ಫೋಕ್ಸೋ ಕಾಯ್ದೆಯಡಿ ಹೆಚ್ಚಿನ ಪ್ರಕರಣ ದಾಖಲಾಗುತ್ತಿಲ್ಲ:ಆಯೋಗ ಸದಸ್ಯೆ ಅಪರ್ಣಾ ಎಮ್ ಕೊಳ್ಳಾ
ಕಲಬುರಗಿ:ಆ.22: ಇತ್ತೀಚಿನ ದಿನಗಳಲ್ಲಿ ಫೋಕ್ಸೋ ಕಾಯ್ದೆಗಳು, ಶಾಲೆ ಬಿಟ್ಟಿ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಮ್ ಕೊಳ್ಳಾ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪೋಕ್ಸೋ ಕಾಯ್ದೆಯಡಿ ಪೋಲಿಸ್ ಅಧಿಕಾರಿಗಳು ಎಫ್.ಐ.ಆರ್ ಹೆಚ್ಚಿನ ಜನರ ಮೇಲೆ ಹಾಕಬೇಕು ಎಂದು ಅವರು ತಿಳಿಸಿದರು.
ಪೋಕ್ಸೋ.ಬಾಲ್ಯವಿವಾಹ, ಶಾಲೆ ಬಿಟ್ಟ ಮಕ್ಕಳಿಗೆ ಜಾಗೃತಿ ಮೂಡಿಸಿದರೆ ಕೆಲಸ ಆಗುವುದಿಲ್ಲ ಅದರ ಜೊತೆಗೆ ತರಬೇತಿ ನೀಡುವುದು ಇದರ ಮುಖ್ಯ ಉದ್ದೇಶ ಎಂದು ತಿಳಿಸಿದರು.
ನಿನ್ನೆ ಜೇವರ್ಗಿಯ ಒಂದು ಶಾಲೆಗಳಿಗೆ ಭೇಟಿ ನೀಡಿದ್ದಾಗ ಕೆಲವೊಂದು ವಿಷಯಗಳನ್ನು ನಾನು ತಿಳಿದುಕೊಂಡೆ ಕೋಣೆಯ ಅವ್ಯವಸ್ಥೆಯಿಂದ ಮಕ್ಕಳ ನೆಲದ ಮೇಲೆ ಕುಳಿತು ಪಾಠ ಹೇಳುವುದನ್ನು ನಾನು ನೋಡಿದ್ದೇನೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿಬೇಕು ನೆಲದ ಮೇಲೆ ಕೂಡಿಸಿ ಪಾಠ ಹೇಳಕೂಡದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಪ್ರತಿಯೊಬ್ಬ ಸ್ಥಳೀಯ ಮುಖ್ಯೋಪಾಧ್ಯಯರು ಬಾಲ್ಯವಿವಾಹ ನಿಷೇಧ ಅಧಿಕಾರಿಯಾಗಿದ್ದು, ಬಾಲ್ಯವಿವಾಹದಲ್ಲಿ ಅವುಗಳ ಜವಬ್ದಾರಿಯಾಗಿರುತ್ತೀರಿ ಮಕ್ಕಳಿಗೆ ಶಾಲೆ ಬಿಡದ ಹಾಗೆ ನೋಡಿಕೊಳ್ಳಬೇಕು ಶಾಲೆಬಿಟ್ಟಲ್ಲಿ ಅವರ ಮನೆಹೋಗಿ ಅವರು ಕರೆತರುವ ಪ್ರಯತ್ನ ಮಾಡಬೇಕೆಂದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಮಕ್ಕಳಿಗೆ ಅಷ್ಟೆ ಅರಿವು ನೀಡಿದರೆ ಸಾಲದು ಪಾಲಕ-ಪೋಷಕರಿಗೆ ಅರಿವು ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಯಿಂದಿರು ಕಿಶೋರಿಯರು ಸಭೆಗಳಾಗಿ ಕಡ್ಡಾಯವಾಗಿ ಎಲ್ಲ ಗ್ರಾಮಗಳಲ್ಲಿ ಆಯೋಜಿಸಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ತಾಯಿಂದರ ಕಿಶೋರ ಸಭೆಯಲ್ಲಿ ಆಯೋಜಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಬಾಲಕಾರ್ಮಿಕರು ಇತ್ತೀಚಿಗೆ ಅತಿ ಹೆಚ್ಚು ಕಂಡುಬಂದಿದೆ ಕೇವಲ ಅರಿವು ಮೂಡಿಸಿದರೆ ಸಾಲದು ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ಪ್ರಕರಣಗಳನ್ನು ದಾಖಲೆ ಮಾಡಬೇಕೆಂದರು.
ಸಾರಿಗೆ ಇಲಾಖೆ ಶಿಕ್ಷಣ ಇಲಾಖೆಯ ಉಪನಿರ್ದೇಶರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಮಕ್ಕಳಿಗೆ ಶಾಲಾ ಹೋಗಿ ಬರಲು ಬಸ್ಸು ಕೊರತೆ ಉಂಟಾದಲ್ಲಿ ಕೂಡಲೆ ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಾರಿಗೆ ವ್ಯವಸ್ಥೆ ಕಲ್ಪಿಸಿಲು ತಿಳಿಸಿದರು.
ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪೋಲಿಸರು ಸ್ವಯಂ ಪೇರಿತ ದೂರದಾಖಲಿಸಿಕೊಳ್ಳಬಹುದು ಎಂದು ತಿಳಿಸಿದರು.
ಕೃಷಿ ಹೊಂಡಗಳ ಇದ್ದಲ್ಲಿ ಬೇಲಿ ಹಾಕಿ ಮಕ್ಕಳು ಬೀಳದ ಹಾಗೆ ಬೇಲಿ ಹಾಕಿ ಎಚ್ಚರವಹಿಸಿಬೇಕು ಈ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೂಕ್ತ ಗಮನ ಹರಿಸಬೇಕು ಹಾಗೂ ವಿದ್ಯುತ್ ತಂತಿಗಳು ಎಲ್ಲಿಯಾದರು ಕಂಡು ಬಂದಲ್ಲಿ ಜೆಸ್ಕಾಂ ಅಧಿಕಾರಿಗಳು ಕ್ರಮವಹಿಸಲು ಸೂಚಿಸಿದರು.
ಶಾಲೆಯ ಮಕ್ಕಳಿಗೆ ಪೌಷ್ಟಿಕತೆಯ ಆಹಾರ ನೀಡದೆ ಇರುವುದು ಕಂಡು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಬಾಲ್ಯವಿವಾಹವನ್ನು ತಡೆಗಟ್ಟಲು ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ ಇಲಾಖೆ ಇಂದ ಸಾಧ್ಯವಿಲ್ಲ ಎಲ್ಲಾ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಒಗಟ್ಟಿನಿಂದ ಕೆಲಸ ಮಾಡಿದ್ದಲ್ಲಿ ಬಾಲ್ಯವಿವಾಹ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು
ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಶ್ರೀನಿವಾಸ ನವಲೆ ಅವರು ಮಾತನಾಡಿ ಫೊಕ್ಸೋ ಕಾಯ್ದೆಯಡಿ ಒಂದು ಸಲ ಯಾರದರೂ ಒಂದು ಕೇಸನಲ್ಲಿ ಬಂಧನವಾದರೆ ಬಿಡುಗಡೆಯಾಗುವುದು ಅಷ್ಟು ಸುಲಭವಲ್ಲ. ಕೇಂದ್ರ ಕಾರಾಗೃಹದಲ್ಲಿ ಬಂಧಿತರಾದಂತ ವ್ಯಕ್ತಿಗಳಲ್ಲಿ ಅತಿ ಹೆಚ್ಚಿನವರು ಚಿಕ್ಕವಯಸಿನವರಾಗಿದ್ದಾರೆ. ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಗಳು ಪ್ರಮಾಣಿಕವಾಗಿ ಕೆಲಸ ನಿರ್ವಹಿಸಿದೆಯಿದ್ದಲ್ಲಿ ಅಂತಹ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಆಗ ಮಾತ್ರ ಬೇರೆಯವರಿಗೆ ಒಂದು ಪಾಠವಾಗುತ್ತದೆ.ಇಂದಿನ ಮಕ್ಕಳ ನಾಳೆಯ ದೇಶ ಕಟ್ಟುವ ನಾಯಕರು ಹಾಗಾಗಿ ಅವರಿಗೆ ಒಳ್ಳೆಯ ರೀತಿಯಾಗಿ ಶಿಕ್ಷಣ ನೀಡಬೇಕು ಎಂದು ಹೇಳಿದರು.
ವೇದಿಕೆ ಮೇಲೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್.ಪಿ. ಎನ್. ಶ್ರೀನಿಧಿ, ಎ.ಎಸ್.ಪಿ. ಬಿಂದುಮಣಿ, ಎ.ಸಿ.ಪಿ. ಚಂದ್ರಶೇಖರ ಜಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೂರ್ಯಕಾಂತ ಮದಾನೇಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ರಾಜಕುಮಾರ ರಾಠೋಡ, ಕಾರ್ಯಕ್ರಮ ನಿರೂಪಣೆಗಾರರು ಮುರಗೇಶ ಗುಣಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ, ಕಾನೂನು ಅಧಿಕಾರಿ ಭರತೇಶ ಉಪಸ್ಥಿತರಿದ್ದರು.