ಬಸವಾದಿ ಶರಣರ ನಿಜವಾದ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು : ಶಿವಣ್ಣ ಇಂದ್ವಾಡಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.22-ಶರಣರ ಬದುಕೇ ನಮಗೆ ದಾರಿದೀಪ. ಅವರ ಬದುಕೇ ನಮಗೆ ಮಾರ್ಗದರ್ಶನಎಂದು ಸಾಹಿತಿಇಂದ್ವಾಡಿ ಶಿವಣ್ಣ ತಿಳಿಸಿದರು.
ಅವರುಪಟ್ಟಣದ ವಿಶ್ವಚೇತನ ಸಂಸ್ಥೆಯಆವರಣದಲ್ಲಿಜೆಎಸ್‍ಬಿ ಪ್ರತಿμÁ್ಠನದ ವತಿಯಿಂದ ಹೆಚ್‍ಕೆಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ‘ವಚನ ಶ್ರಾವಣ’ ಕಾರ್ಯಕ್ರಮವನ್ನುಗಿಡಕ್ಕೆ ನೀರೆರೆದು, ಕನ್ನಡ ನಾಡಿನ ಸಾಂಸ್ಕøತಿಕ ನಾಯಕರಾದ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದಅವರು, ಶರಣರ ಬದುಕೇ ನಮಗೆ ದಾರಿದೀಪ,ಅವರ ಬದುಕೇ ನಮಗೆ ಮಾರ್ಗದರ್ಶನ, ಶರಣರ ವಚನಗಳು ನಮ್ಮಕಿವಿಯ ಮೇಲೆ ಬೀಳುತ್ತಾ, ಪ್ರಭಾವ ಬೀರುತ್ತಾ, ನಮ್ಮಜೀವನವನ್ನು ಸರಿದಾರಿಗೆಕರೆದ್ಯೊಯುತ್ತವೆ.
ಮನಸ್ಸು ಮಲೀನಗೊಂಡಿರುವ ಈ ಸಮಯದಲ್ಲಿ ನಾವು ಸುಂದರ ಸಮಾಜಕಟ್ಟಲು ವಚನಗಳ ಆಂದೋಲನ ನಡೆಸಬೇಕಿದೆ. ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿಅನುಭಾವ ಸಾರವನ್ನುಕಟ್ಟಿಕೊಟ್ಟವರು ನಮ್ಮ ಬಸವಾದಿ ಶರಣರು. ಆದರೆ, ಇತ್ತೀಚಿನ ದಿನಗಳಲ್ಲಿ ವಚನ ದರ್ಶನಎನ್ನುವ ವಿಕೃತ ಕೃತಿಗಳ ಮೂಲಕ ಬಸವಾದಿ ಶರಣರ ನಿಜವಾದ ವಚನಗಳನ್ನು ತಿರುಚಿ, ಬಲಪಂಥೀಯ ಮಾಡಲು ಕೆಲವು ವಿಕೃತ ಮನಸ್ಸುಗಳು ಹಪಹಪಿಸುತ್ತಿವೆ. ಇಂದಿನ ಯುವ ಪೀಳಿಗೆಯು ಅದನ್ನುಒಪ್ಪದೆಖಂಡಿಸಬೇಕು. ಶರಣರ ನಿಜವಾದಆಶಯವನ್ನುಅರಿಯಬೇಕು. ವಚನಗಳ ನಿಜಾರ್ಥ ಸಮಾಜಕ್ಕೆ ತಿಳಿಸುವ ಕೆಲಸವಾಗಬೇಕು. ಶರಣರ ಮಾತುಗಳೆಂದರೆ ಅದುಜ್ಯೋರ್ತಿಲಿಂಗಎಂದು ಬಣ್ಣಿಸಿದರು.
ಶರಣರು ಸರ್ವಕಾಲಕ್ಕೂ ಶ್ರೇಷ್ಠರು. ಯಾವುದೇ ಭೇದ ಭಾವವಿಲ್ಲದೆ ಸಮ ಸಮಾಜದಕನಸನ್ನು ನೆನಸು ಮಾಡಿದವರು ಬಸವಾದಿ ಶರಣರು. ಶ್ರಮಿಕ ವರ್ಗದಜನರುಕಟ್ಟಿದಕಲ್ಯಾಣ ಸಾಮ್ರಾಜ್ಯದ ನಿಜಕ್ಕೂ ಬಹಳ ಸುಂದರ. ಶರಣರ ಶ್ರೇಷ್ಠತೆಯುಅವರ ನಡೆ ನುಡಿಯಲ್ಲಿದೆ. ನುಡಿದಂತೆ ನಡೆ, ನಡೆದಂತೆ ನುಡಿಅವರಜೀವನ. ಸಮಾಜದ ಸ್ವಾಸ್ಥ್ಯಕಾಪಾಡಲು, ಸತ್ಯ ಶುದ್ಧಜೀವನ ನಡೆಸಲು ಬಸವಾದಿ ಶರಣರು ನಮಗೆ ಕೊಟ್ಟ ವಚನ ಸಾಹಿತ್ಯವು, ಸಾಮಾಜಿಕಜೀವನದಲ್ಲಿ ನಮ್ಮನ್ನುಯೋಗ್ಯ ಮನುಷ್ಯನನ್ನಾಗಿ ಮಾಡಲು ಬಹಳ ಉಪಯುಕ್ತವಾಗಿದೆಎಂದರು.
ಶರಣರ ವಚನ ಸಾಹಿತ್ಯಅಜ್ಞಾನದಿಂದಜ್ಞಾನದಕಡೆಗೆ ನಮ್ಮನ್ನುಕರೆದೊಯ್ಯುತ್ತದೆ. ಈ ನಿಟ್ಟಿನಲ್ಲಿಇಂತಹ ಉಪನ್ಯಾಸಗಳು ವಿಶೇಷವಾಗಿಯುವಜನರಿಗೆಜೀವನದ ಮೌಲ್ಯ, ಮಾರ್ಗದರ್ಶನ ಸಿಗುವಂತೆ ಮಾಡುತ್ತವೆ. ಜಗತ್ತಿನ ಸಾಹಿತ್ಯಕ್ಕೆಕನ್ನಡ ಸಾಹಿತ್ಯಕೊಟ್ಟಂತಹಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರವೇ ವಚನ ಸಾಹಿತ್ಯಎಂದು ಸ್ವತಃ ಬೇಂದ್ರೆಯವರ ತಿಳಿಸಿದ್ದಾರೆ.
ಜಗತ್ತಿಗೆ ವಚನಗಳು ಆಂದೋಲನದ ಸ್ವರೂಪದಲ್ಲಿ ಬಂದವು. ಇಂದಿಗೂ ಅವುಗಳು ಬಹಳ ಪ್ರಸ್ತುತವಾಗಿವೆ. ಅದ್ದರಿಂದ ವಚನ ಸಾಹಿತ್ಯಅಧ್ಯಯನ ಇಂದಿನ ಅವಶ್ಯಕ. ಜ್ಞಾನದ ಬಲದಿಂದ ಅಜ್ಞಾನದಕೇಡು ನೋಡಯ್ಯ ವಚನವನ್ನು ಉಲ್ಲೇಖಿಸಿ ಅಂಧಕಾರದ ಅಳಿದಾಗ ಮಾತ್ರ ಸುಜ್ಞಾನ ಬರಲು ಸಾಧ್ಯ, ಇದರಿಂದಅಂತರಂಗದ ವಿಕಾಸವಾಗುತ್ತದೆಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಪ್ರೇಮಲತಾಕೃಷ್ಣಸ್ವಾಮಿ ಮಾತನಾಡಿ, ದಿನಕ್ಕೊಂದು ವಚನಗಳನ್ನು ಓದುವುದರಿಂದಕಂಡಿತ ನಾವು ಉನ್ನತವಾದ ಸ್ಥಾನವನ್ನುಏರುತ್ತೇವೆ, ನಾವೆಲ್ಲರೂ ಇಂದಿನಿಂದ ವಚನಗಳನ್ನು ಅಧ್ಯಯನ ಮಾಡೋಣಎಂದುಕರೆ ನೀಡಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಜೆಎಸ್‍ಬಿ ಪ್ರತಿμÁ್ಠನದಎಸ್. ಶಶಿಕುಮಾರ್ ಮಾತನಾಡಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕಇತರೆ ನೂರಾರು ಸಮಸ್ಯೆಗಳು ನಮಗೆ ಕಾಡುತ್ತಿವೆ, ಯಾರೂ ನೆಮ್ಮದಿಯಾಗಿ ಬದುಕುತ್ತಿಲ್ಲ. ನಾವು ನೆಮ್ಮದಿಯಿಂದಇರಲು ಬಸವಾದಿ ಶರಣರು ಹನ್ನೆರಡನೆಯ ಶತಮಾನದಲ್ಲಿಯೇಉತ್ತರವನ್ನು ವಚನಗಳ ಮೂಲಕ ನಮಗೆ ನೀಡಿದ್ದಾರೆ, ನಾವು ಅವುಗಳನ್ನು ಅರ್ಥೈಸಿಕೊಂಡು ಬದುಕುವುದನ್ನುಕಲಿಯಬೇಕಿದೆಎಂದು ತಿಳಿಸಿದರು.
ಕಾರ್ಯಕ್ರಮ ನಿಮಿತ್ತ ಸಂಸ್ಥೆಯಲ್ಲಿ ನಡೆದ ವಚನ ವಾಚನ, ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಸಂಸ್ಥೆಯಎಲ್ಲಾ ಮಕ್ಕಳಿಗೆ ಕನ್ನಡಕಿರುಪುಸ್ತಕ ನೀಡಿ, ವಚನ ಓದನ್ನು ಪೆÇ್ರೀತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಸುಗಮ ಸಂಗೀತಗಾರ ಕೆ ಶಿವನಂಜು ಸಂಗೀತ ಸುಧೆಯನ್ನು ಹರಿಸಿ, ನೆರೆದಿದ್ದ ಎಲ್ಲರನ್ನೂ ಸಂಗೀತದ ಅಲೆಯಲ್ಲಿ ತೇಲಿಸಿದರು.ಕಾರ್ಯಕ್ರಮದಲ್ಲಿ ರಾಜೇಶ, ಭಾಸ್ಕರನ್, ಅಕ್ಬರ್, ಜಗದೀಶ, ರಾಜಶೇಖರ, ಲೋಕೇಶ, ಚೇತನ, ಮೋಹನ, ನಂದಿನಿ, ಕವಿತಾ, ವಿನುತಾ, ನಿರ್ಮಲಾ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿದ್ದರು.