೩೧ ಕ್ಕೆ ಅಧ್ಯಕ್ಷ-ಉಪಾದ್ಯಕ್ಷ ಸ್ಥಾನಕ್ಕೆ ಚುನಾವಣೆ ಮುಹೂರ್ತ
ಸಿರವಾರ. ಅ.೨೨: ಸ್ಥಳೀಯ ಪ.ಪಂಚಾಯತಿಗೆ ಚುನಾವಣೆ ಜರುಗಿ ೧೯ ತಿಂಗಳು ನಂತರ ಕೊನೆಗೂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿ, ಅಗಷ್ಟ್ ೩೧ ಕ್ಕೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದೂ, ಬಿಜೆಪಿಯ ವಾರ್ಡ ನಂ ೫ ಸದಸ್ಯೆ ಲಕ್ಷ್ಮೀ ಆದೇಪ್ಪ ಸುಲಭವಾಗಿ ಉಪಾದ್ಯಕ್ಷ ಸ್ಥಾನ ಒದಗಿ ಬಂದಿದ್ದರೆ, ಕಾಂಗ್ರೇಸ್ ಸದಸ್ಯಗೆ ಅದ್ಯಕ್ಷ ಸ್ಥಾನ ಖಚಿತ ಎಂದು ಹೇಳಲಾಗುತ್ತಿದೆ, ಕಾಂಗ್ರೇಸ್ ನ ಮುಖಂಡರು ಹಿರಿಯರು, ಅವಕಾಶ ವಂಚಿತರು, ಪಕ್ಷ ನಿಷ್ಠರನ್ನು ಅದ್ಯಕ್ಷರನ್ನಾಗಿ ಮಾಡುತ್ತದೆಯೋ ಎಂದು ಸದಸ್ಯರೊಂದಿಗೆ ಆಯಾ ಸಮಾಜದವರು ಎದರು ನೋಡುತ್ತಿದ್ದಾರೆ.
ಸಿರವಾರ ಪ.ಪಂ ಒಟ್ಟು ೨೦ ಜನ ಸದಸ್ಯರ ಬಲದಲ್ಲಿ ಕಾಂಗ್ರೇಸ್ ೯, ಬಿಜೆಪಿ ೬, ೩ ಜೆಡಿಎಸ್, ೨ ಪಕ್ಷೇತರರು ಹೊಂದಿದೆ. ಇಬ್ಬರು ಪಕ್ಷೇತರರ ಪೈಕಿ ವಾರ್ಡ ನಂ೧೯ ಸದಸ್ಯ ಹನುಮಂತಿಮಲ್ಲಪ್ಪ ಈಗಾಗಲೇ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ಜೆಡಿಎಸನ ೩ ಜನ ಕೂಡ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ಬಿಜೆಪಿ ಪಾಳಯಕ್ಕೆ ೧೦ ಸದಸ್ಯರ ಬಲ ಇದ್ದಂತಾಗಿದೆ.
ಅತ್ತ ಕಾಂಗ್ರೆಸ ತನ್ನ ೯ ಸದಸ್ಯರು, ವಾರ್ಡ ನಂ ೦೮ ರ ಸದಸ್ಯ ಮಾರ್ಕಪ್ಪ ಕಾಂಗ್ರೇಸ್ ಜೊತೆ ಗುರುತಿಸಿಕೊಂಡಿದ್ದಾರೆ ಒಟ್ಟ ೧೦ ಸ್ಥಾನಗಳು ಶಾಸಕ ಮತ್ತು ಸಂಸದರ ಬೆಂಬಲದೊಂದಿಗೆ ೧೨ ಮತಗಳಾಗುತ್ತವೆ.
ಲಕ್ಷ್ಮಿಗೆ ಒಲಿದ ಅದೃಷ್ಠ:- ವಾರ್ಡ ನಂ ೦೫ ಲಕ್ಷ್ಮಿ ಆದೇಪ್ಪ ಅವರು ಜಿದಾಜಿದಿನ ಚುನಾವಣೆಯಲ್ಲಿ ಕೇವಲ ಒಂದು ಮತದಿಂದ ವಿಜೇತರಾದರು, ಈಗ ಎಸ್ ಟಿ ಮಹಿಳೆ ಮಿಸಲಾಗಿರುವುದರಿಂದ ೨೦ ಸದಸ್ಯರಿಲಿ ಇವರು ಒಬ್ಬರೆ ಎಸ್ ಟಿ ಮಹಿಳೆ ಆಗಿರುವ ಕಾರಣ ಬಯಸದೆ ಭಾಗ್ಯ ಒಲಿದಿದೆ. ಮುಸ್ಲಂರಿಗೆ ಅದ್ಯಕ್ಷ ಸ್ಥಾನ.? ಸಿರವಾರ ಮಂಡಲ ಪಂಚಾಯತಿ, ಗ್ರಾಮಪಂಚಾಯತಿಯಿಂದ ಪ್ರಸ್ತುತ ಪ.ಪಂಚಾಯತಿಯಾಗಿದರೂ ಒಮ್ಮೆಯೂ ಸಹ ಮುಸ್ಲಿಂರಿಗೆ ಅದ್ಯಕ್ಷ ಸ್ಥಾನ ಲಭಿಸಿಲ, ಸಾಮಾನ್ಯ ಮಿಸಲು ಬರುವುದು ಅಪರೂಪ ಈಗ ಬಂದಿದೆ, ಹಿರಿಯ ಸದಸ್ಯರಾದ ಹಸೇನ ಅಲಿ ಸಾಬ ಅವರನ್ನು ಅದ್ಯಕ್ಷರನ್ನಾಗಿಸಬೇಕು, ಕಾಂಗ್ರೇಸ್ ಪಕ್ಷಕ್ಕೆ ಮುಸ್ಲಿಂರು ನಿಷ್ಠರಾಗಿದ್ದಾರೆ ಎಂಬುದು ಒತ್ತಾಯ ಮಾಡಿದ್ದಾರೆ. ಮಾನ್ವಿ ಪುರಸಭೆಗೆ ಮುಸ್ಲಿಂ ಸದಸ್ಯರು ಅದ್ಯಕ್ಷರಾದರೆ ಸಿರವಾರದಲ್ಲಿ ಮಾಡಲಾಗಲ, ಮಾನ್ವಿ ಬೇರೆಯವರಿಗೆ ಮಾಡಿದರೆ ಸಿರವಾರ ಪ.ಪಂಚಾಯತಿಗೆ ಅದ್ಯಕ್ಷರಾಗಿ ಮಾಡುವ ಇರಾದೆ ಪಕ್ಷದ ಶಾಸಕರಲ್ಲಿ ಸಚಿವರಲ್ಲಿ ಇದೆ ಎಂದು ಹೇಳಲಾಗುತ್ತಿದೆ. ಉಪಾದ್ಯಕ್ಷ ಸ್ಥಾನ ಎಸ್ ಟಿ ಇರುವ ಕಾರಣ ಅದ್ಯಕ್ಷ ಸ್ಥಾನಕ್ಕೆ ಎಸ್ ಟಿ ಸಮುದಾಯದ ಸೂರಿ ದುರುಗಣ್ಣ ನಾಯಕ ಅವರನ್ನು ಮಾಡಿದರೆ ತಪ್ಪು ಸಂದೇಶ ಹೋಗಬಹುದೆಂದು ಕಾದು ನೋಡುತ್ತಿದ್ದಾರೆ. ವೈ.ಭೂಪನಗೌಡ ಆದರೆ ಇತಿಹಾಸ:- ಪ.ಪಂಚಾಯತಿಯಾದಾಗ ಜರುಗಿದ ಪ್ರಥಮ ಚುನಾವಣೆಯಲ್ಲಿ ವಾರ್ಡ ನಂ ೧೧ ಮಹಾದೇವಿ ಬಸವರಾಜ ಗಡ್ಲ ಅದ್ಯಕ್ಷ, ವಾರ್ಡ ನಂ ೫ ಕಾಶಿಂಮೋತಿ ಉಪಾದ್ಯಕ್ಷರಾಗಿದ್ದರು. ಇಬ್ಬರಿಗೂ ಪ್ರಥಮ ಚುನಾವಣೆಯಾಗಿತು. ಪ್ರಸ್ತುತ ಉಪಾದ್ಯಕ್ಷ ಸ್ಥಾನ ಎಸ್.ಟಿ ಮಹಿಳೆಯಾಗಿರುವ ಕಾರಣ ವಾರ್ಡ ನಂ ೫ ಲಕ್ಷ್ಮೀ ಆದೇಪ್ಪ ಅವಿರೋಧ ಆಯ್ಕೆ ಖಚಿತ, ಅದ್ಯಕ್ಷ ರಾಗಿ ವಾರ್ಡ ನಂ ೧೧ ರ ವೈ ಭೂಪನಗೌಡ ಆಯ್ಕೆಯಾದರೆ ಇತಿಹಾಸ ಮರುಕಳಿಸುವುದು. ಕಾಂಗ್ರೇಸ್ ನಡೆ ನಿಗೂಡ:- ಬಿಜೆಪಿಯಲ್ಲಿ ಸಂಖ್ಯಾ ಬಲದ ಕೊರತೆ ಕಾರಣ ಉಪಾದ್ಯಕ್ಷ ತೃಪ್ತಿ ಪಡುತ್ತಿದ್ದರೆ, ಕಾಂಗ್ರೇಸ್ ಸದಸ್ಯರು, ಅದ್ಯಕ್ಷ ಸ್ಥಾನದ ಆಕಾಂಕ್ಷಿಗಳು ಶಾಸಕರಾದ ಜಿ.ಹಂಪಯ್ಯನಾಯಕ, ಸಚಿವರಾದ ಎನ್.ಎಸ್.ಬೋಸರಾಜು ಮುಂದೆ ಒಂದು ಸಭೆ ಮಾಡಿದ್ದಾರೆ. ಆದರೆ ಸದಸ್ಯರು ಮಾತ್ರ ಇಂತವರನ್ನೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ಬಹಿರಂಗವಾಗಿ ಹೇಳದ ಕಾರಣ ಶಾಸಕರು – ಸಚಿವರು ಆಕಾಂಕ್ಷಿಗಳಲ್ಲಿಯೆ ಯಾರಾದರು ಒಬ್ಬರ ಹೆಸರು ತಿಳಿಸಿ, ೨ ವರೆ ವರ್ಷದಲ್ಲಿ ಇಬ್ಬರಿಗೆ ಅದಿಕಾರ ಭಾಗ್ಯ ಕರುಣಿಸುವುದಕ್ಕೆ ಒಪ್ಪಿದ್ದಾರೆಂದು ಹೇಳಲಾಗುತ್ತಿದೆ. ಇನೂ ವಾರ್ಡ ನಂ ೯ ರ ಸದಸ್ಯ ಮಾರ್ಕಪ್ಪ ಅವರು ನಾನು ಹಿಂದೆ ಕಾಂಗ್ರೇಸ್ ಪಕ್ಷದಿಂದ ನನ್ನ ಮಡದಿ ಸದಸ್ಯರಾಗಿದರು, ಈಗ ನಾನು ಸದಾ?ಯರಾಗಿರುವೆ, ಅನುಭವ ಹಿರಿತನ ಇದೇ, ಕಾಂಗ್ರೇಸ್ ಪಕ್ಷಕ್ಕೆ ನಿಷ್ಠರಾಗಿರುವೆ, ಅದ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವೆ ಶಾಸಕರು, ಸಚಿವರು ಆಶಿರ್ವಾದ ಮಾಡಿದರೆ ಅದ್ಯಕ್ಷ ಗಾದಿಗೆ ಏರುವೆ ಎಂದಿದ್ದಾರೆ. ಸಿರವಾರ. ಪಟ್ಟಣದಲ್ಲಿ ನೂರಾರು ಸಮಸ್ಯೆಗಳು ಇವೇ. ನಿತ್ಯ ವಾರ್ಡನಲ್ಲಿ ಸಂಚರಿಸುವ, ಪಂಚಾಯತಿಯಲ್ಲಿ ಅದಿಕಾರಿಗಳು ಸಿಬ್ಬಂದಿಗಳು ಆಡಿದೇ ಆಟವಾಗಿದೆ ಅದನ್ನು ತಡೆದು ಸಾರ್ವಜನಿಕರಿಗೆ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಮಾಡುವವರು ಆದರೆ ಉತ್ತಮ ಎಂದು ಜನರ ಆಪೇಕ್ಷೆಯಾಗಿದೆ.