ಪರಿಸರ ಉಳಿಸದಿದ್ದರೆ ಅಪಾಯ ಖಂಡಿತ
ಚನ್ನಮ್ಮನ ಕಿತ್ತೂರು,ಆ.22: ನಮ್ಮ ಪರಿಸರ ಉಳಿಸಲು ಈಗಲೇ ನಾವು ಎಚ್ಚೇತ್ತುಕೊಳ್ಳದಿದ್ದರೆ. ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಇದನ್ನು ಮತ್ತೆ ಸರಿಪಡಿಸಲಾಗದಂತಹ ಸ್ಥಿತಿಗೆ ನಾವು ತಲುಪುತ್ತೇವೆ ಎಂದು ಅಧ್ಯಕ್ಷೆ ಲಕ್ಷ್ಮೀ ಚಲವಾದಿ ಹಾಗೂ ಮಾಜಿ ಅಧ್ಯಕ್ಷೆ ಲಕ್ಷ್ಮೀ ಮಡ್ಡಿಮನಿ ಹೇಳಿದರು.
ಸಮೀಪದ ಖಾನಾಪೂರ ತಾಲೂಕಿನ ಮಂಗೇನಕೊಪ್ಪÀ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ ಅಂಗಳದಲ್ಲಿ ವನಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಧ್ಯಕ್ಷಸ್ಥಾನ ವಹಿಸಿಕೊಂಡು ಅವರು ಗಿಡನೆಟ್ಟು ನೀರುನಿಸಿ ಚಾಲನೆ ನೀಡಿ ಮಾತನಾಡಿದ ಸುತ್ತಮುತ್ತಲಿನ ವಾತಾವರಣ ಕೆಡದಂತೆ ನೋಡಿಕೊಳ್ಳುವ ಜಜವಾಬ್ದಾರಿ. ನಮ್ಮೇಲ್ಲರ ಮೇಲಿದೆ.
ಪ್ಲಾಸ್ಟಿಕ್‍ನಂತಹ ವಿಷಕಾರಿ ವಸ್ತುಗಳು ಪರಿಸರವನ್ನು ಹಾಳು ಮಾಡುತ್ತಿವೆ. ನೀರನ್ನು ಉಳಿಸುವುದು. ಗಾಳಿ ಮಲಿನವಾಗದಂತೆ ನೋಡಿಕೊಳ್ಳುವುದು ಮತ್ತು ನಮ್ಮ ಪರಿಸರ ಕಾಪಾಡುವುದು ನಮ್ಮ ಕರ್ತವ್ಯ. ಪರಿಸರ ನಾಶದಿಂದ ದುಷ್ಟಪರಿಣಾಮವನ್ನು ಎದುರಿಸುತ್ತಿದ್ದೇವೆ ಋತುಮಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಕಾಲಕ್ಕೆ ಮಳೆ ಬಾರದೇ ಅತಿವೃಷ್ಟಿ-ಅನಾವೃಷ್ಠಿವುಂಟಾಗುತ್ತಿವೆ. ಹಾಗಾಗಿ ಆದಷ್ಟು ಬೇಗ ನಾವು ಯಾವಾಗ ಜಾಗೃತರಾಗುತ್ತೇವೋ ಅಷ್ಟು ಒಳ್ಳೆಯದಾಗುತ್ತದೆಂದರು.
ಈ ವೇಳೆ ಗ್ರಾಪಂ ಸದಸ್ಯರುಗಳಾದ ಜಗದೀಶ ಪಾಟೀಲ, ರಾಜು ತಳವಾರ, ಗ್ರಾಪಂ ಅಭಿವೃದ್ದಿ ಅಧಿಕಾರಿ ರಾಜು ತಳವಾರ, ತಾಪಂ ಮಾಜಿ ಸದಸ್ಯ ಶಿವಾನಂದ ಚಲವಾದಿ, ಕಾರ್ಯದಶಿ ಶಿವಾನಂದ ಝಂಡೇ, ಶಾಲೆ ಹಾಗೂ ಗ್ರಾಪಂ ಸಿಬ್ಬಂದಿ ಗ್ರಾಮದ ಹಿರಿಯರು, ಶಾಲಾ ಪ್ರಧಾನಗುರು, ಸಹಶಿಕ್ಷಕರು, ಮಕ್ಕಳು, ಗ್ರಾಪಂ ಸರ್ವಸದಸ್ಯರು ಉಪಸ್ಥಿತರಿದ್ದರು.