2.81 ಲಕ್ಷ ರೂ. ಮೌಲ್ಯದ ಅವಧಿ ಮೀರಿದ 1188 ಲೀಟರ್ ಬಿಯರ್ ನಾಶ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ. 23-ನಗರದ ಹೊರ ವಲಯದಲ್ಲಿರುವ ಬದನಗುಪ್ಪೆ- ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ಪಾನೀಯ ನಿಗಮದಲ್ಲಿ ವಾಯಿದೆ ಮೀರಿ ಮತ್ತು ಮಾನವ ಸೇವನೆಗೆ ಯೋಗ್ಯವಲ್ಲದ 2.81 ಲಕ್ಷ ರೂ. ಮೌಲ್ಯದ 1188.670 ಲೀಟರ್ ಬಿಯರ್‍ನ್ನು ನಾಶಪಡಿಸಲಾಯಿತು.
ಚಾಮರಾಜನಗರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ.ಡಿ. ಮೋಹನ್‍ಕುಮಾರ್ ನೇತೃತ್ವದಲ್ಲಿ, ಅಬಕಾರಿ ನಿರೀಕ್ಷಕ ಉಮಶಂಕರ್ ಹಾಗು ಸಿಬ್ಬಂದಿಗಳು 2,81, 794ರೂ. ಮೌಲ್ಯದ ಬಿಯಾರ್‍ನ್ನು ನೆಲಕ್ಕೆ ಸುರಿಯುವ ಮೂಲಕ ನಾಶಪಡಿಸಿದರು.
ಈ ಸಂದರ್ಭದಲ್ಲಿ ಪಾನೀಯ ನಿಗಮದ ಇನ್ಸ್‍ಪೆಕ್ಟರ್ ಗುರುನಾಥಶೆಟ್ಟಿ, ನಿಗಮದ ವ್ಯವಸ್ಥಾಪಕ ಎಂ.ಎಸ್.ಎಸ್. ಪ್ರಸಾದ್, ಅಬಕಾರಿ ಉಪ ನಿರೀಕ್ಷಕಿ ಬಿ.ಪಿ. ನಂದಿನಿ, ಗ್ರಾಮ ಆಡಳಿತಾಧಿಕಾರಿಗಳಾದ ಎಸ್. ರಮೇಶ್, ರಾಜೇಂದ್ರ ಪ್ರಸಾದ್, ಪಾನೀಯ ನಿಗಮದ ಸಿದ್ದರಾಜು ಇತರರು ಇದ್ದರು.