನೆ
ದೇವದುರ್ಗ:ಆ.೨೩: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ವ್ಯಕ್ತಿ ಕೊಲೆಯಾದ ಘಟನೆ ಖಂಡಿಸಿ ಪಟ್ಟಣದ ಮಿನಿವಿಧಾನಸೌಧ ಮುಂದೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
ಸಂಗನಾಳ ಎನ್ನುವ ಗ್ರಾಮದಲ್ಲಿ ದಲಿತ ವ್ಯಕ್ತಿ ಯಮನೂರಪ್ಪ ಈರಪ್ಪ ಬಂಡಿಹಾಳ, ಸಲೂನ್‌ಶಾಪ್‌ನಲ್ಲಿ ಕಟಿಂಗ್ ಮಾಡಿಸಿಕೊಳ್ಳಲು ಹೋಗಿದ್ದ ವೇಳೆ ದಲಿತ ವ್ಯಕ್ತಿ ಎನ್ನುವ ಕಾರಣಕ್ಕೆ ಮುದುಕಪ್ಪ ಆದಪ್ಪ ಎನ್ನುವ ವ್ಯಕ್ತಿ ಕೊಲೆ ಮಾಡಿದ್ದಾನೆ. ಈ ಘಟನೆ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಮಾಡಿದೆ. ಸ್ವಾತಂತ್ರ್ಯ ಗತಿಸಿ ೭೮ವರ್ಷ ಕಳೆದರೂ ಇನ್ನೂ ಜಾತಿ ಪದ್ಧತಿ ಜಾರಿಯಲ್ಲಿರುವುದು ನಾಗರಿಕ ಸಮಾಜ ತಲೆತಗಿಸುವ ವಿಚಾರ ಎಂದು ಆಕ್ರೋಶ ವ್ಯಕ್ತಪಡಿದರು.
ಕೂಡಲೇ ಕೊಲೆ ಆರೋಪಿ ಮುದುಕಪ್ಪ ಆದಪ್ಪನನ್ನು ಬಂಧಿಸಿ ಕಠಿಣ ಶಿಕ್ಷಗೆ ಒಳಪಡಿಸಬೇಕು. ಕೊಲೆಯಾದ ದಲಿತ ವ್ಯಕ್ತಿ ಯಮನೂರಪ್ಪ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಯಮನೂರಪ್ಪ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಬೇಕು. ಮುಂದೆ ರಾಜ್ಯದಲ್ಲಿ ಇಂಘ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆ ಒಗಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿ ಗ್ರೇಡ್-೨ ತಹಸೀಲ್ದಾರ್ ವೆಂಕಟೇಶಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ, ಲಿಂಗಪ್ಪ ಗೌಡೂರು, ಬಸವ ಜಯಂ, ವಿಜಯಕುಮಾರ ಬಲ್ಲಿದವ್, ಮಹಾದೇವಪ್ಪ ಗೌರಂಪೇಟೆ, ರವಿಚಂದ್ರ ಗುಂಟ್ರಾಳ್, ಭೀಮರಾಯ ಭಂಡಾರಿ, ಬುರಪ್ಪ ಮರಡ್ಡಿ, ವೆಂಕಟೇಶ ಜಾಲಹಳ್ಳಿ, ದೇವೇಂದ್ರ ಗುಂಡಗುರ್ತಿ, ಲಕ್ಷ್ಮಣ, ಸಾಬಣ್ಣ ಕೊತ್ತದೊಡ್ಡಿ ಇತರರಿದ್ದರು.
೨೩ಡಿವಿಡಿ-೧