ಜಲ್ ಜೀವನ ಮೀಷನ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ಶಾಶ್ವತ ಪರಿಹಾರ
ಔರಾದ್: ಆ.22:ಜಲಜೀವನ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಪ್ರತ್ಯೇಕ ನಳ ಸಂಪರ್ಕ ಕಲ್ಪಿಸಿದ್ದು ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿದಿನಕ್ಕೆ 55 ಲೀಟರ್ ನಿರಂತರ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತ ರಾಮಲಿಂಗಪ್ಪ ಬಿರಾದಾರ ಹೇಳಿದರು.
ತಾಲ್ಲೂಕಿನ ಮಸ್ಕಲ ಗ್ರಾಮದಲ್ಲಿ ಮಂಗಳವಾರ ಜಲಜೀವನ್ ಮಿಷನ್ ಯೋಜನೆಯಡಿ ಹರ್ ಘರ ಜಲೊತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ರಾಮದ ಅಂಗನವಾಡಿ, ಶಾಲೆಗಳಿಗೂ ಸಂಪರ್ಕ ಕಲ್ಪಿಸಿದ್ದು ಪ್ರತಿ ಮಗುವಿಗೂ ಪ್ರತಿದಿನ 10 ಲೀಟರ್ ಶುದ್ಧ ಮತ್ತು ಸ್ವಚ್ಛ ನೀರು ವದಗಿಸಲಾಗುತ್ತದೆ ಹರ್ ಘರ ಜಲ ವಿಶೇಷ ಗ್ರಾಮ ಸಭೆಯಲ್ಲಿ ಯೋಜನೆಯ ಮುಂದಿನ ಕಾರ್ಯಚರಣೆ ಹಾಗೂ ಮೇಲ್ವಿಚಾರಣೆಗಾಗಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗುವುದು ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಸರಿಯಾಗಿ ನಿರ್ವಹಣೆ ಮಾಡಿಕೊಂಡು ಹೋಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಹಾದೇವಿ ಪಾಟೀಲ, ಸಹಾಯಕ ಕಾರ್ಯಪಾಲ ಅಭಿಯಂತ ಸುಭಾಷ್ ದಲವಂಡೆ, ಜೆಜೆಎಮ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಪೇತ್ರು.ಜೆ, ಸಹಾಯಕ ಅಭಿಯಂತರಾದ ಶಿವರಾಜ್ ಪಾಟೀಲ್, ಅಭಿಷೇಕ, ಶಿವಕುಮಾರ,ಅನುಷ್ಠಾನ ಬೆಂಬಲ ಸಂಸ್ಥೆಯ ತಂಡದ ನಾಯಕ ಅಮರನಾಥ್ ಬಿರಾದಾರ, ಗ್ರಾಪಂ ಸದಸ್ಯರು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು.