ಜೇಗರಕಲ್ ಪ್ರೌಢಶಾಲೆ ಎಸ್ ಡಿಎಂಸಿ ರಚನೆ
ರಾಯಚೂರು.ಆ೨೩:
ಇಂದು ರಾಯಚೂರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಜೇಗರಕಲ್‌ನಲ್ಲಿ ಶಾಲಾ ಸುಧಾರಣೆ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಸಂಬಂಧ ಎಸ್‌ಡಿಎಂಸಿ ಪಾಲಕರ ಸಭೆಯನ್ನು ಕರೆಯಲಾಗಿತ್ತು. ಆರಂಭದಲ್ಲಿ ರಾಮಣ್ಣ ಬೋಯೆರ್ ಶಿಕ್ಷಕರು ಎಲ್ಲರನ್ನು ಸ್ವಾಗತಿಸಿ ಎಸ್ ಡಿಎಂಸಿ ಸಮಿತಿ ರಚನೆಯ ಗುರಿ ಉದ್ದೇಶಗಳನ್ನು ತಿಳಿಸಿ ಪ್ರತಿಯೊಬ್ಬರು ಸಮಿತಿ ರಚನೆಯ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಹಸೀನಾ ಬಾನು ಮುಖ್ಯೋಧ್ಯಾಯರು ಮಾತನಾಡಿ ಸರಕಾರಿ ಪ್ರೌಢಶಾಲೆ ಜೇಗರ್ಕಲ್ ಇದು ನಿಮ್ಮ ನಮ್ಮೆಲ್ಲರ ಶಾಲೆಯಾಗಿದ್ದು ಶಾಲೆಯ ಅಭಿವೃದ್ಧಿಗಾಗಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿತಿ ರಚನೆ ಮಾಡುವುದು ಅವಶ್ಯಕವಾಗಿದೆ. ಸಮಿತಿಗೆ ೯ ಜನ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ.
ನಂತರ ಆಯ್ಕೆ ಪ್ರಕ್ರಿಯೆಯನ್ನು ಜಾತಿವಾರು ಹಾಗೂ ಲಿಂಗವಾದ ಪ್ರತಿನಿಧಿಗಳನ್ನು ಮಕ್ಕಳ ತಾಲೂಕು ಪಾಲಕರು ಆಯ್ಕೆ ಮಾಡಿದರು.
ಸದಸ್ಯ ಕಾರ್ಯದರ್ಶಿಗಳಾಗಿ ಹಸಿನಾಬಾನು ಮುಖ್ಯೋಪಾಧ್ಯಾಯರು ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ನರಹರಿರಾವ್ ದೇವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ಎಂ ಗಿರಿಯಪ್ಪ ದಿನ್ನಿ ಶಿಕ್ಷಕರು ವಂದಿಸಿದರು. ಸಮಿತಿ ರಚನೆಯ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಎಸ್‌ಡಿಎಂಸಿಯ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರುಗಳು ಹಾಗೂ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.