ಯುವ ವೈದ್ಯೆಯ ಹತ್ಯೆ ಖಂಡಿಸಿ ಪ್ರತಿಭಟನೆ
ಗುಳೇದಗುಡ್ಡ,ಆ.22: ಪಶ್ಚಿಮ ಬಂಗಾಳದ ಕಲ್ಕಾತ್ತಾದಲ್ಲಿ ಯುವ ವೈದ್ಯಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಖಂಡಿಸಿ ಪಟ್ಟಣದ ಮಾಹೇಶ್ವರಿ ಮಹಿಳಾ ಮತ್ತು ಸಖಿ ಮಂಡಳಿ ವತಿಯಿಂದ ಕ್ಯಾಂಡಲ್ ಹಿಡಿದು ಪ್ರತಿಭಟನೆ ನಡೆಸಿದರು.
ಪಟ್ಟಣದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಿಂದ ಕೈಯಲ್ಲಿ ಕ್ಯಾಂಡಲ್ ಹಿಡಿದು ಪ್ರತಿಭಟನೆ ಮೆರವಣಿಗೆ ಪ್ರಾರಂಭಿಸಿದ ಪ್ರತಿಭಟನಾಕಾರರು ಚೌಬಜಾರ ಮೂಲಕ ಬಾಲಜಿ ಮಂದಿರಕ್ಕೆ ಬಂದು ತಲುಪಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಡಳದ ಕಾರ್ಯದರ್ಶಿ, ಪುರಸಭೆ ಸದಸ್ಯೆ ವಂದನಾ ಭಟ್ಟಡ, ಕಲಕತ್ತಾದಲ್ಲಿ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ, ಕೊಲೆ ಒಂದು ಅಮಾನವೀಯ ಘಟನೆಯಾಗಿದೆ. ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಕಿಸುವ ಕಾನೂನು ಜಾರಿಗೆ ಬರುತ್ತಿಲ್ಲ. ಇಂತಹ ಹೇಯ ಕೃತ್ಯ ಎಸಗಿದವರನ್ನು ಗಲ್ಲು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.
ಮಂಡಳಿಯ ಉಪಾಧ್ಯಕ್ಷೆ ಚಂದ್ರಕಲಾ ಸೋನಿ ಮಾತನಾಡಿ, ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹತ್ಯೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕೇಂದ್ರ ಸರಕಾರ ಅತ್ಯಂತ ಕಠಿಣ ಶಿಕ್ಷೆ ವಿಧಿಸಿಬೇಕು. ಇಂತಹ ಕ್ರೂರ ಘಟನೆಗಳ ನಡೆಯದಂತೆ ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸುವ ಮೂಲಕ ಮಹಿಳೆಯರ ರಕ್ಷಣೆಗೆ ಸರಕಾರ ಮುಂದಾಗಬೇಕು. ಹತ್ಯೆಗೀಡಾದ ಯುವವೈದ್ಯೆಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಶರ್ಮಿಳಾ ದೂತ, ಚೇತಾಲಿ ದೂತ, ಕೋಮಲ ರಾಠಿ, ಶ್ರದ್ಧಾ ಭಟ್ಟಡ, ದರ್ಶಿತಾ ಮಲಪಾಣಿ, ಸಾಕ್ಷಿ ಭಟ್ಟಡ, ವಂಶಿಕಾ ದೂತ, ರಾಜಶ್ರೀ ಮರ್ದಾ, ದುರ್ಗಾ ಜಾಜು, ನೀಲಾ ಉಪಾಧ್ಯ, ರಾಣಿ ದೈಮಾ, ಪ್ರಮಿಳಾ ಮನಿಯಾರ, ವೈಶಾಲಿ ರಾಠಿ, ಗೋಪಾಲ ಭಟ್ಟಡ, ಗೋಪಾಲ ಮಾಲಪಾಣಿ, ದೀಪಕ ದೂತ, ಕಮಲಕಿಶೋರ ತಾಪಡಿಯಾ, ಡಾ. ಚೇತನ ಉಪಾಧ್ಯ, ಡಾ. ರಾಜಗೋಪಾಲ ಝಂವರ, ಭರತ್ ದೂತ, ವೇಣುಗೋಪಾಲ ಸೋನಿ, ಗಿರೀಶ ಪಸಾರಿ, ಕೇಶವ ದೂತ, ಭರತ್ ತಾಪಡಿಯಾ, ಮುರಳಿ ತಿವಾಡಿ ಮತ್ತಿತರರು ಇದ್ದರು.