ರೈತರ ಬೇಡಿಕೆಗಳ ಈಡೇರಿಕೆಗೆ ಮುಖ್ಯಮಂತ್ರಿಗಳಿಗೆ ಮನವಿ
ವಿಜಯಪುರ:ಆ.22: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯಪುರ ಜಿಲ್ಲಾಧ್ಯಕ್ಷರು ಶ್ರೀವಿಜಯ ಪೂಜಾರ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಅವರಿಗೆ ಆಲಮಟ್ಟಿಯಲ್ಲಿ ರೈತರ ಬೇಡಿಕೆಗಳ ಕುರಿತು ಹಕ್ಕೊತ್ತಾಯದ ಮನವಿ ಸಲ್ಲಿಸಲಾಯಿತು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀವಿಜಯ ಪೂಜಾರ ಮಾತನಾಡಿ ಭಾರತ ಕೃಷಿ ಪ್ರಧಾನವಾದ ದೇಶ ಅತಿಹೆಚ್ಚು ಶೇ 80% ಜನರು ಕೃಷಿಯನ್ನು ಅವಲಂಬಿಸಿ ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತಾರೆ ದೇಶದ ಒಟ್ಟು ಜನಸಂಖ್ಯೆ 135 ಕೋಟಿ ಅದರಲ್ಲಿ 108 ಕೋಟಿ ಕೃಷಿಯಲ್ಲಿ ಅವಲಂಬಿತರಾಗಿರುತ್ತಾರೆ. ವಿμÁ್ಯಖಂಡದಲ್ಲಿ ಸಮೃದ್ಧವಾದ ಕೃಷಿ ಸಂಪನ್ಮೂಲ ನಮ್ಮ ಭಾರತ ದೇಶದಲ್ಲಿ ನೂರಾರು ನದಿಗಳಿವೆ ಮತ್ತು ಫಲವತ್ತಾದ ಭೂಮಿಯು ಇದೆ ಆದರು ಭಾರತ ರೈತ ಬಡವ, ಕಾರಣ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳು ಅಂದರೆ ನದಿ ನೀರಿನ ಸದ್ಬಳಿಕೆ ಇಲ್ಲ. ಆಳುವ ಸರ್ಕಾರಗಳು ರೈತನನ್ನು ಒಂದು ರೀತಿ ದ್ವಿತೀಯ ದರ್ಜೆ ಪ್ರಜೆಯಂತೆ ಮಲತಾಯಿ ಧೋರಣೆ ಅನುಸರಿಸಿಕೊಂಡು ಬಂದು ಆತನನ್ನು ಬಡತನದ ಕೂಪದಲ್ಲಿ ತಳ್ಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತವಿರೋಧಿ ಕಾನೂನು ಜಾರಿ ಮಾಡಿ ಗಾಯದ ಮೇಲೆ ಬರೆಯಳೆದಂತೆ ಸದ್ಯದ ಪರಿಸ್ಥಿತಿಯಿದೆ. ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಈಗಾಗಲೇ ಹಿಂಪಡೆದಿದ್ದು, ಆದರೆ ರಾಜ್ಯ ಸರ್ಕಾರ ವತಿಯಿಂದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದು ಆದೇಶ ಹೊರಡಿಸುವುದು. ರೈತ ಬೆಳೆದ ಬೆಳೆಗಳಿಗೆ ಕಾನೂನಾತ್ಮಕ ದರ ನಿಗದಿಪಡಿಸುವುದು ಹಾಗೂ ಡಾಃ ಸ್ವಾಮಿನಾಥನ್ ವರದಿ ಜಾರಿಗೆಗೊಳಿಸುವುದು. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು. ಕೃಷ್ಣ ನದಿಯ ಆಲಮಟ್ಟಿ ಜಲಾಶಯದ ಎತ್ತರ 519 ರಿಂದ 524.256ಕ್ಕೆ ಕೂಡಲೇ ಎತ್ತರಿಸುವುದು. ಮಹಾದಾಯಿ ಯೋಜನೆ ಜಾರಿ ನವುಲಿ ಹತ್ತಿರ ಸಮಾನಾಂತರ ಜಲಾಶಯ ನಿರ್ಮಿಸುವುದು. ಬೆಣ್ಣೆ ಹಳ್ಳ ಯೋಜನೆ ಜಾರಿ ಹಾಗೂ ಮೇಕೆದಾಟು ಯೋಜನೆ ಶೀಘ್ರ ಜಾರಿಗೊಳಿಸುವುದು. ಬಗರ್ ಹುಕುಂ ಸಾಗೂವಳಿದಾರರಿಗೆ ಪಟ್ಟಾ ನೀಡುವುದು. ರಾಜ್ಯದಲ್ಲಿ ಈಗಾಗಲೇ ಹಿಂದಿನ ಸರ್ಕಾರಗಳು ರೈತರ ವಿದ್ಯುತ್ ಪಂಪ್ ಸೆಟ್ ಗಳಿಗೆ ಪರಿಕರಗಳನ್ನು ಉಚಿತವಾಗಿ ನೀಡುತ್ತಿದ್ದರು. ತಮ್ಮ ಸರ್ಕಾರ Uಓಉಖಿ Sಛಿheem ನ್ನು ಮುಂದುವರೆಸುವುದು. ಹಿಂದಿನ ಸರ್ಕಾರ ವಿದ್ಯುತ್ ಟಿಸಿಗಳಿಗೆ 25000 ನಿಗದಿ ಮಾಡಿದ್ದು, ತಮ್ಮ ಸರ್ಕಾರ 250000 ರೂ. ಲಕ್ಷ ನಿಗದಿ ಮಾಡಿದ್ದು, ಅತಿ ಹೆಚ್ಚು ಮೊತ್ತವಾಗಿರುತ್ತದೆ. ತಕ್ಷಣ ಈ ಆದೇಶವನ್ನು ಹಿಂಪಡೆಯುವುದು
ಈ ಸಂದರ್ಭದಲ್ಲಿ ಸಂಗಣ್ಣ ಬಾಗೇವಾಡಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಬಸವರಾಜ್ ಬಾಗೆವಾಡಿ ರಾಜ್ಯ ಉಪಾಧ್ಯಕ್ಷರು, ವೈ ಎಲ್ ಬಿರಾದಾರ್ ತಾಲೂಕು ಕಾರ್ಯದರ್ಶಿ ಸೀತಪ್ಪ ಗಣಿ ,ಹುಲಿ ಗೌಡ ಬಿರಾದಾರ್, ಸಂಗಣ್ಣ ಯಲಗೋಡ ಮತ್ತಿತರರು ಉಪಸ್ಥಿತರಿದ್ದರು.