ಲಕ್ಷ್ಮೇಶ್ವರ ಪುರಸಭೆ ಕಾಂಗ್ರೆಸ್ ತೆಕ್ಕೆಗೆ
ಲಕ್ಷ್ಮೇಶ್ವರ,ಆ.22: ಪಟ್ಟಣದ ಪುರಸಭೆಗೆ ಹತ್ತನೆಯ ಅವಧಿಗಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಬುಧವಾರ ಪುರಸಭಾ ಭವನದಲ್ಲಿ ಜರುಗಿತು.
ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.
ನಾಟಕೀಯ ಬೆಳವಣಿಗೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿದ್ದ ಎಂಟನೇ ವಾರ್ಡಿನ ಸದಸ್ಯೆ ಯಲ್ಲವ್ವ ಗಂಗಪ್ಪ ದುರ್ಗಣ್ಣನವರ್ ಕಾಂಗ್ರೆಸ ಪಕ್ಷಕ್ಕೆ ಸೇರುವ ಮೂಲಕ ಬಿಜೆಪಿಗೆ ಪೆಟ್ಟು ಕೊಟ್ಟರು.
ಅಧ್ಯಕ್ಷ ಸ್ಥಾನಕ್ಕೆ ಯಲ್ಲವ್ವ ಗಂಗಪ್ಪ ದುರ್ಗಣ್ಣನವರ ಮತ್ತು 18ನೇ ವಾರ್ಡಿನ ಕವಿತಾ ಗೋವಿಂದಪ್ಪ ಶರ ಶೂರಿ ನಾಮಪತ್ರ ಸಲ್ಲಿಸಿದ್ದರು ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನ 21ನೇ ವಾರ್ಡಿನ ಫಿರ್ದೋಷ್ ಆಡೂರ್ ಮತ್ತು 9ನೇ ವಾರ್ಡಿನ ಕಾಂಗ್ರೆಸ್ಸಿನ ಸದಸ್ಯ ಮಹದೇವಪ್ಪ ಅಣ್ಣಿಗೇರಿ ನಾಮಪತ್ರ ಸಲ್ಲಿಸಿದರು.
ಚುನಾವಣಾ ಅಧಿಕಾರಿಯಾಗಿದ್ದ ತಹಶೀಲ್ದಾರ್ ವಾಸುದೇವ್ ವಿ ಸ್ವಾಮಿಯವರು ಮೊದಲು ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ಘೋಷಿಸಿ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸುವಂತೆ ತಿಳಿಸಿದರು ಆಗ ಕಾಂಗ್ರೆಸ್ಸಿನ 13 ಸದಸ್ಯರು ಯಲ್ಲವ್ವ ದುರ್ಗಣ್ಣವರ್ ಬೆಂಬಲಿಸಿದರು ಅದೇ ರೀತಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕವಿತಾ ಗೋವಿಂದಪ್ಪ ಶರ ಶೂರಿ ಅವರಿಗೆ ಶಾಸಕ ಚಂದ್ರು ಲಮಾಣಿ ಅವರು ಸಹ ಮತದಾನ ಮಾಡಿ ಕೇವಲ 10 ಮತಗಳನ್ನು ಪಡೆಯುವಲ್ಲಿ ಬಿಜೆಪಿ ಸಫಲವಾಯಿತು
ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿ ಮತ್ತೊಂದು ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ಸಿನ ಪರ ಅಧ್ಯಕ್ಷ ಸ್ಥಾನಕ್ಕೆ ಮತ ಚಲಾಯಿಸಿದ್ದ ಮಹದೇವಪ್ಪ ಅಣ್ಣಿಗೇರಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಮತ್ತೊಂದು ಗೊಂದಲ ಏರ್ಪಟ್ಟಿತು.
ಉಪಾಧ್ಯಕ್ಷ ಸ್ಥಾನಕ್ಕೂ ಸಹ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಫಿರ್ದೋಷ್ ಆಡೂರ 13 ಮತಗಳನ್ನು ಮತ್ತು ಮಹದೇವಪ್ಪ ಅಣ್ಣಿಗೇರಿ10 ಮತಗಳನ್ನು ಪಡೆದರು . ಉಪಾಧ್ಯಕ್ಷ ಸ್ಥಾನವು ಸಹ ಕಾಂಗ್ರೆಸ್ಸಿನ ಪಾಲಾಯಿತು.
ಘೋಷಿಸುತ್ತಿದ್ದಂತೆ ಕಾಂಗ್ರೆಸ್ಸಿನ ಕಾರ್ಯಕರ್ತರು ಪರಸ್ಪರ ಗುಲಾಲು ಎರಚಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವವನ್ನು ಆಚರಿಸಿದರು.
ಕಳೆದ 15 ವರ್ಷಗಳ ನಂತರ ಇದೇ ಮೊದಲ ಬಾರಿ ಹೊಂದಾಣಿಕೆ ರಾಜಕೀಯಕ್ಕೆ ತೆರೆ ಬಿದ್ದಿದ್ದು ಬಹುತೇಕ ಲೋಕಸಭಾ ಚುನಾವಣೆಯ ಎಫೆಕ್ಟ್ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ
ವಿಜಯೋತ್ಸವ ಸಂದರ್ಭದಲ್ಲಿ ಮಾಜಿ ಶಾಸಕರಾದ ರಾಮಣ್ಣ ಲಮಾಣಿ ರಾಮಕೃಷ್ಣ ದೊಡ್ಡಮನಿ ಸುಜಾತ ದೊಡ್ಮನಿ ಗುರುನಾಥ್ ದಾನಪ್ಪನವರ ವಿಜಿ ಪಡಿಗೇರಿ ಸೋಮಣ್ಣ ಬೆಟಗೇರಿ ಪದ್ಮರಾಜ ಗೌಡ ಪಾಟೀಲ ಕಿರಣ ನವಲೆ ಸತೀಶ್ ಗೌಡ ಪಾಟೀಲ ರಾಜು ಹೊಳಲಾಪುರ ದಾದಾಪೀರ್ ಮುಚಾಲೆ ನೀಲಪ್ಪ ಶರ್ಶುರಿ ಮುದುಕಪ್ಪ ಗದ್ದಿ ಮಂಜಪ್ಪ ಶರಶೂರಿ ಶೇಖಣ್ಣ ಕಾಳೆ ಸದಾನಂದ ನಂದಣ್ಣನವರ ಶರಣು ಗೋಡಿ ರಾಮು ಅಡ್ಗಿಮನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ ಆರ್ ಕೊಪ್ಪದ ನಗರ ಘಟಕದ ಅಧ್ಯಕ್ಷ ಅಂಬರೀಶ ತೆಂಬದಮನಿ ಸೇರಿದಂತೆ ಕಾಂಗ್ರೆಸ್ಸಿನ ಸದಸ್ಯರು ಪಾಲ್ಗೊಂಡಿದ್ದರು.
ತಹಸಿಲ್ದಾರ್ ವಾಸದೇವ ವಿ ಸ್ವಾಮಿ ಮುಖ್ಯ ಅಧಿಕಾರಿ ಮಹೇಶ್ ಹಡಪದ ಪುರಸಭೆ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಚುನಾವಣೆಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.