ಸಂಭ್ರಮದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ  323ನೇ ಆರಾಧನಾ ಮಹೋತ್ಸವ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ ಆ.22  ಪಟ್ಟಣದ ಶ್ರೀಗುರು ರಾಘವೇಂದ್ರಸ್ವಾಮಿ ದೇವಸ್ಥಾನದಲ್ಲಿ  ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಕಾರ್ಯಕ್ರಮವು ಬುಧವಾರ ರಂದು ದೇವಸ್ಥಾನದ ಅರ್ಚಕ, ಗೋಪಾಲ ಕೃಷ್ಣ ಇವರ ನೇತೃತ್ವದಲ್ಲಿ ಸಂಭ್ರಮದಿಂದ ಜರುಗಿತು.
ಸೋಮವಾರ ಬೆಳಿಗ್ಗೆ ಉಪಕರ್ಮಾ, ಶ್ರೀಸತ್ಯ ನಾರಾಯಣ ಪೂಜೆ, ಧ್ವಜಾರೋಹಣ, ಗೋವಿನ ಪೂಜಾ, ಲಕ್ಷ್ಮೀ ಪೂಜೆ, ಮಂಗಳವಾರ ಶ್ರೀ ರಾಯರ ಪೂರ್ವರಾಧನೆ ಫಲಪಂಚಾಮೃತ, ಪಾದಪೂಜೆ, ಕನಕಾಭಿಷೇಕ, ಮಹಾಮಂಗಳಾರುತಿ, ಬುಧವಾರ ರಂದು ಬೆಳಿಗ್ಗೆ  ಫಲ ಪಂಚಾಮೃತಾ ಅಭಿಷೇಕ, ಕನಕಾ ಭಿಷೇಕದೊಂದಿಗೆ  ಸರ್ವರಿಗೂ ರಾಯರ ತೀರ್ಥ ಪ್ರಸಾದ ಹಾಗು ಅನ್ನ ಸಂತರ್ಪಣೆ ನೆಡೆಯಿತು.
ಸಾಯಂಕಾಲ ರಾಯರ ರಥೋತ್ಸವ, ತೊಟ್ಟಿಲು ಪೂಜೆ,  ಮಂತ್ರಾಕ್ಷತೆ ಪೂಜೆ ನೆಡೆಯಿತು. ಗುರುವಾರ ರಂದು ಶ್ರೀ ರಾಯರ ಉತ್ತರಾಧನೆ ಕಾರ್ಯಕ್ರಮ ಇದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲ ಕೃಷ್ಣ ತಿಳಿಸಿದರು.
ಈ ವೇಳೆಯಲ್ಲಿ  ಶ್ರೀ ಗುರು ರಾಘವೇಂದ್ರ  ಸ್ವಾಮಿಯ ಮಠದ ಟ್ರಸ್ಟ್ ಅಧ್ಯಕ್ಷ, ಮಂಗನಹಳ್ಳಿ ಮಂಜುನಾಥ ಶೆಟ್ರು,  ಗೌರವಾಧ್ಯಕ್ಷ ಸುಬ್ರಮಣ್ಯ ಶೆಟ್ರು, ಮಹಿಳಾ ಮಂಡಳಿ ಅಧ್ಯಕ್ಷೆ  ಸಾವಿತ್ರಿ, ವಿಶಾಲ, ಬಸಮ್ಮ,  ನೇತ್ರಾ, ಪವನ್ ಆಚಾರ್ಯ, ಭಾರ್ಗವಿ, ರತ್ನ, ಶಂಕರ್ ಭಟ್ರು, ರಾಧಿಕ, ಲತಾ  , ಭದರಿನಾಥ ಆಚಾರ್ಯ, ಜ್ಯೋತಿ, ಮಾಲಾ, ಪುರಸಭೆ ಸದಸ್ಯ ಮರಿ ರಾಮಪ್ಪ, ಕಿನ್ನಾಳ ಸುಭಾಷ್, ಕೋಡಿಹಳ್ಳಿ ಪ್ರಭಾಕರ ಶೆಟ್ರು, ಅಳವಂಡಿ ಸಿದ್ದಾರೆಡ್ಡಿ, ಮೈನಳ್ಳಿ ಕೊಟ್ರೇಶಪ್ಪ, ರಮೇಶ ಶೆಟ್ರು, ಪಾರ್ವತಿ,  ಶ್ರೀ ರಾಘವೇಂದ್ರ ಸ್ವಾಮಿ ಟ್ರಸ್ಟ್ ನ ಪದಾಧಿಕಾರಿಗಳು, ಶ್ರೀ  ಗುರು ರಾಘವೇಂದ್ರ ವೀಣಾ ಭಜನಾ ಮಂಡಳಿ,  ಅಧ್ಯಕ್ಷರು, ಸರ್ವ ಸದಸ್ಯರು, ಪಟ್ಟಣ ಹಾಗೂ ಸುತ್ತಮುತ್ತಲಿನ ಅಪಾರ ಭಕ್ತಾಧಿಗಳು ಪಾಲ್ಗೊಂಡಿದ್ದರು.