ಜೆಡಿಎಸ್ ರೈತ ಘಟಕದ ನೂತನ ತಾ.ಅಧ್ಯಕ್ಷರಾಗಿ ಜಿ.ಪಿ.ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಆ.23:- ಜಾತ್ಯಾತೀತ ಜನತಾದಳದ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲ್ಲೂಕು ರೈತ ಘಟಕ
ನೂತನ ಅಧ್ಯಕ್ಷರಾಗಿ ಜಿ.ಪಿ.ಮಂಜು ಅವರನ್ನು ನಿಯುಕ್ತಿಗೊಳಿಸಿ ಮಾಜಿ ಸಚಿವರಾದ ಸಾ.ರಾ.ಮಹೇಶ್ ಆದೇಶ ಪತ್ರವನ್ನು ನೀಡಿದ್ದಾರೆ.
ನೂತನ ಅಧ್ಯಕ್ಷ ಆದೇಶ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಇದು ನೀಡಿರುವುದು ಹುದ್ದೆ ಅಲ್ಲ ಸಾಮಾಜಿಕ ಜವಾಬ್ದಾರಿಯ ಹೊಣೆಗಾರಿಕೆಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಾ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಸದೃಢಗೊಳಿಸುತ್ತಾ ಮುಂಬರುವ ಎಲ್ಲಾ ರೀತಿಯ ಪಕ್ಷದ ಹಾಗೂ ರೈತ ಸವಾಲುಗಳನ್ನು ಧ್ವನಿ ಎದುರಿಸಲು ಶ್ರಮಿಸುತ್ತ ಪಕ್ಷಕ್ಕೆ ಯಾವುದೇ ರೀತಿಯ ಚ್ಯುತಿ ಬಾರದಂದೆ ಕಾರ್ಯನಿರ್ವಹಿಸುತ್ತ ಹಾಗೂ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ನಮ್ಮ ನಾಯಕರಾದ ಮಾಜಿ ಸಚಿವರು ಸಾ.ರಾ.ಮಹೇಶ್ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪುರಸಭಾ ಸದಸ್ಯ ಉಮೇಶ್, ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಬಿಜೆಪಿ ಮುಖಂಡ ಹೊಸಹಳ್ಳಿ ವೆಂಕಟೇಶ್, ಮುಖಂಡರಾದ ಮಿರ್ಲೆ ರಾಧಾಕೃಷ್ಣ, ಸೇರಿದಂತ ಪಕ್ಷದ ಮುಖಂಡರು ಹಾಜರಿದ್ದರು.