ಅವ್ಯವಸ್ಥೆಗೆ ಆಗರವಾದ ಆರೋಲಿ ಸರಕಾರಿ ಪ್ರಥಮಿಕ ಶಾಲೆ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ೨೨: ಮಾನವಿ ಪಟ್ಟಣದ ಆರೋಲಿ ಗ್ರಾಮದ ಸರಕಾರಿ ಹಿರಿಯ ಪ್ರಥಮಿಕ ಶಾಲೆ
ಅವಸ್ಥೆಗೆ ಅಗರವಾಗಿ ಬಿಟ್ಟಿದೆ, ಶಾಲೆಯಲ್ಲಿ ಪ್ರತ್ಯೇಕ ಶೌಚಲಯಗಳು ಇದ್ದು,ಇಲ್ಲದಂತೆ ಆಗಿಬಿಟ್ಟಿದೆ.
ಶೌಚಾಲಯವನ್ನು ಸರಿಯಾಗಿ ನಿರ್ವಹಣೆ ಮಾಡದೆ ಗಬ್ಬೆದ್ದು ನೀರಿಲ್ಲದೆ ಗಬ್ಬು ನಾರುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗಿದ್ದು ಅಕ್ಕಪಕ್ಕದ ಪಾಠದ ಕೊಠಡಿಗಳಿಗೆ ಗಬ್ಬು ವಾಸನೆಯಿಂದ ತೀರ ಸಮಸ್ಸೆಯಾಗುತ್ತಿದೆ.ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೋಂದರೆ ಉಂಟಾಗುತ್ತಿದೆ.
ಶಾಲೆಯ ಆಟದ ಮೈದಾನದ ತುಂಬೆಲ್ಲಾ ನೀರು ನಿಂತು ಪಾಚು ಗಟ್ಟಿದೆ ಇದನ್ನ ಕಂಡರೆ ಒಂದು ಕ್ಷಣ ನಿಬ್ಬೆರಾಗಾಗುವಂತೆ ಮಾಡುತ್ತದೆ. ಅಲ್ಲಿನ ಸ್ವಚ್ಛತೆ ವೆವಸ್ಥೆಯನ್ನು ಜವಬ್ದಾರಿಯುತ ಮುಖ್ಯೋಪಾಧ್ಯಾಯರು,ಗ್ರಾಮ ಪಂಚಾಯತ್ ಅಭಿವೃದ್ಧಿಧಿಕಾರಿಗಳು ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರು ಯಾವ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಎತ್ತಿ ತೋರಿಸಿಕೊಡುತ್ತದೆ.
ಶೌಚಲಗಳು ಗಬ್ಬುನಾರುತ್ತಿರುವ ಕಾರಣದಿಂದ ವಿದ್ಯರ್ಥಿಗಳು ಹಾಗೂ ಶಿಕ್ಷಕ,ಶಿಕ್ಷಕಿಯರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಏನೆ ಆಗಲಿ ಆದಷ್ಟು ಬೇಗನೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ವಾತವರಣವನ್ನು ನಿರ್ಮಾಣ ಮಾಡಬೇಕೆಂದು ಗ್ರಾಮದ ಜನರ ದೊಡ್ಡ ಮನವಿ ಯಾಗಿದೆ.
ಬಾಕ್ಸ್ ಐಟಂ
ಆರೋಲಿ ಸರಕಾರಿ ಹಿರಿಯ ಪ್ರಥಮಿಕ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಇದ್ದಾರೆ.
ಪಂಚಾಯತ್ ಅಭಿವೃದ್ಧಿಧಿಕಾರಿಗಳು, ಸದಸ್ಯರು, ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಮುಖ್ಯಶಿಕ್ಷಕರು ಶಾಲೆಯಲ್ಲಿ ಯಾವ ಮಟ್ಟಕ್ಕೆ ಕಾರ್ಯಾನಿರ್ವಹಿಸುತ್ತಾರೆ ಎಂಬುವುದು ಮೇಲ್ ನೋಟಕ್ಕೆ ಎದ್ದುಕಾಣುತ್ತಿದೆ ಪಂಚಾಯತಿಯ ಆಡಳಿತ ನಿದ್ರೆಗೆ ಜಾರಿದೆ.
ಕುಮಾರಸ್ವಾಮಿ
ಸಾಮಾಜಿಕ ಕಾರ್ಯಕರ್ತರ ಆರೋಲಿ ಗ್ರಾಮ