ರಕ್ತಪಾತವಿಲ್ಲದೇ ಸಾಮಾಜಿಕ ಕ್ರಾಂತಿ ಮಾಡಿದ್ದ ಬ್ರಹ್ಮಶ್ರೀ ನಾರಾಯಣ ಗುರು
ಚಿಂಚೋಳಿ,ಆ.೨೨- ರಕ್ತಪಾತವಿಲ್ಲದೇ ಸಾಮಾಜಿಕ ಕ್ರಾಂತಿ ಮಾಡಿಡುವ ಬ್ರಹ್ಮಶ್ರೀ ನಾರಾಯಣ ಗುರುಗಳು ಒಬ್ಬ ಶ್ರೇಷ್ಠ ಸಮಾಜ ಸುಧಾರಕರು ಎಂದು ಚಂದಾಪುರ ಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಗೋಪಾಲರಾವ ಅಭಿಪ್ರಾಯಪಟ್ಟರು.
ಶಾಲೆಯಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ಜಯಂತಿ ಕಾರ್ಯಕ್ರಮದಲ್ಲಿ ಈ ಇಬ್ಬರು ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಒಂದು ವರ್ಗದವರು ಇನ್ನೊಂದು ವರ್ಗದವರ ಮೇಲೆ ಶೋಷಣೆ ಮಾಡುತ್ತಾ ಬರುತ್ತಿದ್ದ, ಕೊಳಕು ಚಿಂತನೆಗಳಿAದ ಸಮಾಜ ಕೊಳೆಯುತ್ತಿರುವಾಗ ಅಂತಹ ವಿಮಯ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ನಾರಾಯಣ ಗುರುಗಳು ಕೆಳಸ್ಥರದ ಜನರನ್ನು ಮೇಲೆತ್ತಲು ಶ್ರಮಿಸಿದರು.
ಅಂದಿನ ಅವರ ಪ್ರಯತ್ನಗಳÀನ್ನು ಹಾಗೂ ಸೇವೆಯನ್ನು ಎಂದಿಗೂ ಮರೆಯಲಾಗದು. ಅವರು ಕೇವಲ ಜಾತಿ ವ್ಯವಸ್ಥೆಯ ಬಗ್ಗೆ ಅಷ್ಟೇ ಅಲ್ಲದೇ, ತುಂಬಾ ಶೋಚನೀಯವಾಗಿದ್ದ ಅಂದಿನ ಮಹಿಳೆಯರ ಸ್ಥಿಗತಿಗಳ ಬಗ್ಗೆಯೂ ಹೋರಾಟವನ್ನು ಮಾಡಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಸಂದೇಶವನ್ನು ಕೊಟ್ಟರು ಎಂದರು.
ಸಹ ಶಿಕ್ಷಕ ಸೋಮಶೇಖರ ಮಾತನಾಡಿ ಡಿ ದೇವರಾಜ ಅರಸು ರವರು ತನ್ನ ಅಧಿಕಾರಾವಧಿಯಲ್ಲಿ ಬಡವರ ಬದುಕಿನಲ್ಲಿ ಹೊಸ ಭರವಸೆಗಳನ್ನು ತಂದುಕೊಟ್ಟAತಹ ಧೀಮಂತ ನಾಯಕರು. ಕರ್ನಾಟಕದಲ್ಲಿ ಆರ್ಥಿಕ, ಸಾಮಾಜಿಕ ಆಂದೋಲನದ ಮೂಲಕ ಜನಹಿತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾದವವರು. ಸಮಾಜದ ಹಿಂದುಳಿದ ವರ್ಗದವರಿಗೆ, ಬಡಜನರಿಗೆ ಜಾಗೃತಗೊಳಿಸಿ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರಿಂದಲೇ ಇಂದಿಗೂ ಅರಸುರವರು ಬಡವರ ಹಿಂದುಳಿದ ವರ್ಗದವರ ಎದೆಯಲ್ಲಿ ಅಜರಾಮರವಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ, ಎಸ್ ಕೆ, ಸಂಗನಬಸಮ್ಮ ಮಾಲಾಶ್ರೀ, ಸುಜಾತಾ ಗಂಜಗಿರಿ ಸೇರಿದಂತೆ ಇನ್ನಿತರ ಶಿಕ್ಷಕ ಮತ್ತು ಅತಿಥಿ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.