ಗೌರವಧನ ಹೆಚ್ಚಳಕ್ಕೆ ಬೆಳೆ ಸಮೀಕ್ಷೆಗಾರರ ಒತ್ತಾಯ
ಆಳಂದ:ಆ.22: ಬೆಳೆ ಸಮೀಕ್ಷೆಗಾರರಿಗೆ ನೀಡುವ ಗೌರವಧನವನ್ನು ಹೆಚ್ಚಿಸಬೇಕು ಎಂದು ತಾಲೂಕು ಬೆಳೆ ಸಮೀಕ್ಷೆಗಾರರ ಸಂಘದಿಂದ ಪಟ್ಟಣದಲ್ಲಿ ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿ ಸಂಘದ ಪ್ರಮುಖರು ಮಂಗಳವಾರ ಒತ್ತಾಯಿಸಿದರು.
ತಾಲೂಕಿನ ಬೆಳ ಸಮೀಕ್ಷೆಗಾರರು ( Pಖ ) ಆಗಿದ್ದು ಸುಮಾರು 7-8 ವರ್ಷಗಳಿಂದ ಸದರಿ ಗ್ರಾಮಗಳ ಬೆಳೆ ಸಮೀಕ್ಷೆ ಮಾಡುತ್ತಾ ಬಂದಿರುತ್ತೇವೆ ಹಾಗೂ 2024-25 ನೇ ಸಾಲಿನನಲ್ಲಿ ಬೆಳೆ ಸಮೀಕ್ಷೆ ಂPP ನಲ್ಲಿ ಪ್ರತಿಯೊಂದು ಹಿಸ್ಮಾನಂಬರಗೆ ಹೋಗಿ ಬೆಳೆ ಸಮೀಕ್ಷೆ ಮಾಡುವ ಅನಿವಾರ್ಯತೆ ಇದು, ಸದರಿ ಆದೇಶದಲ್ಲಿ ಹೆಚ್ಚಿಸಿದ ಗೌರವ ಧನಕ್ಕೆ ಬೆಳೆ ಸಮೀಕ್ಷೆ ಮಾಡುವುದು ಕಷ್ಟ ಸಾಧ್ಯವಾಗುತ್ತಿದ್ದು ಇಂದಿನಿಂದ ಬೆಳೆ ಸಮೀಕ್ಷೆ ಮಾಡಬೇಂಕದರೆ ಆದ್ದರಿಂದ ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರಿಸಬೇಕಾಗಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ಲಾಟಗೆ ತೆರಳಿ ಬೆಳೆ ಸಮೀಕ್ಷೆ ಕೈಗೊಳ್ಳಲು 50 ರೂಪಾಯಿ ನಿಗದಿ ಮಾಡಬೇಕು. ರಕ್ಷಾ ಕವಚಗಳನ್ನು ನೀಡಬೇಕು. 10 ಲಕ್ಷ ರೂ. ಗಳವರೆಗೆ ಸೇವಾ ಭದ್ರತೆಯನ್ನು ನೀಡಬೇಕು. ಈಗಿರುವ ಸಮೀಕ್ಷೆದಾರರನ್ನು ಖಾಯಂ ಗೊಳಿಸಬೇಕು. ಖಾಸಗಿ ನಿವಾಸಿ ಎಂಬ ಪದ ತೆಗೆದು ಹಾಕಬೇಕು. ಟಿ.ಎ,ಡಿ.ಎ ನಿಗದಿ ಮಾಡಬೇಕು. ಸರಿಯಾದ ಜಿ.ಪಿ.ಎಸ್ ಒದಗಿಸಬೇಕು.
ಕೃಷಿ ಇಲಾಖೆಯಿಂದ ಗುಣಮಟ್ಟದ ಟ್ಯಾಬ್ ಒದಗಿಸಬೇಕು. ಪ್ರತಿ ಸರ್ವೆ ನಂಬರಗಳ ಹಿಸ್ಸಾ ರದ್ದು ಮಾಡಬೇಕು ಮೊದಲಿನಂತೆ ಸರ್ವೆ ನಂಬರ ಪ್ರಕಾರ ಸಮೀಕ್ಷೆ ಮಾಡಲು ಅನುವು ಮಾಡಿಕೋಡಬೇಕು. ಇಂದು ವೇಳೆ ಈ ಬೇಡಿಕೆ ಈಡೇರಿಸದ್ದರೆ ಮುಂಬರುವ ಬೆಳೆ ಸಮಿಕ್ಷೆಯನ್ನು ಮಾಡುವುದಿಲ್ಲವೆಂದು ಪ್ರಮುಖರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಶರಣಗೌಡ ಪಾಟೀಲ ಅವರು ಈ ಕುರಿತು ಬೇಡಿಕೆಯ ಮನವಿಯನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಟ್ಟು ಕ್ರಮಕ್ಕೆ ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.