ಡಿ.ದೇವರಾಜು ಅರಸು ೧೦೯ನೇ ಜನ್ಮದಿನಾಚರಣೆ
ಕೋಲಾರ, ಆ,೨೨- ಯಾವುದೇ ಜಾತಿ ಸಮುದಾಯ ಎನ್ನದೇ ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ಜಾರಿಗೆ ತಂದು, ಶೋಷಿತ ವರ್ಗದ ಅಧಿನಾಯಕ ಹಾಗೂ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಗಳಾಗಿ ಸೇವೆಯನ್ನು ಡಿ ದೇವರಾಜ ಅರಸು ರವರು ಸಲ್ಲಿಸಿದರು ಎಂದು ಕೋಲಾರ ತಾಲ್ಲೂಕಿನ ತಹಸೀಲ್ದಾರ್ ನಯನ ತಿಳಿಸಿದರು,
ನಗರದ ಟಿ. ಚನ್ನಯ್ಯ ರಂಗಮಂದಿರ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಿ ದೇವರಾಜು ಅರಸುರವರ ೧೦೯ ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಮುಖಂಡರಾದ ಮಂಜುನಾಥ್ ಉಪನ್ಯಾಸ ನೀಡಿ .ಆಗಸ್ಟ್ ೨೦, ೧೯೧೫ರಲ್ಲಿ ಕಲ್ಲ ಹಳ್ಳಿಯ ಹುಣಸೂರಿನಲ್ಲಿ ಹುಟ್ಟಿ, ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಅಧಿಕಾರ ಅವಧಿಯಲ್ಲಿ ರೈತರ, ದೀನದಲಿತರ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಜೀತ ಪದ್ಧತಿ ನಿರ್ಮೂಲನೆ, ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣೆ ಕಾಯ್ದೆಗಳನ್ನು ಜಾರಿಗೆ ತಂದನು. ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳನ್ನು ನಿರ್ಮಿಸಿದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಇವರ ಅವಧಿಯಲ್ಲಿ ನೀಡಿದ್ದು, ಈ ಯೋಜನೆಗಳಿಂದ ಜನಪ್ರಿಯಗೊಂಡರು. ಬೆಂಗಳೂರಿನ ನಿರ್ಮಾಣದಲ್ಲಿ ಮತ್ತು ಹಿಂದುಳಿದವರ, ದೀನ ದಲಿತರ ಏಳಿಗೆಗೆ ತಮ್ಮ ಜೀವನವನ್ನು ಅರ್ಪಿಸಿದರು ಎಂದು ವಿವರಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕರು ವೆಂಕಟೇಶ್, ಹಿಂದುಳಿದ ವರ್ಗಗಳ ಅಧ್ಯಕ್ಷರು ಪ್ರಸಾದ್ ಬಾಬು, ಉಪಾಧ್ಯಕ್ಷರು ನಂದೀಶ್, ಕಾರ್ಯದರ್ಶಿ ಪಾಲ್ಗುಣ, ಖಜಾಂಜಿ ವಿಷ್ಣು, ನಿರ್ದೇಶಕರು ಯುವರಾಜ್, ಭುವನೇಶ್ವರಿ ಸಂಘದವರು ತ್ಯಾಗರಾಜ್ ಮತ್ತು ಮುರಾರ್ಜಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು