ಕೊನೆಯ ಚುನಾವಣೆ ಎಂದಿದ್ದೇ ಆದರೆ ಹೈಕಮಾಂಡ ಸೂಚಿಸಿದರೆ ಮತ್ತೊಮ್ಮೆ ಸ್ಪರ್ಧೆ: ಸುಭಾಷ ಗುತ್ತೇದಾರ
ಆಳಂದ:ಆ.22: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಇದು ನನ್ನ ಕೊನೆಯ ಚುನಾವಣೆ ಎಂದಿದ್ದೇ ನಿಜ ಆದರೆ, ಮುಂಬರುವ ಚುನಾವಣೆಯಲ್ಲಿ ಹೈಕಮಾಂಡ ಸ್ಪರ್ಧೆಗೆ ಹೇಳಿದರೆ ಮಾತಿಗೆ ಬೆಲೆಕೊಡಲೇಕಾಗುತ್ತದೆ ಎನ್ನುವ ಮೂಲಕ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ತಮ್ಮ ರಾಜಕೀಯ ಇನ್ನೊಂದು ಇನ್ನಿಂಗ್ಸ್ ಆರಂಭಿಸುವ ಕುರಿತು ಮಾತಿನ ಚಟಾಕಿ ಹಾರಿಸಿದರು.
ಈ ಕುರಿತು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅನೌಪಚಾರಿಕ ಮಾತುಕತೆಯಲ್ಲಿ ಅವರು, ಮಾತನಾಡುತ್ತಿದ್ದರು.
ಕಾಂಗ್ರೆಸ್ಸಿನ ಅಫಜಲಪೂರ ಶಾಸಕ ಎಂ.ವೈ. ಪಾಟೀಲ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಒಪ್ಪಿರಲಿಲ್ಲ. ಆದರೆ ಅವರ ಹೈಕಮಾಂಡ ಒತ್ತಡದ ಮೇರೆಗೆ ಸ್ಫರ್ಧಿಸಿದಂತೆ ನನ್ನಗೂ ಈ ಸಾಧ್ಯತೆ ತಳಿಹಾಕಲಾಗದು ಎಂದು ಅವರು ಹಾಸ್ಯಚಟಾಕಿ ಹಾರಿಸಿದರು.
ಹಾಲಿ ಶಾಸಕರು ಸಹ ಮತ್ತೊಮ್ಮೆ ಸ್ಪರ್ಧಿಸುವ ರೀತಿಯಲ್ಲಿ ಸಕ್ರಿಯವಾಗಿದ್ದು, ನೀವು ಇದೇ ರೀತಿಯಲ್ಲಿ ಸಕ್ರಿಯವಾಗಿದ್ದೀರಿ, ಕಳೆದ ಚುನಾವಣೆಯಲ್ಲಿ ಮಾತ್ರ ಇದು ನನ್ನ ಕೊನೆಯ ಚುನಾವಣೆ ಸ್ಪರ್ಧಿಸುವುದಿಲ್ಲ ಎನ್ನಲಾಗಿತ್ತು. ಆದರೆ ತಮ್ಮ ದೈನಂದಿನ ರಾಜಕೀಯ ಚಟುವಟಿಕೆ ಮಾತ್ರ ಮುಂದಿನ ತಯಾರಿಯಂತೆ ಕಾಣುತ್ತಿದೆಯಲ್ಲ ಎಂಬ ಸುದ್ದಿಗಾರರೊಬ್ಬರ ಮಾತಿಗೆ ಗುತ್ತೇದಾರ ಅವರು ಹೈಕಮಾಂಡ ಸೂಚಿಸಿದರೆ ಮತ್ತೊಮ್ಮೆ ಸ್ಪರ್ಧಿಸುವೇ ಎನ್ನುವ ಆವಾಜ್ ಹಾಕುವ ಮೂಲಕ ರಾಜಕೀಯ ಎದುರಾಳಿಗೆ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಹೈಕಮಾಂಡ ಸೂಚಿಸಿದರೆ ವಿಧಾನಸಭೆ ಚುನಾವಣೆಗೆ ಸ್ಫರ್ಧಿಸುವೆÀ ಎನ್ನುವ ಗುತ್ತೇದಾರ ಅವರ ತೆರೆಮೆರೆಯ ಈ ಹೇಳಿಕೆಗೆ ಕಾರ್ಯಕರ್ತ ವಲಯದಲ್ಲಿ ಬಿರುಸಿನ ಹುಮ್ಮಸು ತರಿಸುವ ಮೂಲಕ ಮುಂಬರುವ ಜಿಪಂ, ತಾಪಂ ಚುನಾವಣೆಗೆ ಬಿಜೆಪಿ ವಲಯದಲ್ಲಿ ರಾಜಕೀಯ ಚಟುವಟಿಕೆಗೆ ಮತ್ತಷ್ಟು ಪುಷ್ಠಿ ತಂದುಕೊಟ್ಟಿದೆ.