ಚಾಲಕನ ನಿಯಂತ್ರಣ ತಪ್ಪಿ ಹರ್ಷ ಶೋರೂಂಗೆ ನುಗ್ಗಿದ ಕಾರು!
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ನಗರದ ಖ್ಯಾತ ಎಲೆಕ್ಟ್ರಾನಿಕ್ ಅಂಗಡಿ ಹರ್ಷ ಶೋರೂಂಗೆ ನುಗ್ಗಿದೆ. ಮುಂಭಾಗದಲ್ಲಿರುವ ಮೆಟ್ಟಿಲನ್ನು ಏರಿ ನಿಂತಿದೆ. ಅದೃಷ್ಟವಶಾತ್ ಅಲ್ಲಿಂದ ಮುಂದೆ ಹೋಗದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಕೂಡಲೇ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಒಟ್ಟಾಗಿ ಕಾರನ್ನು ತೆರವುಗೊಳಿಸಿದ್ದಾರೆ. ಯಾವುದೇ ಪ್ರಾಣಾಪಾಯವಿಲ್ಲದೆ ಪ್ರಯಾಣಿಕರು ಪಾರಾಗಿದ್ದಾರೆ.