ವಕೀಲರಿಗಾಗಿ ಸ್ವಾತಂತ್ರ್ಯೋತ್ಸವ ಕ್ರೀಡಾಕೂಟ
ಕೋಲಾರ,ಆ,೨೨- ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ವಕೀಲರ ಕುಟುಂಬದವರಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ಆಶುಭಾಷಣದಲ್ಲಿ ವಿಜೇತರಾದ ಬಿ.ಎಂ.ಚೈತನ್ಯ ಅವರಿಗೆ ಕೋಲಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ್ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶರು ಗಳಾದ ಸುನಿಲ್ ದೊಡ್ಡಮನೆ, ದಿವ್ಯ ಪ್ರಸಾದ್, ಶಕುಂತಲಾ, ನಟೇಶ್, ರೆಹನಾ ಸುಲ್ತಾನ, ಲಕ್ಷ್ಮಿ , ಶ್ರೀನಿವಾಸ್ ಪಾಟೀಲ್, ಚೇತನ್, ಹರ್ಷ ವಕೀಲರ ಸಂಘದ ಅಧ್ಯಕ್ಷ ಮುನೇಗೌಡ, ಪ್ರಧಾನ ಕಾರ್ಯದರ್ಶಿ ಬೈರಾರೆಡ್ಡಿ, ಸಿವಿ ಜೈರಾಮ್, ಲಕ್ಷ್ಮೀನಾರಾಯಣ, ಕೃಷ್ಣಾರೆಡ್ಡಿ, ಮಾಗೇರಿ ನಾರಾಯಣಸ್ವಾಮಿ, ಕೆ ವಿ ಮಂಜುನಾಥ್, ಮುಂತಾದ ಹಿರಿಯ ವಕೀಲರು ಭಾಗವಹಿಸಿದ್ದರು.
ವಕೀಲರಿಗೆ ನಡೆದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಕೀಲರಿಗೆ ನ್ಯಾಯಾಧೀಶರುಗಳು ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಿದರು
ನ್ಯಾಯಾಧೀಶರುಗಳು ಸ್ವಾತಂತ್ರ ಚಳುವಳಿಯ ಇತಿಹಾಸ ಮತ್ತು ಪ್ರಾಮುಖ್ಯತೆ ರಾಷ್ಟ್ರದ ಸರ್ವ ಜನರ ರಕ್ಷಣೆ ಮತ್ತು ಭದ್ರತೆಯನ್ನು ವಿವಿಧತೆಯಲ್ಲಿ ಐಕ್ಯತೆಯನ್ನು ಎತ್ತಿ ಹಿಡಿದಿರುವ ಪವಿತ್ರ ಗ್ರಂಥ ಸಂವಿಧಾನದ ಆಶಯ ಮಹತ್ವದ ಬಗ್ಗೆ, ದೇಶದ ಪ್ರಜೆಗಳ ಜವಾಬ್ದಾರಿ ಬಗ್ಗೆ ಮಹತ್ವದ ಸಂದೇಶ ನೀಡಿದರು.