ಶ್ರೀ ಗುರುರಾಜ ಸೇವಾ ಸಮಿತಿಯಿಂದ  ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ
ಸಂಜೆವಾಣಿ ವಾರ್ತೆ
ಬಳ್ಳಾರಿ:ಅ,22- ರಾಘವೇಂದ್ರ ಸ್ವಾಮಿಗಳ 353ನೇಆರಾಧನಾ ಮಹೋತ್ಸವದ ಮಧ್ಯಾರಾಧನೆ ಯನ್ನು  ಕೌಲ್ ಬಜಾರ್ ಮಾರವಾಡಿ ಗಣೇಶ ದೇವಸ್ಥಾನ ದಲ್ಲಿ ಶ್ರೀ ಗುರುರಾಜ ಸೇವಾ ಸಮಿತಿಯಿಂದ ಶ್ರದ್ಧಾ ಭಕ್ತಿಯಿಂದ  ಆಚರಿಸಲಾಯಿತು..
ಬೆಳಿಗ್ಗೆ ವಾಯುಸ್ತುತಿ,ವೆಂಕಟೇಶ್ವರ ಸ್ತೋತ್ರ, ಶ್ರೀರಾಘವೇಂದ್ರ ‌ಸ್ವಾಮಿಗಳ  ಅಷ್ಟೋತ್ತರ ಜರುಗಿತು ನಂತರ ಪಂಚಾಮೃತ ಅಭಿಷೇಕ,   ಕನಕಾಭಿಷೇಕ ನಡೆಯಿತು. ಪಂಡಿತ ಶ್ರೀಜಯ ಸಿಂಹಾಚಾಯ೯ರಾಜಪುರೋಹಿತ ಅವರು ಶ್ರೀರಾಘವೇಂದ್ರಸ್ವಾಮಿಗಳವರ ಜೀವನಹಾಗೂಅವರ ಕೃತಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ನ೦ತರ ಕು॥ವಿಭಾ.ಆರ್. ಕುಲಕರ್ಣಿ ಯವರಿ0ದ ದಾಸವಾಣಿ ಜರುಗಿತು. ವಿಭಾ ಕುಲಕರ್ಣಿ ಯವರು ವಿವಿಧ ದಾಸರ ರಚನೆ ಹಾಗು ದೇವರ ಕೀರ್ತನೆ ಗಳನ್ನು ತುಂಬಾ ಸುಶ್ರಾವ್ಯ ವಾಗಿ ಹಾಡಿದರು.ಶ್ರೀರಾಘವೇಂದ್ರ ಗುಡದೂರ್ ಹಾರ್ಮೋನಿಯಂ ನುಡಿಸಿದರು. ಶಿವಕುಮಾರ ವಸ್ತ್ರದ್ ತಬಲ ಸಾಥ್ ಹಾಗು ರಾಮರಾವ ಕುಲಕರ್ಣಿ ತಾಳ ವಾದ್ಯದ ಸಾಥ್ ನೀಡಿದರು. ನಂತರ  ಶ್ರೀಗುರುರಾಜ ಸೇವಾಸಮಿತಿ ವತಿಯಿಂದ   ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಹಾಮಂಗಳಾರತಿ ತೀರ್ಥಪ್ರಸಾದ ನಡೆಯಿತು. ಶ್ರೀರಾಘವೇಂದ್ರಸ್ವಾಮಿಗಳವರ ಪಟಕ್ಕೆ ವಿವಿಧಹೂವುಗಳಿಂದಅಲಂಕಾರ ಮಾಡಲಾಗಿತ್ತು. ಶ್ರೀರಾಜೇಂದ್ರಆಚಾರ್ಯ ಆಲೂರು ಮತ್ತುಮೋಹನದಾಸ ಅವರು ಪೂಜಾ ಕೈಂಕಯ೯ ಗಳನ್ನೆಲ್ಲ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಿತಿಯಅಧ್ಯಕ್ಷರಾದ ಆರ್.ಕೆ.ಸುಬ್ಬರಾವ್ ಹಾಗು ಕಾರ್ಯಕಾರಿಣಿಮಂಡಳಿಯ ಸದಸ್ಯರಾದ .ಕೆ.ಗುರುರಾಜ್,
 ಬಿ.ಅನಂತಆಚಾರ್ಯ ಕೆ.ಸತ್ಯನಾರಾಯಣರಾವ್, ಹೆಚ್.ವೇಣುಗೋಪಾಲ್,  ಎಂ.ಭೀಮರಾವ್ ಕುಲಕರ್ಣಿ,
ಭುವನೇಂದ್ರ ಆಚಾರ್
ಗುಂಡಾಚಾರ್ ಅಗಸನೂರ್ ಬಿ.ಅನಂತಕೃಷ್ಣ, ಡಿ.ಪ್ರಭಂಜನಕುಮಾರ, ಹೆಚ್.ಎಸ್. ಕೇಶವ  ಜಿ.ಎಂ. ನರಸಿಂಹಮೂರ್ತಿ  ಉಪ
ಸ್ಥಿತರಿದ್ದರು.