ಶೈಕ್ಷಣಿಕ ಕ್ಷೇತ್ರದಲ್ಲಿ ಪಟ್ಟದೇವರ ಸೇವೆ ಅನನ್ಯ : ಮೂಳೆ
ಸಂಜೆವಾಣಿ ವಾರ್ತೆ
ಔರಾದ್: ಭಾಗದ ಮಕ್ಕಳ ಗುಣಮಟ್ಟದ ಶಿಕ್ಷಣ ಮತ್ತು ಅವರ ಸಂಸ್ಕಾರಯುತ ಬಾಳಿಗೆ ಬೇಳಕಾಗಿರುವ ಭಾಲ್ಕಿ ಹಿರೇಮಠದ ಪೂಜ್ಯಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದೇವರ ಸೇವೆ ಅನನ್ಯವಾಗಿದೆ ಎಂದು ಸಂತಪುರ ಪೊಲೀಸ್ ಠಾಣೆಯ ಪಿಎಸ್‌ಐ ನಂದಕುಮಾರ ಮೂಳೆ ನುಡಿದರು.
ಬುಧವಾರ ಸಂತಪುರ ಸಿದ್ದರಾಮೇಶ್ವರ ಕಾಲೇಜು ಹಾಗೂ ಸ್ಥಳೀಯ ಪೊಲೀಸ ಠಾಣೆ ಸಹಯೋಗದಲ್ಲಿ ಏರ್ಪಡಿಸಿದ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರ ೭೪ನೇ ಜನ್ಮದಿನಾಚರಣೆ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಧಾರ್ಮಿಕ, ಅಧ್ಯಾತ್ಮಿಕ ಹಾಗೂ ಶೈಕ್ಷಣಿಕ ಮತ್ತು ಅನಾಥ ಮಕ್ಕಳ ಪಾಲನೆ ಪೋಷಣೆ ಇತ್ಯಾದಿ ಕ್ಷೇತ್ರಗಳಲ್ಲಿ ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದೇವರ ಕೊಡುಗೆ ಅಪಾರವಾಗಿದೆ ಎಂದರು.
ಪ್ರಾAಸುಪಾಲ ನವೀಲಕುಮಾರ್ ಉತ್ಕಾರ ಮಾತನಾಡಿ, ಪೂಜ್ಯ ಶ್ರೀಗಳು ತ್ರಿವಿಧ ದಾಸೋಹಗಳಲ್ಲಿ ಎತ್ತಿದ್ದ ಕೈಯಾಗಿದೆ. ಅವರ ಆದರ್ಶಗಳನ್ನು ಎಲ್ಲರು ಪೂಜಿಸಿ ಪಾಲನೆ ಮಾಡಬೇಕು ಎಂದರು.
ಮಹಿಳಾ ಪೇದೆ ಮೀನಾಕ್ಷಿ ನಾಗೂರಕರ ಅವರು ಮಾತನಾಡಿ, ೧೮ ವಯಸ್ಸಿನ ಒಳಗಿನ ಮಕ್ಕಳಿಗೆ ಪೋಷಕರು ತಮ್ಮ ವಾಹನಗಳನ್ನು ಚಾಲಾಯಿಸಲು ನೀಡಬಾರದು. ಇದು ಕಾನೂನಿನ ದೃಷ್ಠಿಯಲ್ಲಿ ಅಪರಾಧವಾಗಿದೆ. ಹೇಲ್ಮೇಟ್ ಧರಿಸುವುದು ತಪ್ಪಬಾರದು. ಕಡ್ಡಾಯವಾಗಿ ಎಲ್ಲರು ರಸ್ತೆಗಿಳಿಯಬೇಕಾದರೇ ಎಲ್ಲ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿ ಮಕ್ಕಳಿಗೆ ಸೈಬರ್ ಕ್ರೈಂ, ಫೋಕ್ಸೋ ಬಗ್ಗೆ ಮಾಹಿತಿ ನೀಡಿದರು.
ಇದೆ ವೇಳೆ ಪೂಜ್ಯ ಶ್ರೀಗಳ ಶೈಕ್ಷಣಿಕೆ ಕೊಡುಗೆ ಕುರಿತು ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಅಂಕಿತಾ ರಾಜಕುಮಾರ, ಕೀರ್ತನಾ ಅನಿಲಕುಮಾರ, ಸುಧಾರಾಣಿ ಸಂಗಪ್ಪ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅನುಭವ ಮಂಟಪ ಗುರುಕುಲ ಪಬ್ಲಿಕ ಸ್ಕೂಲ್ ಪ್ರಾಚಾರ್ಯೆ ಗುರಪ್ರೀತ ಕೌರ್ ಎಎ??? ಸುನಿಲಕುಮಾರ ಕೋರೆ, ಶೈಲಜಾ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ, ಪ್ರಿಯಾಂಕಾ ಗುನ್ನಳ್ಳಿಕರ್, ಅಶ್ವಿನಿ ಪಾಟೀಲ್, ನಿರ್ಮಲಾ ಜಮಾದಾರ, ರಾಜಕುಮಾರ ಹಳ್ಳಿಕರ್, ಸುಧೀರ ಆಲೂರೆ, ಜಿತೇಂದ್ರ ಡಿಗ್ಗಿ, ಸಂತೋಷ ಧೂಳಗಂಡೆ ಇತರರಿದ್ದರು.