ನಿವೃತ್ತ ಎಸ್‌ಡಿ,ಸಿ ಪುರುಷೋತ್ತಮ್‌ಗೆ ಸನ್ಮಾನ
ಕೋಲಾರ,ಆ.೨೩: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸುಮಾರು ೩೩ ವರ್ಷ ೩ ತಿಂಗಳು ೯ ದಿನಗಳ ಕಾಲ ಕಾರ್ಯನಿರ್ವಹಿಸಿ ನಿವೃತ್ತರಾದ ಪುರುಷೋತ್ತಮ ಅವರನ್ನು ಸನ್ಮಾನಿಸಲಾಯಿತು.
ಪುರುಷೋತ್ತಮ ಅವರು ಮಹಿಳಾ ಇಲಾಖೆಯಲ್ಲಿ ಶ್ರದ್ದೆ ಹಾಗೂ ಭ್ರಷ್ಟಚಾರ ರಹಿತವಾಗಿ ಪ್ರಮಾಣಿಕತೆಯಿಂದ ಕೆಲಸ ನಿರ್ವಹಿಸಿ ಮಹಿಳೆಯರ ಬಗ್ಗೆ ಅಪಾರ ಗೌರವವನ್ನಿಟ್ಟು ಎಲ್ಲಾ ಅಂಗನವಾಡಿ ನೌಕರರನ್ನು ಅಕ್ಕತಂಗಿಯರಂತೆ ಭಾವಿಸಿ ಕಳೆದ ೩೧ ರಂದು ನಿವೃತ್ತಿ ಹೊಂದಿರುವುದಕ್ಕೆ ಇವರ ಪ್ರಮಾಣಿಕ ಸೇವೆಯನ್ನು ಗುರುತಿಸಿ ಪ್ರಜಾ ಸೇವಾ ಸಮಿತಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ ಅವರ ನಿಯೋಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಇಂದು ಪುರುಷೋತ್ತಮ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೋಲಾರ ಸಿ.ಡಿ.ಪಿ.ಓ ವಿನೋದ್ ಕುಮಾರ್, ಉಪ ನಿರ್ದೇಶಕರ ಕಚೇರಿಯ ಅಧೀಕ್ಷಕ ನಾಗರಾಜ್, ಸಮಿತಿಯ ಮುಖಂಡರುಗಳಾದ ವಿ.ನಿರ್ಮಲಾಬಾಯಿ, ನಾಗವೇಣಮ್ಮ, ಡಿ.ಎನ್.ಗಂಗರತ್ನಮ್ಮ, ವಿ.ಜಮುನಾರಾಣಿ, ಕುರಗಲ್ ಸುಧಾ, ಕಚೇರಿಯ ಸಿಬ್ಬಂದಿಗಳಾದ ವಿಶ್ವನಾಥ್, ಸಂಗೀತ, ಕಾವ್ಯ, ವೆಂಕಟೇಶ್, ನಾರಯಣಗೌಡ ಇದ್ದರು.