ರಕ್ಷಾ ಬಂಧನ ಕಾರ್ಯಕ್ರಮ
ಚನ್ನಮ್ಮನ ಕಿತ್ತೂರು,ಆ.22: ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ರಕ್ಷಾ ಬಂಧನ ಹಬ್ಬ. ಇದು ಪ್ರಾಚೀನ ಕಾಲದಿಂದಲೂ ಬಹಳ ಪ್ರಾಮುಖ್ಯತೆ ಹೊಂದಿದೆ ಎಂದು ಸಿಪಿಐ ಶಿವಾನಂದ ಗುಡದನಟ್ಟಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ (ರಿ) ಶಿವನೂರು-ಕಿತ್ತೂರು ವಲಯದ ಮಹಿಳೆಯರಿಂದ ಕಿತ್ತೂರು ಪೋಲಿಸ್ ಠಾಣೆಯಲ್ಲಿ ರಕ್ಷಾ ಬಂಧನದ (ರಾಖಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದವರು.
ಈ ವೇಳೆ ಕ್ರೈಂ ಪಿಎಸ್‍ಐ ಪ್ರವೀಣ ಕೋಟಿ, ಎಎಸ್‍ಐ ರಮೇಶ ಗೆಜೇರಿ, ಮುಖ್ಯ ಪೇದೆಗಳಾದ ಬಸವರಾಜ ಪರಗನ್ನವರ, ರಾಯಪ್ಪ ಶೀಲಿ, ನಂದಗೋಪಾಲ ನಾಯಕ, ಶಿವಾನಂದ ಹುಣಶೀಕಟ್ಟಿ, ಮಹಿಳಾ ಪೇದೆ ಲಕ್ಷ್ಮೀ ಕುಂಬಾರ, ರಾಜೇಶ್ವರಿ ಜಾಧವ, ಸಂಘಧ ಸೇವಾ ಪ್ರತಿನಿಧಿಗಳಾದ, ರಾಜೇಶ್ವರಿ ಜಾಧವ, ರೇಖಾ ಅಸುಂಡಿ, ಆಶಾ ಹಡಪದ, ಸುಮಿತ್ರಾ ಬಂಡಿವಡ್ಡರ್, ಸಾವಿತ್ರಿ ಹಣಜಿ. ಸೇರಿದಂತೆ ಇನ್ನುಳಿದ ಸಿಬ್ಬಂದಿಯಿದ್ದರು.