ಸೆ ೩ರಂದು ಮಾದಿಗ ಜಾಗೃತಿ ಪ್ರತಿಭಾ ಪುರಸ್ಕಾರ, ಸನ್ಮಾನ
ಸಿರವಾರ.ಅ.೨೨- ಮಾದಿಗ ಜಾಗೃತಿ ಯುವ ವೇದಿಕೆ ವತಿಯಿಂದ ಮಾನ್ವಿಯ ಖಾದ್ರಿ ಫಕ್ಷನ್ ಹಾಲ್ ನಲ್ಲಿ ಸೆಪ್ಟೆಂಬರ್ ೩ರಂದು ಪ್ರತಿಭಾ ಪುರಸ್ಕಾರ ಮತ್ತು ನೂತನ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊ ಳ್ಳಲಾಗಿದೆ ಎಂದು ಎಂ.ಆರ್.ಹೆಚ್.ಎಸ್ ಜಿಲ್ಲಾದ್ಯಕ್ಷ ಅಬ್ರಾಹಂ ಹೊನ್ನಟಗಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದ ಅವರು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಶೇ ೮೦ ರಷ್ಟು ಹಾಗೂ ಹೆಚ್ಚಿನ ಅಂಕ ಹಾಗೂ ಪಡೆದ ಮಾದಿಗ ಸಮಾಜದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಗವುದು, ವಿದ್ಯಾರ್ಥಿಗಳು ಅಥವಾ ಪಾಲಕರು ಅಗಷ್ಟ್ ೨೫ ರೊಳಗೆ ತಮ್ಮ ಮಾಹಿತಿಯನ್ನು ( ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಅಗತ್ಯ ಪ್ರಮಾಣ ಪತ್ರ) ಅರ್ಜಿ ರೂಪದಲ್ಲಿ ಸಲ್ಲಿಸಬೇಕು. ಅದೇ ರೀತಿ ನೂತನ ಪರಿಷತ್ ಸದಸ್ಯ ಎ.ವಸಂತ ಕುಮಾರ ಅವರನ್ನು ಸನ್ಮಾನಿಸಿ ಗೌರವಿಸಲಾಗವುದು.
ಸಮಾಜದ ವಿದ್ಯಾರ್ಥಿಗಳ ಪ್ರೋ ತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ಯಶಸ್ವಿಯಾಗಿಸಲು ಪ್ರತಿಯೊ ಬ್ಬರು ಶ್ರಮಿಸಬೇಕು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಡಿ.ಜಯಪ್ಪ, ಪ.ಪಂಚಾಯತಿ ಸದಸ್ಯ ಅಜೀತ್ ಕುಮಾರ ಹೊನ್ನಟಗಿ, ತಾಲೂಕ ಅದ್ಯಕ್ಷ ಚನ್ನಪ್ಪ ಬೂದಿನಾಳ, ಬಸವರಾಜ ಅತ್ತನೂರು, ಅಮರೇಶ ಬಾದರದಿನ್ನಿ, ಯಲ್ಲಪ್ಪ ನವಲಕಲ್, ಶಾಂತಪ್ಪ ಪಿತಗಲ್, ಮಲ್ಲಪ್ಪ ಜಿಂದಾವಲಿ, ಅಮರೇಶ ಜಗ್ಲಿ, ಬಸವರಾಜ ಗಚ್ಚಿನ ಮನೆ, ಹನುಮಂತ ಆದೋನಿ, ಆನಂದ, ಹನುಮೇಶ ಜಗ್ಲಿ ಶಾಖಾಪೂರು,