ಗ್ರಾಮ ಸಹಾಯಕರಿಗೆ ಎಸ್ ಎಲ್ ಆರ್ ವತಿಯಿಂದ ಮೊಬೈಲ್ ವಿತರಣೆ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :,ಆ.22:ತಾಲ್ಲೂಕಿನ ಲೋಕಪ್ಪನ ಹೊಲದ ಹತ್ತಿರವಿರುವ ಎಸ್ ಎಲ್ ಆರ್ ಮೆಟಾಲಿಕ್ಸ್ ಸಹಯೋಗದಲ್ಲಿ   ಚೈತನ್ಯ ಗ್ರಾಮೀಣಾಭಿವೃದ್ಧಿ ಎಜುಕೇಷನ್ ಟ್ರಸ್ಟ್ ವತಿಯಿಂದ ಸಿಎಸ್ಆರ್ ಪಂಡ್ ನಲ್ಲಿ  ತಾಲೂಕಿನ ಗ್ರಾಮ ಸಹಾಯಕರಿಗೆ ಮೊಬೈಲ್ ವಿತರಣೆ ಮಾಡಲಾಯಿತು
 ಪಟ್ಟಣದ ಆಡಳಿತ ಸೌಧ ಕಚೇರಿಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ  ಕ್ಷೇತ್ರದ ಶಾಸಕ ಕೆ.ನೇಮಿರಾಜ್ ನಾಯ್ಕ ಭಾಗವಹಿಸಿ  55 ಗ್ರಾಮ ಸಹಾಯಕರಿಗೆ ಮೊಬೈಲ್ ವಿತರಣೆ ಮಾಡಿ ಬಳಿಕ ಮಾತನಾಡಿದರು. ರಾಜ್ಯದಲ್ಲಿಯೇ ಮಾದರಿ ಯೋಜನೆ ಪಿ1,ಪಿ,2, ಹಾಗೂ ಪಿ3 ಯೋಜನೆಗೆ ಗ್ರಾಮ ಸಹಾಯಕರು ಸಾರ್ವಜನಿಕರ ಮನೆ ಬಾಗಿಲಿಗೆ ಹೋದಾಗ ಫಲಾನುಭವಿಗಳ ಮಾಹಿತಿ ಕಲೆ ಹಾಕಲು,ಪಿಂಚಣಿ, ಇತರ ಸರಕಾರಿ ಸೌಲಭ್ಯಗಳನ್ನು ಪಡೆಯಲು ಹಾಗೂ ಬೆಳೆ ಸಮೀಕ್ಷೆ ಇತರ ಕಂದಾಯ ಇಲಾಖೆಯ ಕೆಲಸಗಳನ್ನು ನಿರ್ವಹಿಸಲು ಈ ಮೊಬೈಲ್ ಅನುಕೂಲವಾಗಲಿದೆ. ಗ್ರಾಮ ಸಹಾಯಕರು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು, ಹಿಂದಿನ ಅವಧಿಯಲ್ಲಿ ಸಿಎಸ್ ಆರ್ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿರಲಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿ ಎಸ್ ದಿವಾಕರ್ ಜೊತೆಗೆ ಚರ್ಚಿಸಿ ಸಾಮುದಾಯಿಕ ಹಾಗೂ ಸಾರ್ವಜನಿಕವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಸಿಎಸ್ ಆರ್ ನಿಧಿಯನ್ನು ಬಳಕೆ ಮಾಡಲಾಗುತ್ತದೆ ಎಂದರು.
ಈ ವೇಳೆ ಜೆಡಿಎಸ್ ಕ್ಷೇತ್ರಾಧ್ಯಕ್ಷ ವೈ.ಮಲ್ಲಿಕಾರ್ಜುನ, ಹಿರಿಯರಾದ ಕೃಷ್ಣಮೂರ್ತಿ ಶೆಟ್ರು,  ಎಸ್ ಎಲ್ ಆರ್ ಕಾನೂನು ವಿಭಾಗದ ಲಿಂಗರಾಜ್, ಮಲ್ಲಿಕಾರ್ಜುನ, ಮಾರುತಿ, ಜೋಷಿ, ಚೈತನ್ಯ ಗ್ರಾಮಾಭಿವೃದ್ದಿ ಸಂಸ್ಥೆಯ ಡಿ ಭೀಮರಾಜ್, ಉಪ ತಹಸೀಲ್ದಾರ್ ಶಿವಕುಮಾರ್ ಗೌಡ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ಬಿ.ದೊಡ್ಡ ಬಸಪ್ಪ ರೆಡ್ಡಿ, ಜಿಲ್ಲಾ ಗ್ರಾಮ ಸಹಾಯಕರ ಅಧ್ಯಕ್ಷ ಪಕ್ಕೀರಪ್ಪ, ಬ್ಯಾಟಿ ನಾಗರಾಜ್, ಜಿ.ಎಂ.ಜಗದೀಶ್, ರಾಹುಲ್, ತಂಬ್ರಹಳ್ಳಿ ಕರಿಬಸವಯ್ಯ ಇತರರು ಇದ್ದರು.