೨೦೨೫ ರೊಳಗೆ ಕ್ಷಯ ನಿರ್ಮೂಲನೆಗೆ ಗುರಿ ಬನದೇಶ
ದೇವದುರ್ಗ.ಆ೨೨: ಕ್ಷಯ ರೋಗದ ಬಗ್ಗೆ ಜಾಗೃತ ರಾಗಿ ಅದು ಅಂಟು ರೋಗವಾಗಿದ್ದು. ಖಾಯಿಲೆಗೆ ಉಚಿತ ಚಿಕಿತ್ಸೆ ನೀಡಲಾಗುವುದು. ನಿರ್ಲಕ್ಷ ಮಾಡದೆ ಕಾಲಕಾಲಕ್ಕೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕೆಂದು ತಾಲೂಕ ಆರೋಗ್ಯ ಅಧಿಕಾರಿ ಡಾ” ಬನದೇಶ ಹೇಳಿದರು. ಅವರು ತಾಲೂಕಿನ ಗಲಗ ಪ್ರಾ ಆರೋಗ್ಯಕೇಂದ್ರದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಮತ್ತು ಕ್ಷಯ ರೋಗ ನಿರ್ಮೂಲನೆ ಘಟಕದ ವತಿಯಿಂದ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ.
ಕ್ಷಯ ರೋಗ ಒಂದು ಅಂಟು ರೋಗವಾಗಿದ್ದು, ಖಾಯಿಲೆ ತಗುಲಿದವರು ಕೆಮ್ಮುವಾಗ ಸೀನುವಾಗ ಬಾಯಿಗೆ ಬಟ್ಟೆ ಹಿಡಿಯಬೇಕು. ನಿರ್ಲಕ್ಷ ಮಾಡಬಾರದು. ನಿಮ್ಮ ನಿಮ್ಮ ಪ್ರದೇಶಗಳ ಜನರಲ್ಲಿ ಕ್ಷಯರೋಗದ ಲಕ್ಷಣ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ಜ್ವರ ಬರುವುದು, ಕಫ ದಲ್ಲಿ ರಕ್ತ ಬರುವುದು, ತೂಕ ದಲ್ಲಿ ಇಳಿಕೆ ಮತ್ತು ಎದೆನೋವು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕಳಿಸಿ ಕಫ ಪರೀಕ್ಷೆ ಮಾಡಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು. ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮ ಸಂಯೋಜಕ ಅಮರೇಶ ಕುಮಾರ್ ಮಾತನಾಡಿ ದಿನಾಂಕ ೧೬-೦೮-೨೪ ರಿಂದ ೩೧-೦೮-೨೪ ರವರಿಗೆ ಪ್ರತಿಯೊಂದು ಮನೆ ಮನೆಗೆ ಆಶಾ ಕಾರ್ಯಕರ್ತೆಯವರು ಭೇಟಿ ಮಾಡಲಿದ್ದು ಅವರು ಕ್ಷಯರೋಗದ ಲಕ್ಷಣ ಕುರಿತು ಸರ್ವೆ ಮಾಡುತ್ತಾರೆ ಕ್ಷಯ ರೋಗದ ಲಕ್ಷಣಗಳು ಕಂಡು ಬಂದರೆ ಆರೋಗ್ಯ, ಆಶಾ ಕಾರ್ಯಕರ್ತರಿಗೆ ತಿಳಿಸಬೇಕು ಕ್ಷಯ ರೋಗ ದೃಢವಾದಲ್ಲಿ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ೬ ತಿಂಗಳು ಚಿಕಿತ್ಸೆ ಜೊತೆಗೆ ಪ್ರತಿ ತಿಂಗಳು ೫೦೦ ರೂ ಯಂತೆ ಪೌಷ್ಟಿಕ ಆಹಾರ ಸೇವನೆಗಾಗಿ ರೋಗಿಗಳಿಗೆ ಜಮೆ ಮಾಡುತ್ತಾರೆ ಇದನ್ನು ಉಪಯೋಗ ಪಡೆಯಬೇಕು ಎಂದರು.
ವೈದ್ಯಧಿಕಾರಿ ಡಾ. ಅಖಿಲೇಶ್ ಕುಮಾರ್,ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿಗುರುನಾಥ ದೊರೆ, ತಾಲೂಕ ಕ್ಷಯ ರೋಗ ಮೇಲ್ವಿಚಾರಕ ಮಹೇಶ ತಿಪ್ಪಲದಿನ್ನಿ. ಮಲ್ಲಿಕಾರ್ಜುನ್, ರಾಚನಗೌಡ ಮತ್ತು ಸುನಿತಾ, ಹುಲಿಗೆಮ್ಮ, ಮಂಜುಳಾ, ರಶೀದಾ ಬೇಗಂ, ರೇಣುಕಾ, ಶಕುಂತಲಾ , ಆಶಾ ಕಾರ್ಯಕರ್ತೆ ರತ್ನಮ್ಮ ,ಜ್ಯೋತಿ ಅಂಬಮ್ಮ ಇನ್ನಿತರರು ಇದ್ದರು.