ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ
ಕಾಳಗಿ :ಆ.22:ಪಟ್ಟಣ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಮಯಕ್ಕೆ ಸರಿಯಾಗಿ ಬಾರದ ವೈದ್ಯರು, ಖಾಸಗಿ ಆಸ್ಪತ್ರೆ ನಡೆಸುತ್ತಿರುವ ವೈದ್ಯ, ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ ಬಡ ರೋಗಿಗಳು.ಕಾಳಗಿ ಪಟ್ಟಣ ತಾಲೂಕ ಕೇಂದ್ರವಾಗಿ 7 ವರ್ಷಗಳೆ ಕಳೆದರು ಪಟ್ಟಣದ ಸರಕಾರಿ ಸಮುದಾಯ
ಆರೋಗ್ಯ ಕೇಂದ್ರವು ಮೇಲ್ದರ್ಜೆಗೂ ಏರದೆ ಸೂಕ್ತ ಚಿಕಿತ್ಸೆಯು ಸಿಗದೆ ಬಡ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ
ಮಾಡುವಂತಾಗಿದೆ. ಸರಕಾರಿ ಆಸ್ಪತ್ರೆಯ ವೈದ್ಯರ ನೀರ್ಲಕ್ಷದಿಂದಾಗಿ ಒಳ ಹಾಗೂ ಹೋರ ರೋಗಿಗಳು ಪರದಾಡುವಂತಾಗಿದೆ.
ಬೆಳಗ್ಗೆ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಬಾರದೆ ಹೊರ ರೋಗಿಗಳ ಚೀಟಿ ನೀಡುವವರಿಗಾಗಿ,ವೈದ್ಯರಿಗಾಗಿ ಬೇಸರದಿಂದ ಕೋಪದಲ್ಲಿ
ಬಡವರ ಸಿಟ್ಟು ದವಡೆಗೆ ಮೂಲ ಎಂಬಂತೆ ಏನು ಮಾಡಲಾಗದ ಸ್ಥಿತಿಯಲ್ಲಿ ಕುರಿ ಹಿಂಡಿನಂತೆ ಒಬ್ಬರ ಮೆಲೋಬ್ಬರು ನಿಲ್ಲುತ್ತ ಜಗಳವಾಡುತ್ತ, ಗದ್ದಲ ಮಾಡುತ್ತ
ಹೀಗೆ ಗುಂಪು ಗುಂಪಾಗಿ ರೋಗಿಗಳು ನಿಂತಿರುವುದು ನೋಡಿದರೆ ಇಲ್ಲಿ ಡಿ ಗ್ರೂಪ್ ನೌಕರರು ಇದಾರೋ ಇಲ್ಲವೋ ಎಂಬ ಅನುಮಾನ ಎಂಬ ಅನುಮಾನವು ಮೂಡುವುದರ ಜೊತೆಗೆ ಡಿ ಗ್ರೂಪ್ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಎದ್ದು ಕಾಣುತ್ತಿದೆ.
11 ಗಂಟೆಯ ನಂತರವೇ ಬರುವ ಸಿಬ್ಬಂದಿ ಹಾಗೂ ವೈದ್ಯರುಗಳು ಎರಡು ತಾಸು ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿ ಮತ್ತೆ ಊಟಕ್ಕಾಗಿ ಹೋಗುತ್ತಾರೆ.
ಇಲ್ಲಿಯ ವೈದ್ಯರೋಬ್ಬರು ನಿಮಗೆ ಹೆಚ್ಚಿನ ಚಿಕಿತ್ಸೆ ಬೇಕಾದರೆ ತಮ್ಮ ಖಾಸಗಿ ಆಸ್ಪತ್ರೆಗೆ ಬರುವಂತೆ ತಿಳಿಸುತ್ತಾರೆ. ಸರಕಾರಿ ಆಸ್ಪತ್ರೆಗೆ ತಡವಾಗಿ
ಬರುವ ವೈದ್ಯರು ಸರಕಾರಿ ಸಂಬಳ ಪಡೆದು ತಮ್ಮ ಖಾಸಗಿ ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಹಾಜರಾಗಿ ರಾತ್ರಿ 11 ಗಂಟೆವರೆಗೂ ರೋಗಿಗಳಿಗೆ ಚಿಕಿತ್ಸೆ ನೀಡಿ
11 ಗಂಟೆ ನಂತರ ಸರಕಾರಿ ಆಸ್ಪತ್ರೆಯಲ್ಲಿ ಬಂದು ವೈದ್ಯರ ಕೋಣೆಯಲ್ಲಿ ಮಲಗುತ್ತಾರೆ. ರಾತ್ರಿ ಚಿಕಿತ್ಸೆಗಾಗಿ ಬರುವ ರೋಗಿಗಳ ಪಾಡಂತು ಹೇಳ ತೀರದು.
ರಾತ್ರಿ ಪಾಳಿಯ ವೈದ್ಯರುಗಳು ತಮ್ಮ ಕೋಣೆಗಳಲ್ಲಿ ಹಾಯಾಗಿ ಮಲಗುತ್ತಾರೆ. ಸಣ್ಣ, ಪುಟ್ಟ ತುರ್ತು ಚಿಕಿತ್ಸೆಗಾಗಿ ಬರುವ ರೋಗಿಗಳ ಚಿಕಿತ್ಸೆಗೆ ಹಲವು ಬಾರಿ ಕರೆದ ನಂತರ
ಬಂದು ಕಾಟಾಚಾರಕ್ಕೆ ಎಂಬಂತೆ ಉಪಚಾರ ಮಾಡಿ ಇಲ್ಲದ ನೇಪ ಹೇಳಿ ಅಂಬುಲೇನ್ಸ್ ಮೂಲಕ ಕಲಬುರಗಿ ಜಿಲ್ಲಾಸ್ಪತ್ರೆಗೆ ಕಳುಹಿಸುವುದು ಸಾಮಾನ್ಯವಾಗಿದೆ.
ಹಗಲೂ ರಾತ್ರಿ ಎನ್ನದೆ ಅಪಘಾತ, ವಿಷ ಸೇವನೆಯಂತಹ ಪ್ರಕರಣಗಳು ಸಾಮಾನ್ಯವಾಗಿವೆ.
ಒಟ್ಟಾರೆಯಾಗಿ ತಾಲೂಕ ಕೇಂದ್ರದ ಆಸ್ಪತ್ರೆಗೆ ಸ್ಥಳಿಯ ಹಾಗೂ ಸುತ್ತಲಿನ ಗ್ರಾಮಗಳ ರೋಗಿಗಳು ಇಷ್ಟೇಲ್ಲ ತೋಂದರೆ ಅನುಭವಿಸುತ್ತಿದ್ದರು ಯಾರೋಬ್ಬ ಸಾಮಾಜಿಕ
ಕಾರ್ಯಕರ್ತರು, ಸಂಘಟನೆಗಳು, ಮುಖಂಡರು ಇದರ ಬಗ್ಗೆ ನೀರ್ಲಕ್ಷ ವಹಿಸುತ್ತಿರುವುದು ವಿಪರ್ಯಾಸವೇ ಸರಿ. ಇಷ್ಟಾದರೂ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ ಕಾದು ನೋಡಬೇಕಿದೆ. ಈ ಸಂದರ್ಭದಲ್ಲಿ ಶಂಕರ್ ಚೌಕ ಹಿಂದೂ ಜಾಗೃತಿ ಸೇನೆಯ ತಾಲೂಕ ಅಧ್ಯಕ್ಷರು. ಶ್ರೀಶೈಲ್ ತೇಗಲತಿಪ್ಪಿ ಸೇರಿದಂತೆ ಅನೇಕರು ಇದ್ದರು.