೩೨ ವರ್ಷಗಳ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆ, ಬಂಧನ
ಮಣಿಪಾಲ: ೩೨ ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟಿನ ಆರೋಪಿಯನ್ನು ಪತ್ತೆ ಮಾಡಿ, ಮಣಿಪಾಲ ಪೋಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
೧೯೯೨ ರಲ್ಲಿ, ಶಿವರಾಮ ಎಂಬವರು ಮಣಿಪಾಲ ಠಾಣೆಯಲ್ಲಿ ಪ್ರಕರಣ ೧೨ ಜನರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಗಣೇಶ್ ಪ್ರಭು (೫೪), ಬಡಗಬೆಟ್ಟು, ಮಣಿಪಾಲ, ಉಡುಪಿ, ಅವರು ೨೦೦೧ ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ, ತಲೆಮರೆಸಿಕೊಂಡಿದ್ದರು. ಇದರ ಹಿನ್ನಲೆಯಲ್ಲಿ,ಆತನ ವಿರುದ್ಧ ಎಲ್‌ಪಿಸಿ ವಾರಂಟ್ ಹೊರಡಿಸಲಾಗಿತ್ತು.
ಮಣಿಪಾಲ ಪೊಲೀಸ್ ಠಾಣೆಯ ಉಪ ನಿರೀಕ್ಷಕ ರಾಘವೇಂದ್ರ ಸಿ ಮತ್ತು ಹೆಚ್‌ಸಿ ಪ್ರಸನ್ನ ಉಪ್ಪೂರು ನೇತೃತ್ವದ ತಂಡ, ೩೨ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಬೃಹತ್ ಶೋಧಕಾರ್ಯ ನಡೆಸಿ, ಬೆಂಗಳೂರಿನಲ್ಲಿ ವಾಸವಿದ್ದಾಗ ಪತ್ತೆಹಚ್ಚಿ, ೨೦೨೪ರ ಆಗಸ್ಟ್ ೨೧ರಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ಗಣೇಶ್ ಪ್ರಭು ಅವರನ್ನು ವಾರೆಂಟ್‌ನೊಂದಿಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.