ಪ್ರತಿಭಾ ಪುರಸ್ಕಾರ
ಧಾರವಾಡ,ಆ22 : ವ್ಯಕ್ತಿಯಜೀವನದಲ್ಲಿ ವ್ಯಕ್ತಿತ್ವಕ್ಕೆ ಮಹತ್ವದ ಸ್ಥಾನವಿದ್ದು, ದಿ. ಪ್ರೊ.ಆರ್. ವಿ. ಹೊರಡಿಅವರದು ದಿವ್ಯ ವ್ಯಕ್ತಿತ್ವದಅನುಕರಣೀಯ ಬದುಕುಎಂದುಕರ್ನಾಟಕ ಕಲಾ ಮಹಾವಿದ್ಯಾಲಯದರಾಜ್ಯಶಾಸ್ತ್ರ ಪ್ರಾಧ್ಯಾಪಕಡಾ.ಮಹಾದೇವಪ್ಪ ದಳಪತಿ ಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಸಂಯ ಮತ್ತು ಪ್ರಿಯಾಆರ್. ಹೊರಡಿ ಹಾಗೂ ದಿ. ಪ್ರೊ.ಆರ್.ವಿ. ಹೊರಡಿ ಸಂಸ್ಮರಣೆಯದತ್ತಿ ಅಂಗವಾಗಿ ಆಯೋಜಿಸಿದ್ದ ‘ಪ್ರತಿಭಾ ಪುರಸ್ಕಾರ’ ಪ್ರಧಾನಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ದಿ.ಪ್ರೊ.ಆರ್.ವ್ಹಿ. ಹೊರಡಿ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದರು.ಯಾವುದೇಟಿಪ್ಟಣಿಇಲ್ಲದೇ ನಿರರ್ಗಳವಾಗಿ ಉಪನ್ಯಾಸ ಮಾಡುವಚಾಕಚಕ್ಯತೆಅವರಲ್ಲಿತ್ತು.ಅವರು ಉಪನ್ಯಾಸಗಳಿಂದ ಪ್ರಭಾವಿತರಾಗಿದ್ದ ಎಷ್ಟೋ ವಿದ್ಯಾರ್ಥಿಗಳು ಇಂದುಉನ್ನತ ಹುದ್ದೆಯಲ್ಲಿದ್ದಾರೆ. ವಿದ್ಯಾರ್ಥಿಗಳ ಶ್ರೇಯೋಭಿಲಾಷೆಗಾಗಿಕರ್ತವ್ಯ ಪ್ರಜ್ಞೆಯಿಂದಕಾರ್ಯ ನಿರ್ವಹಿಸಿದರು.ಇಂದುದತ್ತಿ ಮೂಲಕ ಅವರ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಲಾಗುತ್ತಿದೆ.ಅವರೊಬ್ಬಜನಮಾನಸದ ವ್ಯಕ್ತಿಗಳು.ಅವರಜೀವನ ಇಂದಿನ ಯುವಕರಿಗೊಂದುಅನುಕರಣೀಯಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ದಿ. ಪ್ರೊ.ಆರ್.ವ್ಹಿ. ಹೊರಡಿ ಸ್ನೇಹಜೀವಿಗಳು ಮಕ್ಕಳಿಗೆ ಶಿಕ್ಷಣದ ಜೊತೆ ಒಳ್ಳೆ ಸಂಸ್ಕಾರ ಬೆಳೆಸಿದವರು.ಅವರು ಸದಾಕಾಲ ಎಲ್ಲರಿಗೂ ಸ್ಮರಣೀಐರುಎಂದರು.
ದತ್ತಿಕಾರ್ಯಕ್ರಮದಲ್ಲಿಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಹಾಗೂ ಕಲಾ ಮಹಾವಿದ್ಯಾಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಮರ್ಥಕೆರಿಮನಿ, ದೀಪಾ ಕತ್ತಿ, ದೀಪಾ ದೇವಗಿರಿ, ಸಿದ್ಧಣ್ಣ ಪೂಜಾರಿಅವರಿಗೆ ಪ್ರತಿಭಾ ಪುರಸ್ಕಾರ ನೀಡಿಗೌರವಿಸಲಾಯಿತು. ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.
ದತ್ತಿದಾನಿ ಶ್ರೀಮತಿ ಪ್ರಭಾವತಿ ಹೊರಡಿ ವೇದಿಕೆಯಲ್ಲಿದ್ದರು. ಎಸ್.ಜಿ. ಚಿಕ್ಕನರಗುಂದದತ್ತಿಕುರಿತು ಮಾತನಾಡಿದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು.ಡಾ. ಧನವಂತ ಹಾಜವಗೋಳ ವಂದಿಸಿದರು.
ಕಾರ್ಯಕ್ರಮದಲ್ಲಿ ಸತೀಶತುರಮರಿ, ಡಾ.ಶೈಲಜಾಅಮರಶೆಟ್ಟಿ, ಶಿವಾನಂದ ಭಾವಿಕಟ್ಟಿ, ವೆಂಕಟೇಶ ಮಾಚಕನೂರ, ಡಾ.ಪಿ.ಎಸ್. ಹಳ್ಯಾಳ, ಪ್ರೊ.ಎನ್. ಆರ್.ಬಾಳಿಕಾಯಿ, ಎಂ.ಜಿ.ಸುಬೇದಾರ, ರವಿಕುಮಾರ ಹರ್ತಿ, ಎಂ.ಎಸ್. ನರೇಗಲ್ ಸೇರಿದಂತೆ ದಿ.ಪ್ರೊ.ಆರ್.ವ್ಹಿ. ಹೊರಡಿ ಪರಿವಾರದವರು, ಅಭಿಮಾನಿಗಳೂ, ಶಿಷ್ಯಂದಿರು ಉಪಸ್ಥಿತರಿದ್ದರು.