ಸಮುದಾಯ ಭವನ ನಿರ್ಮಾಣ೫ ಕೋಟಿ ಅನುದಾನಕ್ಕೆ ಮನವಿ
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಆ.೨೩:ನಗರದ ಹರಿಜನ ವಾಡಾ ಎನ್‌ಜಿಓ ಕಾಲೋನಿಯಲ್ಲಿ ಡಾ. ಬಾಬಾ ಜಗಜೀವನ್‌ರಾಮ್ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜಕಲ್ಯಾಣ ಇಲಾಖೆಯಿಂದ ೫ ಕೋಟಿ ಅನುದಾನ ಮಂಜೂರು ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಎ. ವಸಂತ್‌ಕುಮಾರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಸಮಾಜಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿ ನಗರದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗದವರು ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.
ಈ ಸಮುದಾಯಗಳ ಸಭೆ-ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಕೈಗೊಳ್ಳಲು ಒಂದು ಸಮುದಾಯ ಭವನ ನಿರ್ಮಾಣ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ನಗರದ ಹರಿಜನ ವಾಡಾ ಎನ್‌ಜಿಓ ಕಾಲೋನಿಯಲ್ಲಿ ಡಾ. ಬಾಬಾ ಜಗಜೀವನ್‌ರಾಮ್ ಸಮುದಾಯ ಭವನ ನಿರ್ಮಾಣಕ್ಕೆ ೨೦೨೪-೨೫ನೇ ಸಾಲಿನ ಅನುದಾನದಲ್ಲಿ ೫ ಕೋಟಿ ರೂ. ಮಂಜೂರು ಮಾಡಬೇಕೆಂದು ವಸಂತ್‌ಕುಮಾರ್ ಮನವಿ ಮಾಡಿದ್ದಾರೆ.