ಉಡಿ ತುಂಬುವ ಕಾರ್ಯಕ್ರಮ
ಸಿರವಾರ.ಅ೨೩: ತಾಲೂಕಿನ ಬಾಗಲವಾಡ ವಲಯದ ಎಂ.ಕೆ. ಕಾರ್ಯಕ್ಷೇತ್ರದ ಹರೇಶ್ರೀನಿವಾಸ ಜ್ಞಾನ ವಿಕಾಸ ಕೇಂದ್ರದ ಮಾಸಿಕ ಸಭೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಲಕ್ಷ್ಮಿ ಪೂಜೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳಲಾಯಿತು. ಈ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ವೇಣುಗೋಪಾಲ ಉಪಸ್ಥಿತಿಯಲ್ಲಿ ಸದಸ್ಯರಿಗೆ ಮತ್ರೋಶ್ರೀ ಹೇಮಾವತಿ ಅಮ್ಮನವರ ಜ್ಞಾನ ವಿಕಾಸ ಕಾರ್ಯಕ್ರಮಗಳಾದ ಮಾಶಾಸನ ಜಲಮಂಗಳ ವಾತ್ಸಲ್ಯ ಕಾರ್ಯಕ್ರಮ ಇನ್ನೂ ಹಲವಾರು ವಿಷಯಗಳ ಬಗ್ಗೆ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮತ್ತು ಸರ್ವ ಸದಸ್ಯರ ಪ್ರಬುದ್ಧತೆಯ ನಮ್ಮ ಬದ್ಧತೆ ಎನ್ನುವ ನಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಈ ವರ್ಷದ ಘೋಷ ವಾಕ್ಯದ ಬಗ್ಗೆ ಸದಸ್ಯರಿಗೆ ಮಾಹಿತಿ ಮಾರ್ಗದರ್ಶನ ನೀಡಿದರು.ಸದ್ರಿ ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಜ್ಯೋತಿ, ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಗೀತಾ, ಒಕ್ಕೂಟದ ಅಧ್ಯಕ್ಷೆ ಲಲಿತಮ್ಮ ಮತ್ತು ಕೇಂದ್ರದ ಸದಸ್ಯರು ಇದ್ದರು.