ಟೌನ್ ಹಾಲ್‌ನಲ್ಲಿ ಮೂರು ದಿನ ಉಚಿತ ನಾಟಕ ಪ್ರದರ್ಶನ
ಸಂಜೆವಾಣಿ ವಾರ್ತೆ.
ಸಿಂಧನೂರು ಆ.೨೩: ನಗರದ ಟೌನ್ ಹಾಲ್ ನಲ್ಲಿ ಆಗಸ್ಟ್ ೨೪,೨೫ ,೨೬ ಮೂರು ದಿನಗಳ ಕಾಲ ಸಂಜೆ ೬-೩೦ ಕ್ಕೆ ಉಚಿತ ನಾಟಕ ಪ್ರದರ್ಶನ ಮಾಡಲಾಗುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾ ಅಭಿಮಾನಿಗಳು ಭಾಗವಹಿಸಿ, ಯಶಸ್ವಿ ಗೊಳಿಸಿ ಎಂದು ಸಮುದಾಯ ಸಿಂಧನೂರು ನಾಟಕೋತ್ಸವ ಸಮಿತಿ ಕಾರ್ಯದರ್ಶಿ ಎಸ್.ದೇವೇಂದ್ರ ಗೌಡ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.ಮೊದಲನೇ ದಿನ ಆ.೨೪ ರಂದು ಸಾಹಿತಿ ಎಮ್.ಎಮ್ ಕಲ್ಬುರ್ಗಿ ಹತ್ಯೆ ಕುರಿತಾಗಿ ರಕ್ತ ವಿಲಾಪ ಆ.೨೫ಕ್ಕೆ ಊರು ಸುಟ್ಟರೂ ಹನುಮಪ್ಪ ಹೊರಗೆ’ಆ.೨೬ ರಂದು ಗಿರೀಶ್ ಕಾರ್ನಾಡ್ ರಚಿಸಿದ ’ತಲೆ ದಂಡ’ ನಾಟಕಗಳು ಪ್ರದರ್ಶನ ಆಗುತ್ತವೆ.ಎರಡನೇ ದಿನ ಸಮುದಾಯ ಹಿಂದಿನ ಹೆಜ್ಜೆ ಗಳ ಹೊರಳು ನೋಟ ಕುರಿತಾಗಿ ಚರ್ಚೆ ನಡೆಸಲಾಗುತ್ತದೆಂದು ತಿಳಿಸಿದರು.
ಸಮುದಾಯ ಸಿಂಧನೂರು ಅಧ್ಯಕ್ಷ ಶರಬಣ್ಣ ನಾಗಲಾಪುರ,ಎಂ.ಗೋಪಾಲಕೃಷ್ಣ,ಕಂಠೆಪ್ಪ ಮಟ್ಟೂರು,ನಾಟಕೋತ್ಸವ ಸಮಿತಿ ಅಧ್ಯಕ್ಷ ಸರಸ್ವತಿ ಪಾಟೀಲ್ ಉಪಸ್ಥಿತರಿದ್ದರು.