ಅಭಿಷ್ಟ ಫಲಗಳನ್ನು ನೀಡುವ ಶ್ರೀರಾಯರು
ಕಲಬುರಗಿ:ಆ.22:ಕಲಿಯುಗದಲ್ಲಿ ಯಾರಿಗೆ ಏನೇ ಸಮಸ್ಯೆ ಬಂದರೂ ಹೇಳುವುದು ಒಂದೇ ರಾಯರಿದ್ದಾರೆ, ಭಕ್ತರ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ರಾಯರು ಪರಿಹರಿಸುತ್ತಾರೆ, ಮನುಕುಲದ ಎಲ್ಲಾ ಜೀವರಾಶಿಯನ್ನು ಹರಸಿ ಉದ್ಧರಿಸುತ್ತಾರೆ ಶ್ರೀ ರಾಘವೇಂದ್ರ ಸ್ವಾಮಿಗಳು ಎಂದು ವೇದಮೂರ್ತಿ ಶ್ರೀ ಆಕಾಶರಾಜಾಚಾರ್ಯ ಹೇಳಿದರು.
ಕರುಣೇಶ್ವರ ನಗರದ ಶ್ರೀಜೈವೀರ ಹನುಮಾನ್ ಮಂದಿರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನೆ ಪ್ರಯುಕ್ತ ಶ್ರೀಜೈವೀರ್ ಹನುಮಾನ್ ಪಾರಾಯಣ ಸಂಘದಿಂದ ಹಮ್ಮಿಕೊಂಡಿದ್ದ 108 ಬಾರಿ ಶ್ರೀರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ ಕಾರ್ಯಕ್ರಮದಲ್ಲಿ ಮಾತನಾಡಿ ರಾಯರು ಲೋಕ ಜನರನ್ನು ಉದ್ಧಾರ ಮಾಡಿ ಸಮಸ್ತ ಇಷ್ಟಾರ್ಥಗಳನ್ನು ಕರುಣಿಸುವುದಾಗಿ ಭರವಸೆ ನೀಡಿ ಬೃಂದಾವನ ಪ್ರವೇಶಿಸಿದರ ಮಹಾಮನಿಮರು ಎಂದರು.
ಪಾರಾಯಣ ಸಂಘದ ಪ್ರಮುಖರಾದ ಡಾ. ಶ್ರೀನಿವಾಸ್ ಜಾಗೀರ್ದಾರ್, ಅವಿನಾಶ್ ಕುಲಕರ್ಣಿ ರೇವೂರ್, ವಿನುತ ಎಸ್ ಜೋಶಿ, ಕಿಶನರಾವ್ ಮಠಮಾರಿ, ಡಾ.ಸುಧೀರ್ ಕುಳಗೇರಿ, ರಾಮಚಂದ್ರ ಕುಲಕರ್ಣಿ ಸೂಗೂರ, ಅರ್ಚಕರಾದ ಪ್ರದ್ಯುಮ್ನಚಾರ್ಯ ಜೋಶಿ, ಶಂಕರರಾವ್ ಸಿಂದಗಿಕರ್, ಸಮೀರ್ ಕುಲಕರ್ಣಿ, ರಾಘವೇಂದ್ರ ಕೊಂಚೂರು, ಶಾಮರಾವ್ ಕುಲಕರ್ಣಿ, ಮಧುಸೂದನರಾವ್ ಕುಲಕರ್ಣಿ, ಕಿಶನ್ ಕುಲಕರ್ಣಿ ಇದ್ದರು.