ಪಾರ್ಥೇನಿಯಂ ಕಳೆ ನಿರ್ವಹಣೆಯಿಂದ ಬೆಳೆಗಳಲ್ಲಿ ಇಳುವರಿ ಹೆಚ್ಚಳ
ವಿಜಯಪುರ ಆ.22: ವಿವಿಧ ಬೆಳೆಗಳಲ್ಲಿ ತೀವ್ರ ತೊಂದರೆಯನ್ನುಂಟು ಮಾಡುವ ಹಾಗೂ ಅದರಿಂದ ಲಕ್ಷಾಂತರ ಬೀಜಗಳನ್ನು ಉತ್ಪಾದಿಸಿ, ಬೆಳೆಗಳ ಜೊತೆ ತೀವ್ರ ಪೈಪೋಟಯೊಡ್ಡಿ, ಇಳುವರಿ ಕಡಿಮೆ ಮಾಡುವ ಪಾರ್ಥೇನಿಯಂ ನಿರ್ಮೂಲನೆಗೆ ಪಣ ತೊಡುವ ಸಂಕಲ್ಪ ಮಾಡೋಣ ಎಂದು ಕೃಷಿ ಮಹಾವಿದ್ಯಾಲಯ ಡೀನ್ ಡಾ. ಎ. ಭೀಮಪ್ಪ ಹೇಳಿದರು.
ಅವರಿಂದು ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡ ಪಾರ್ಥೇನಿಯಂ ನಿರ್ಮೂಲನಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಕಳೆಯು ಒಂದು ಪ್ರದೇಶದಿಂದ ಇನ್ನೊಂದು ಕಡೆ ಹರಡದÀಂತೆ ನೋಡಿಕೊಳ್ಳಬೇಕು. ಸಾಮೂಹಿಕವಾಗಿ ಎಲ್ಲರೂ ಇದರ ನಿರ್ಮೂಲನೆಗೆ ಜಾಗೃತಿ ಕಾರ್ಯಕ್ರಮದ ಮೂಲಕ ನಿರ್ವಹಣೆ ಮಾಡಬೇಕು ಎಂದರು. ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಎಸ್. ಸಜ್ಜನ ಮಾತನಾಡಿ, ಧಾರವಾಡ ಕೃಷಿ ವಿವಿ ಅಧೀನದಲ್ಲಿ ಬರುವ ಪ್ರತಿ ಸಂಶೋಧನಾ ಕೇಂದ್ರಗಳಲ್ಲಿ, ಈ ಕಳೆ ನಿರ್ವಹಣೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ದುಷ್ಪರಿಣಾಮ ಬೀರುವ ಈ ಕಳೆಯನ್ನು ಸಾಮೂಹಿಕವಾಗಿ ನಿರ್ಮೂಲನೆ ಮಾಡುವ ಸಂಕಲ್ಪ ಹೊಂದಲಾಗಿದ್ದು, ಅದಕ್ಕಾಗಿ ಎಲ್ಲ ಸಿಬ್ಬಂದಿಗಳನ್ನು ಈ ಮಹತ್ಕಾರ್ಯಕ್ಕೆ ತೊಡಗಿಸಿಕೊಳ್ಳಲಾಗಿದೆ, ಅದಕ್ಕಾಗಿ ಎಲ್ಲರು ಈ ಕಳೆ ನಿರ್ಮೂಲನೆಗೆ ಕಂಕಣಬದ್ದರಾಗಬೇಕು ಎಂದರು. ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಈ ಕಳೆಯು ಯಾವುದೇ ಹವಾಗುಣ, ಮಣ್ಣಿನಲ್ಲಿ ಬಂಜರು, ಬರಡು, ಫಲವತ್ತತೆಗೆ ಹೊಂದಿಕೊಡು ಬೆಳೆಯುವ ಸಾಮಥ್ರ್ಯ ಹೊಂದಿದೆ. ಇದು ಬೆಳೆಯದ ಪ್ರದೇಶವೇ ಇಲ್ಲ ಅಂದರೆ ರಸ್ತೆಪಕ್ಕ, ಬೀಳುಜಮೀನು, ಮನೆಯ ಸುತ್ತ ಹೀಗೆ ಎಲ್ಲ ಜಾಗದಲ್ಲೂ ಬೆಳೆಯುವ ಶಕತ್ತಿಯುತವಾದ ಕಳೆಯಾಗಿದ್ದು, ಈ ಕಳೆಯ ಬೀಜಗಳು ಬಿತ್ತುವ ಬೀಜ/ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರಣವಾಗದಂತೆ ನೋಡಿಕೊಳ್ಳಬೇಕೆಂದರು. ಪಾರ್ಥೇನಿಯಂ ನಿರ್ಮೂಲನಾ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ವಿಜ್ಞಾನಿ ಡಾ. ಮಿಲಿಂದ ಪೋತದಾರ, ಉಪ ಕೃಷಿ ನಿರ್ದೇಶಕ ಡಾ. ಬಾಲರಾಜ ಬಿರಾದಾರ, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಡಾ. ಎಸ್. ಬಿ. ಜಗ್ಗಿನವರ, ಡಾ. ಎಸ್. ಎಸ್. ಕರಭಂಟನಾಳ, ಡಾ. ಎ. ಕೆ. ಅಥೋನಿ, ಡಾ. ಜಿ. ಎಸ್. ಯಡಹಳ್ಳಿ, ಡಾ. ಎಸ್. ಎ. ಬಿರಾದಾರ, ಡಾ. ಎಸ್. ಬಿ. ಪಾಟೀಲ, ಡಾ. ವಿವೇಕ ದೇವರನಾವದಗಿ, ಡಾ. ಬಸಮ್ಮ ಕುಂಬಾರ, ಡಾ. ಸವಿತಾ , ಡಾ. ಬಾಬರ ಸಾಧನಾ ಆರ್., ಡಾ. ಸಿ. ಡಿ. ಸೋರೆಗಾಂವ, ಡಾ. ಮಲ್ಲಿಕಾರ್ಜುನ ಗದ್ದನಕೇರಿ, ಸವಿತಾ ಕಂಠಿ, ಶಿಕ್ಷಕೇತರ ಸಿಬ್ಬಂದಿಗಳಾದ ತುಕರಾಮ ಚಲವಾದಿ, ಅಖಂಡಪ್ಪ ಕೊರ್ತಿ, ಬಸವರಾಜ ಪಡನಾಡ, ಮಲ್ಲು ಕಗ್ಗೋಡ, ಮಹಾದೇವ ಸಾರವಾಡ, ರಾಜು ಕಾಮರೆಡ್ಡಿ, ಎಲ್. ಎಸ್. ಚಂದುಗೋಳ, ಅರುಣ ಕಾಂಬಳೆ, ಕಾಂತು, ಜ್ಯೋತಿ ಕೆ., ಶಿಲ್ಪರಾಣಿ, ರೇಣುಕಾ ಶಿರಸಗಿ ಸೇರಿದಂತೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಮಹಾವಿದ್ಯಾಲಯ, ಅಖಿಲ ಭಾರತ ಸಮನ್ವಿತ ಯೋಜನೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು, ಕೃಷಿ ಕಾರ್ಮಿಕರು ಪಾರ್ಥೇನಿಯಂ ನಿರ್ಮೂಲನಾ ಸಪ್ತಾಹ ಆಚರಣೆಯಲ್ಲಿ ಪಾಲ್ಗೊಂಡಿದ್ದರು.