ದೇಶಕ್ಕೆ ಯುವಕರ ಕೊಡುಗೆ ಅಗತ್ಯ: ಮಹಾಪೌರ ಯಲ್ಲಪ್ಪ ನಾಯ್ಕೋಡಿ
ಕಲಬುರಗಿ:ಆ.22: ದೇಶಕ್ಕೆ ಯುವಕರ ಕೊಡುಗೆ ಅಗತ್ಯವಾಗಿದೆ ಎಂದು ಮಹಾಪೌರ ಯಲ್ಲಪ್ಪ ನಾಯ್ಕೋಡಿ ಅವರು ಹೇಳಿದರು.
ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಐಕ್ಯೂಎಸಿ ಪ್ಲೇಸ್‍ಮಂಟ್ ಸೆಲ್, ಸಾಂಸ್ಕøತಿಕ ಸಮಿತಿ ಸಂಯೋಜನೆಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಸಂಶೋಧನಾ ವಿಧಾನ, ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕೌಶಲ್ಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ದೇಶಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕ ಡಾ. ರಮೇಶ್ ರಾಠೋಡ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಭಾಷೆಯ ಬಗ್ಗೆ ಗೌರವ ಇರಬೇಕು. ಕನ್ನಡ ಭಾಷೆಯು ಪ್ರಾಚೀನವಾದದು, ಇದರಿಂದ ಭಾಷೆಯ ಅವಲೋಕನವನ್ನು ತಿಳಿದುಕೊಳ್ಳಬೇಕೆಂದರು, ಇನ್ನೋರ್ವ ಮುಖ್ಯ ಅತಿಥಿ ಪ್ರಾದೇಶಿಕ ಕಚೇರಿಯ ಜಂಟಿ-ನಿರ್ದೇಶಕ ಪ್ರೊ. ಶಿವಶರಣ್ ಬಿ. ಗೊಳ್ಳೆಯವರು ಮಾತನಾಡಿ, ವಿದ್ಯಾರ್ಥಿಗಳು ಸಂಶೋಧನ ವಿಧಾನ ಮತ್ತು ವ್ಯಕ್ತಿತ್ವ ವಿಕಸನ ಮತ್ತು ಸಂವಹನದ ಕುರಿತು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದರು..
ಪ್ರಿನ್ಸಿಪಾಲ್ ಡಾ. ಸವಿತಾ ತಿವಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಡಾ. ವಿಜಯಕುಮಾರ್ ಸಾಲಿಮನಿ, ಡಾ. ರಾಜಕುಮಾರ್ ಸಲಗರ್, ಡಾ. ಟಿ.ವಿ. ಅಡಿವೇಶ್, ಡಾ. ಮಲ್ಲೇಶಪ್ಪ ಕುಂಬಾರ್, ಡಾ. ಬಲಭೀಮ್ ಸಾಂಗ್ಲಿ, ಡಾ. ಶಾರದಾದೇವಿ ಜಾಧವ್, ಡಾ. ವಿಜಯಲಕ್ಷ್ಮಿ ಬಿರಾದಾರ್, ಡಾ. ರೋಲೆಕರ್ ನಾರಾಯಣ್, ಡಾ.ವಿಜಯಲಕ್ಷ್ಮಿ ಪಾಟೀಲ್, ಡಾ. ಪ್ರಶಾಂತಕುಮಾರ್, ಡಾ. ರಾಜಶೇಖರ್ ಮಡಿವಾಳ್, ಡಾ. ಮಹಾಂತೇಶ್ ಸ್ವಾಮಿ, ಡಾ. ಅರುಣಕುಮಾರ್ ಸಲಗರ್, ಡಾ. ರಾಬಿಯಾ ಇಫ್ಫತ್, ಡಾ.ಸುರೇಶ್ ಮಾಳೆಗಾಂವ್, ಡಾ. ರಾಮಕೃಷ್ಣ, ಡಾ. ದೌಲಪ್ಪ, ಡಾ. ಚಿವುಕುಲ ಶ್ರೀಕಾಂತ್, ಡಾ. ಚಂದ್ರಕಾಂತ್ ಜಮಾದಾರ್, ಡಾ. ಶಿವಲಿಂಗಪ್ಪ ಪಾಟೀಲ್, ಡಾ. ರೆಹಮಾನ್ ಮಹ್ಮದಸಾಬ್, ಡಾ. ನಾಗಪ್ಪ ಗೋಗಿ, ಡಾ. ಶಾಮಲಾ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜರುಗಿದ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಚಾಂದಬಾಷ್ ಎಂ, ಡಾ. ಗಣಪತಿ ಬಿ. ಸಿನ್ನೂರ್, ಡಾ. ಪದ್ಮಾವತಿ ಧನ್ನಿಯವರು ವಿಷಯ ಮಂಡಿಸಿದರು. ವಿದ್ಯಾರ್ಥಿನಿ ಶುಭ ಅವರು ಪ್ರಾರ್ಥಿಸಿದರು. ಡಾ. ರಾಜಕುಮಾರ್ ಸಲಗರ್ ಅವರು ಸ್ವಾಗತಿಸಿದರು, ಡಾ. ಮಲ್ಲೇಶಪ್ಪಾ ಕುಂಬಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಲಭೀಮ್ ಸಾಂಗ್ಲಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.