ನಗರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ೪ ವಿಜ್ಞಾನಿಗಳು ಓರ್ವ ಎಸ್‌ಡಿಸಿ ನಿಯೋಜನೆ
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಆ.೨೩:ನಗರದ ಗಣಿ ಮತ್ತು ಭೂ ವಿಜ್ಞಾನಿಗಳ ಕಚೇರಿಯಲ್ಲಿ ಖಾಲಿ ಇರುವ ೪ ಭೂ ವಿಜ್ಞಾನಿಗಳ ಹುದ್ದೆಗೆ ವಿಜ್ಞಾನಿಗಳನ್ನು ನಿಯೋಜನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರಿನ ಭೂ ವಿಜ್ಞಾನ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿರುವ ಅಮೃತಾ. ಕೆ ಹಾಗೂ ಉಡುಪಿ ಹಿರಿಯ ಭೂವಿಜ್ಞಾನಿಯಾಗಿರುವ ಮಹೇಶ್ ಮತ್ತು ಚಾಮರಾಜನಗರದ ಭೂ ವಿಜ್ಞಾನಿ ಮಹದೇವಸ್ವಾಮಿ, ಕೊಪ್ಪಳದ ಭೂ ವಿಜ್ಞಾನಿಯಾಗಿರುವ ಮಹೇಶ್ ಅವರನ್ನು ರಾಯಚೂರು ಭೂ ವಿಜ್ಞಾನ ಇಲಾಖೆಗೆ ವರ್ಗಾಯಿಸಿ ಸರ್ಕಾರ ಆದೇಶಿಸಿದೆ.
ಉಳಿದಂತೆ ರಾಯಚೂರು ಭೂವಿಜ್ಞಾನ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಕಲಬುರಗಿ ಉಪನಿರ್ದೇಶಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರಶೇಖರ್ ಅವರನ್ನು ರಾಯಚೂರು ಭೂವಿಜ್ಞಾನ ಕಚೇರಿಯ ದ್ವಿತೀಯ ದರ್ಜೆ ಸಹಾಯಕರಾಗಿ ನಿಯೋಜನೆ ಮಾಡಲಾಗಿದ್ದು, ಪ್ರಸ್ತುತ ರಾಯಚೂರು ದ್ವಿತೀಯ ದರ್ಜೆ ಸಹಾಕಯ ಭಾಸ್ಕರ್‌ರೆಡ್ಡಿ ಅವರ ಸ್ಥಳಕ್ಕೆ ವರ್ಗಾಯಿಸಿ ವಾಣಿಜ್ಯ ಮತ್ತು ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.