ಜ್ಞಾನದಿಂದ ಉತ್ತಮ ಜೀವನ ರೂಪಿಸಿಕೊಳ್ಳಿ
ಬೈಲಹೊಂಗಲ,ಆ22: ಮಹಾವಿದ್ಯಾಲಯದಿಂದ ಪಡೆದ ಜ್ಞಾನದಿಂದ ವಿದ್ಯಾರ್ಥಿನಿಯರು ತಮ್ಮ ಮುಂದಿನ ಉಜ್ವಲ ಜೀವನ ರೂಪಿಸಿಕೊಳ್ಳಿ ಎಂದು ಪತ್ರಿ ಬಸವೇಶ್ವರ ಅನಿಭವ ಮಂಟಪದ ಅಧ್ಯಕ್ಷೆ ಶರಣೆ ಪ್ರೇಮಾ ಅಂಗಡಿ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ 2023-24 ನೇ ಸಾಲಿನ ಸಾಂಸ್ಕøತಿಕ, ಕ್ರೀಡಾ,, ರಾಷ್ಟ್ರೀಯ ಸೇವಾ ಯೋಜನೆ ಮತ್ತು ವಿವಿಧ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೂಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿನಿಯರು ಆಧುನಿಕ ಆಕರ್ಷಣಿಯ ಜೀವನಕ್ಕೆ ಒಳಗಾಗದೆ ಸಂಸ್ಕಾರಯುತ ಜೀವನ ನಿಮ್ಮದಾಗಿಸಿಕೊಳ್ಳಿ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಸನಸಾಬ ಗೊರವನಕೊಳ್ಳ ಮಾತನಾಡಿ,ಸಿಡಿಸಿ ಅಧ್ಯಕ್ಷರು ಮತ್ತು ಮತಕೇತ್ರದ ಶಾಸಕ ಮಹಾಂತೇಶ ಕೌಜಲಗಿಯವರ ಕನಸಾದ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿನಿಯರ ಉಜ್ವಲ ಶಿಕ್ಷಣಕ್ಕಾಗಿ ಸುಮಾರು 6.5ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಆತ್ಯಾಧುನಿಕ ಸೌಲಭ್ಯವುಳ್ಳ ಮಹಾವಿದ್ಯಾಲಯ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ ಎಂದರು.
ಪ್ರಾಚಾರ್ಯ ಬಿ.ಕೆ. ಮದವಾಲ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಾವಿದ್ಯಾಲಯದಲ್ಲಿ ಪ್ರಸ್ತುತ ಸಾಲಿನಿಂದ ಬಿ,ಸಿ,ಎ, ಬಿ.ಎಸ್.ಸಿ ವರ್ಗಗಳು ಪ್ರಾರಂಭವಾಗಿದ್ದು, ಮುಂದಿನ ವರ್ಷ ಎ.ಕಾಂ. (ಪಿಜಿ) ಕೋರ್ಸ ಪ್ರಾರಂಭಿಸಲಾಗುವದು ಎಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಆನಂದ ವಾಲಿ, ಶಿವಕುಮಾರ ಹಂಪನ್ನವರ, ಬಸವರಾಜ ಕಿತ್ತೂರ ಸಂಗಪ್ಪ ಕಾದ್ರೋಳ್ಳಿ ಹಾಗೂ ಜಯಶ್ರೀ ಮತ್ತಿಕೊಪ್ಪ ಸಾಂಸ್ಕ್ರತಿಕ ವಿಭಾಗದ ಸಂಚಾಲಕ ಪ್ರೊ. ಎಂ. ವಾಯ್. ಹಿತಾರಗೌಡರ, ಝೆಡ್.ಎಂ.ನನ್ನೆ, ವಿದ್ಯಾರ್ಥಿ ಪ್ರತಿನಿಧಿ ಮಹಾದೇವಿ ಛಬ್ಬಿ ವೇದಿಕೆಯಲ್ಲಿದ್ದರು.
ಕೋಲಕತ್ತಾ ಮತ್ತು ಆಂದ್ರ ಪ್ರದೇಶ ತಂಡಗಳಿಗೆ ಪ್ರತಿನಿಧಿಸಿ ವಾಲಿಬಾಲ್ ಪ್ರಥಮ ಸ್ಥಾನ ಗಳಿಸಿದ ತಂಡ ವಿವಿಧ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳನ್ನು ಸನ್ಮಾನಿಸಲಾಯತು.
ಕ್ರೀಡಾ ಸಂಚಾಲಕ ಬಿ.ಸಿ. ಹಾರ್ಲಾಪೂರ ಸ್ವಾಗತಿಸಿದರು, ಎನ್.ಎಸ್.ಎಸ್. ಘಟಕದ ಪ್ರೊ. ಕೆ.ಟಿ. ತಿಪ್ಪೇಸ್ವಾಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಪಕರ ಬಳಗ ಹಾಗೂ ಅತಿಥಿ ಉಪನ್ಯಾಸಕರು, ಬಿ, ಬಿ.ಕಾಂ, ಬಿಬಿಎ ವಿದ್ಯಾರ್ಥಿನಿಯರು ಹಾಜರಿದ್ದರು. ನಂತರ ಸಾಂಸ್ಕøತಿಕ ಮನರಂಜನೆ ಕಾರ್ಯಕ್ರಮ ಜರುಗಿದವು.