ಎಸ್‌ಸಿಎಸ್‌ಟಿ. ಕಾಮಗಾರಿಗಳ ಹಂಚಿಕೆ ವಂಚನೆ,ಅರೋಪ
ಕೋಲಾರ,ಆ,೨೩- ಒಂದು ಕೋಟಿ ರೂ ವರೆಗಿನ ಟೆಂಡರ್ ಕಾಮಗಾರಿಗೆ ಮೀಸಲಾತಿಗೆ ರಾಷ್ಟಪತಿಗಳಿಂತ ಅಂಕಿತವಾಗಿದ್ದರೂ ಸಹ ಸರ್ಕಾರವು ೪ಜಿ ಸಂಸ್ಥೆಗಳ ಮೂಖೇನ ಕಾಮಗಾರಿಗಳನ್ನು ನೀಡಿ ಪರಿಶಿಷ್ಟಜಾತಿ ಮತ್ತು ಪಂಗಡದೆ ಗುತ್ತಿಗೆದಾರರಿಗೆ ವಂಚಿಸಲಾಗುತ್ತಿದೆ ಎಂದು ಜಿಲ್ಲಾ ಎಸ್.ಸಿ. ಎಸ್.ಟಿ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾರ್ಜೇನಹಳ್ಳಿ ಬಾಬು.ವಿ.ಆರೋಪಿಸಿದರು,
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಸರ್ಕಾರವು ಸ್ವಾವಲಂಭಿಗಳನ್ನಾಗಿ ಮಾಡುವ ದಿಸೆಯಲ್ಲಿ ೫೦ ಲಕ್ಷದ ವರೆಗೆ ಇದ್ದ ಮೀಸಲಾತಿ ಕಾಮಗಾರಿಯನ್ನು ೧ ಲಕ್ಷದವರೆಗೆ ಏರಿಕೆ ಮಾಡಿದೆ. ಎಸ್.ಸಿ.ಎಸ್.ಟಿ. ಹಾಗೂ ಓಬಿಸಿ ವರ್ಗದವರೆಗೆ ಮೀಸಲಾತಿ ಮುಂದುವರೆಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದನ್ನು ಸ್ಥಳೀಯ ಮುಖಂಡರು ದುರ್‍ಬಳಿಸಿ ಕೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು,
ಸರ್ಕಾರದ ಅದೇಶವನ್ನು ಕಳೆದ ೬-೭ ತಿಂಗಳಿಂದ ಅನುಷ್ಟಾನಕ್ಕೆ ತರಾದೆ ಹೋದ ಸಂದರ್ಭದಲ್ಲಿ ಗುತ್ತಿದಾರರ ಸಂಘಟನೆಯು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದಾಗ ಸರ್ಕಾರವು ಅನುಷ್ಟನಕ್ಕೆ ಅದೇಶಿಸಿತು, ಅದರೆ ಜಿಲ್ಲಾಡಳಿತವು ಕಾಮಗಾರಿಗಳನ್ನು ಭೂಸೇನಾ ನಿಗಮ ಹಾಗೂ ನಿರ್ಮಿತಿ ಕೇಂದ್ರಗಳ ಮೂಲಕ ಹಂಚಿಕೆಗೆ ಮುಂದಾಗಿದೆ. ಗುತ್ತಿಗೆ ಪರವಾನಗಿ ಹೊಂದಿರುವರರೂ ಸುಮಾರು ೩೦೦ ಮಂದಿ ಇದ್ದರೂ ಸಹ ಅವರಿಗೆ ನೀಡದೆ ಭೂ ಸೇನಾ ನಿಗಮ ಮತ್ತು ನಿರ್ಮಿತಿ ಕೇಂದ್ರಗಳಿಗೆ ನೀಡಿರುವುದ ಗುತ್ತಿಗೆದಾರರ ಪಾಲಿಗೆ ಊಟವನ್ನು ನೀಡಿ ನಂತರ ಕಸಿದು ಕೊಂಡಂತೆ ಅಗಿದೆ ಎಂದು ಉದಾಹರಿಸಿದರು
ಕೆ.ಆರ್.ಡಿ.ಎಲ್ ಮತ್ತು ನಿರ್ಮಿತಿ ಕೇಂದ್ರ ಸಂಸ್ಥೆಗಳಿಗೆ ನಗರಾಭಿವೃದ್ದಿ ಪ್ರಾಧಿಕಾರವು ಕೊಡ ಬಡಾವಣೆಯ ಮೂಲಭೂತ ಸೌಲಭ್ಯಗಳ ಕಾಮಗಾರಿಗ ೯೮೦ ಲಕ್ಷ ರೂ ಕಾಗಾರಿಗಳನ್ನು ವರ್ಗಾವಣೆ ಮಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಅನ್ಯಾಯ ಮಾಡಲು ಮುಂದಾಗಿದೆ, ಇದೇ ರೀತಿ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯದಲ್ಲಿನ ಟೆಂಡರ್‌ಗಳನ್ನು ಇದೇ ರೀತಿ ವಂಚಿಸಲಾಗಿದೆ ಎಂದು ದೂರಿದರು,
ಸಂಬಂಧವಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಚರ್ಚಿಸಿ ಸಾಮಾಜಿಕ ನ್ಯಾಯ ದೊರಕಿಸದಿದ್ದರೆ ಬೃಹತ್ ಪ್ರತಿಭಟನೆಯ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ಎಚ್ಚರಿಸಿದರು,
ಸುದ್ದಿಗೋಷ್ಟಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ವೆಂಕಟರೆಡ್ಡಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಕಿರಣ್.ವಿ. ಹಾಗೂ ಖಜಾಂಜಿ ಕೃಷ್ಣಪ್ಪ ಉಪಸ್ಥಿತರಿದ್ದರು,