ಬೀದಿ ವ್ಯಾಪಾರಿಗಳ ಸಂಘದಿAದ ಮೇಯರ್ ಗೆ ಮನವಿ
ಕಲಬುರಗಿ, ಆ.೨೨- ನಗರದ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಈಗಾಗಲೇ ಪಾಲಿಕೆಯಿಂದ ನೀಡಿರುವ ಹಳೆ ಜೈಲ್ ಸೂಪರ ಮÁರ್ಕೆಟದಲ್ಲಿ ವ್ಯಾಪಾರ ಮಳಿಗೆ ೨೦೦೮/೨೪ ಎಂದು ವಲಯ-೧ ಗುರುತಿಸಲ್ಪಟ್ಟಿದ್ದು, ಸದರಿ ಸ್ಥಳದಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಅಲ್ಲಿಯೇ ಬೀದಿಬದಿ ವ್ಯಾಪಾರಿಗಳು ಒಂದೇಡೆ ತಮ್ಮ ವ್ಯಾಪಾರ ಕೈಗೊಳ್ಳಲು ಅನುಕೂಲ ಮಾಡಿಕೊಡುವಂತೆ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಪಾಲಿಕೆ ಮೇಯರ ಯಲ್ಲಪ್ಪ ನಾಯ್ಕೊಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಗಳು ಹತ್ತಿರದಲ್ಲಿದ್ದು ಸದರಿ ಸ್ಥಳದಲ್ಲಿ ಎಲ್ಲಾ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ತುರ್ತಾಗಿ ಅಲ್ಲಿ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಅವರು, ಮನವಿ ಮಾಡಿದರು.
ಈಗಾಗಲೇ ಹಳೆ ಜೇಲ್ ಚೌಪಾಟಿ ಸೂಪರ ಮಾರ್ಕೆಟ್ ಜಾಗದಲ್ಲಿ ಬೀದಿ ಬದಿಯಲ್ಲಿ ಕುಳಿತುಕೊಂಡು `ಗಳ ಸರಾಫ್ ಬಜಾರ, ಕಿರಾಣಾ
ಳಿದೆ. ಬಜಾರ, ಚಪ್ಪಲ ಬಜಾರ, ಕಪಡಾ ಬಜಾರ, ಜನತಾ ಬಜಾರ, ದತ್ತ ಮಂದಿರ, ಸಿಟಿ ಬಸ್ ನಿಲ್ದಾಣ ಸೇರಿದಂತೆ ಕಲಬುರಗಿ ನಗರದಾ ದಂತ ರಸ್ತೆ ಬೀದಿಬದಿಯಲ್ಲಿ ಕುಳಿ ತುಕೊಂಡು ವ್ಯಾಪಾರ ಮಾಡು ತ್ತಿರುವ ವ್ಯಾಪಾರಸ್ಥರಿಗೆ ಕಳೆದ ೨೦೧೪ ಮತ್ತು ೨೦೧೯ ರ ಕಾಯ್ದೆ ಯನ್ವಯ ದಿನಾಂಕ: ೦೨.೦೮.೨೦೧೭ ರಂದು ಅಂದಿನ ನಗರಾಭಿವೃದ್ಧಿ ಸಚಿವರಾದ ರೋಷನ್ ಬೇಗ್ ಸೇರಿದಂತೆ ಅಂದಿನ
ಜಿಲ್ಲಾ ಉಸ್ತು ವಾರಿ ಸಚಿವರಾದ ಶರಣಪ ಕಾಶ ಪಾಟೀಲ ಹಾಗೂ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಪಿ.ಸುನೀಲ ಕುಮಾರ ರವರು ಮತ್ತು ಅಧಿಕಾರಿ ವರ್ಗದವರು ಹಳೆ ಜೇಲ್ ಚೌಪಾಟಿ ಸ್ಥಳವನ್ನು ಪರಿಶೀ ಲಿಸಿ ಈ ಸ್ಥಳದಲ್ಲಿ ಬೀದಿ ಬದಿ ಯಲ್ಲಿ ಕುಳಿತುಕೊಂಡು ಸೂಪರ ಮಾರ್ಕೆಟ್ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಈ ಸ್ಥಳದಲ್ಲಿ ವ್ಯಾಪಾರ ಮಾಡಲು ಮತ್ತು ಮೂಲಭೂತ ಸೌಕರ್ಯ ಗಳಾದ ಕುಡಿಯುವ ನೀರು, ಶೌಚಾ ಲಯ, ವಿದ್ಯುತ್ ಸೌಕರ್ಯಗಳನ್ನು ಒದಗಿಸಬೇಕೆಂದು ನಗರಾಭಿವೃದ್ಧಿ ಸಚಿವರು ಪಾಲಿಕೆಯ ಆಯುಕ್ತರಾದ ಪಿ.ಸುನೀಲ ಕುಮಾರ ರವರಿಗೆ ನಿರ್ದೇಶನ ನಿಡಿದ್ದರು.
ಆದರೆ ೨೦೧೭ ರಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯ ಗಳು ಕೂಡ ಒದಗಿಸಿಲ್ಲ. ಅಲ್ಲದೆ ಪಾಲಿಕೆಯ ವಲಯ-೧, ೨ ಮತ್ತು ೩ ರ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಐ.ಟಿ.ಐ. ಕಾಲೇಜು ಎದುರು ಗಡೆ, ಎಂ.ಎಸ್.ಕೆ.ಮಿಲ್ ರಸ್ತೆ ಕಲಬುರಗಿ, ಟಾಡಂಕಾ ವೃತ್ತದಿಂದ ಪಾಕಿಜಾ ವೈನ್ ಶಾಪ್ ವರೆಗೆ, ಕೆ.ಎಂ.ಎಫ್. ಡೈರಿ ಎದುರುಗಡೆ, ಅಣಕಲ್ ಪೆಟ್ರೋಲ್ ಬಂಕ್ ಎದುರುಗಡೆ, ಅಂಡರಬ್ರಿಜ್ ಪಂಚಶೀಲ ನಗರ, ಆಳಂದ ಚೆಕ್‌ಪೊಸ್ಟ ಸೂಪರ ಮಾರ್ಕೆಟ್, ಕಲಬುರಗಿ ಈ ಏಳು ಪ್ರದೇಶಗಳಲ್ಲಿ ಬೀದಿ ಬದಿಯಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರನ್ನು ಗುರುತಿಸಲಾದ ನಿಗದಿತ ಈ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ವ್ಯಾಪಾರ ಕೈಗೊಳ್ಳಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು, ಅವರೊಂದಿಗೆ ಹೋರಾಟಗಾ ಮಂಜುನಾಥ ನಾಲ್ವಾರಕರ್ ಇದ್ದರು.