ತರಬೇತಿ ಕಾರ್ಯಕ್ರಮ
ನವಲಗುಂದ,ಆ22: ಇಂದಿನ ಡಿಜಿಟಲ್ ಯುಗದಲ್ಲಿ ನಾವು ಎಷ್ಟೇ ಪರಿಣಿತರಿದ್ದರು ನಮಗೆ ತರಬೇತಿ ಅತ್ಯವಶ್ಯ ಆದರೆ ತರಬೇತಿ ಪಡೆಯಲು ವಯಸ್ಸಿನಗಿಂತ ಮನಸ್ಸು ಮುಖ್ಯ ಎಂದು ಮಾಜಿ ವಿಧಾನ ಪರಿಸತ್ ಸದಸ್ಯರಾದ ಮೋಹನ ಲಿಂಬಿಕಾಯಿ ಹೇಳಿದರು
ಅವರು ಪಟ್ಟಣದ ಪಿಎಲ್ ಡಿ ಬ್ಯಾಂಕಿನ ಶ್ರೀ ಶಂಕರಗೌಡ ಶಲವಡಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು ಜಿಲ್ಲಾ ಸಹಕಾರ ಯೂನಿಯನ್ ಧಾರವಾಡ, ಕೆ. ಸಿ. ಸಿ. ಬ್ಯಾಂಕ್ ಧಾರವಾಡ ಹಾಗೂ ಸಹಕಾರ ಇಲಾಖೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಪ್ಯಾಕ್ಸ್ ಸೋಸಾಯಟಿಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೆ.ಸಿ ಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬಾಪುಗೌಡ ಪಾಟೀಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯೂನಿಯನ್ ಅಧ್ಯಕ್ಷ ಶಂಕರಪ್ಪ ರಾಯನಾಳ, ನಿರ್ದೇಶಕರಾದ ಪಕ್ಕೀರಗೌಡ ಕಲ್ಲನಗೌಡ್ರ, ಮುಖ್ಯಕಾರ್ಯ ನಿರ್ವಣಾಧಿಕಾರಿ ಸವಿತಾ ಹಿರೇಮಠ, ಪ್ರಾಚಾರ್ಯರಾದ ವೆಂಕಟರಮಣ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಗುರುಶಾಂತಗೌಡ ಪಾಟೀಲ್ ಉಪಾಧ್ಯಕ್ಷ ಲಕ್ಷ್ಮಣ ನೀಡವಣಿ, ನಾಗನಗೌಡ ಪಾಟೀಲ್ ಸೇರಿದಂತೆ ಜಿಲ್ಲಾ ಯೂನಿಯನ್ ಅಧ್ಯಕ್ಷರು ಪದಾಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.