ಜಿಲ್ಲಾ ಮಟ್ಟದ ಮ್ಯಾರಥಾನ್ ಸ್ಪರ್ದೆ
ಕೋಲಾರ, ಆ,೨೨- ನಗರದ ಪ್ರವಾಸಿ ಮಂದಿರ ಮುಂಭಾಗದಲ್ಲಿ ಆಗಸ್ಟ್ ೨೭ ರಂದು ಜಿಲ್ಲಾ ಮಟ್ಟದ ಮ್ಯಾರಥಾನ್ ಸ್ಪರ್ದೆಯನ್ನು ಆಯೋಜಿಸಲಾಗಿದೆ. ಅದರಂತೆ ಸ್ಪರ್ದೆಯು ಬೆಳಿಗ್ಗೆ ೬ ಗಂಟೆಗೆ ಪ್ರಾರಂಭವಾಗುವುದು.
ಈ ಸ್ಪರ್ದೆಯ ಮಾರ್ಗವು ಪ್ರವಾಸಿ ಮಂದಿರದಿಂದ ಪ್ರಾರಂಭಗೊಂಡು-ಬಂಗಾರಪೇಟೆ ಸರ್ಕಲ್-ಖಾಸಗಿ ಬಸ್ ನಿಲ್ದಾಣ, ಮೆಕ್ಕೆ ಸರ್ಕಲ್-ಸರ್ಕಾರಿ ಬಸ್ ನಿಲ್ದಾಣ-ಕ್ಲಾಕ್ ಟವರ್-ಡೂಂ ಲೈಟ್ ಸರ್ಕಲ್-ಎಸ್.ಎನ್.ಆರ್ ಆಸ್ಪತ್ರೆ, ಪ್ರವಾಸಿ ಮಂದಿರ ಮುಂಭಾಗದಲ್ಲಿ ಅಂತ್ಯಗೊಳ್ಳುವುದು.
ಸ್ಪರ್ದೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಯ ಕಾಲೇಜಿನ ಗುರುತಿನ ಪತ್ರ ಕಡ್ಡಾಯವಾಗಿರುತ್ತದೆ ಬೆ.೫.೩೦ಕ್ಕೆ ಪ್ರವಾಸಿ ಮಂದಿರಕ್ಕೆ ಆಗಮಿಸುವುದು. ೫ಕಿ.ಮೀ ಮ್ಯಾರಥಾನ್ ಸ್ಪರ್ದೆ ನಡೆಯುವುದು. ೧೭ ರಿಂದ ೨೫ ವರ್ಷದ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳು ಮಾತ್ರ ಮ್ಯಾರಥಾನ್‌ನಲ್ಲಿ ಭಾಗವಹಿಸುವುದು. ಪ್ರತಿ ಕಾಲೇಜಿನಿಂದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಭಾಗವಹಿಸುವುದು. ಪ್ರತ್ಯೇಕವಾಗಿ ವಿಜೇತ ವಿದ್ಯಾರ್ಥಿಗಳಿಗೆ ಮೊದಲನೇ ಬಹುಮಾನ ರೂ.೫೦೦೦, ಎರಡನೇ ಬಹುಮಾನ ರೂ.೩೫೦೦, ಮೂರನೇ ಬಹುಮಾನ ರೂ.೨೫೦೦ ಹಾಗೂ ೮ ಸಮಾಧಾನಕರ ಬಹುಮಾನ ೪ಜನ ತಲಾ ರೂ.೧೦೦೦ ಗಳನ್ನು ನೀಡಲಾಗುವುದು.
ಆಗಸ್ಟ್ ೨೦ ರಿಂದ ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳು ದಾಖಲಾತಿ ಮಾಡುವುದು. ಸ್ವರ್ದೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ರಾಜ್ಯಮಟ್ಟದ ಸ್ಪರ್ದೆಯಲ್ಲಿ ಭಾಗವಹಿಸಬಹುದುಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.