ಶ್ರೀ ಸಿದ್ಧಾಂತ ಶಿಖಾಮಣಿ ಶಿವದರ್ಶನ ಹಾಗೂಸಾಮೂಹಿಕ ಲಕ್ಷ ಬಿಲ್ವಾರ್ಚನೆ
ಸಂಜೆವಾಣಿ ವಾರ್ತೆ
ಔರಾದ್ : ಆ.೨೨:ಪವಿತ್ರ ಶ್ರಾವಣ ಮಾಸದ ನಿಮಿತ್ತವಾಗಿ ನಡೆದು ಕೊಂಡು ಬರುತ್ತಿರುವ ಶ್ರಾವಣ ಶಿವ ಸಂಚಾರ ಶ್ರೀ ಸಿದ್ಧಾಂತ ಶಿಖಾಮಣಿ ಅಭಿಯಾನ ನಿಮಿತ್ತ ಪೂಜ್ಯ ಶ್ರೀ ಡಾ. ರಾಜಶೇಖರ ಶಿವಾಚಾರ್ಯಸ್ವಾಮಿ ಅವರಿಂದ ವಿಶ್ವಶಾಂತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಮಹಾ ಪ್ರವಚನ ಹಾಗೂ ಲಕ್ಷಬಿಲ್ವಾರ್ಚನೆ ನಡೆಯಲಿದೆ ಎಂದು ಸೇವಾ ಸಮಿತಿ ಮುಖಂಡರಾದ ಬಸವರಾಜ ದೇಶಮುಖ ಹಾಗೂ ಶರಣಪ್ಪ ಪಂಚಾಕ್ಷರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪವಿತ್ರ ಶ್ರಾವಣ ಮಾಸದ ನಿಮಿತ್ತ ಜಿಲ್ಲೆಯಾದಾದ್ಯಂತ ನಡೆದುಕೊಂಡು ಬರುತ್ತಿರುವ ಶ್ರೀ ಸಿದ್ಧಾಂತ ಶಿಖಾಮಣಿ ಅಭಿಯಾನದ ಹಿನ್ನಲೆ ಶಿವ ದರ್ಶನ ಧರ್ಮ ಸಂಚಾರವನ್ನು ಕೈಗೊಳ್ಳುವ ನಿರ್ಧಾರವನ್ನು ಮಾಡಲಾಗಿದ್ದು ಈಗಾಗಲೇ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಭಿಯಾನ ನಡೆದುಕೊಂಡು ಬಂದಿದೆ, ಪಟ್ಟಣದ ಐತಿಹಾಸಿಕ ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಇದೇ ಅ. ೨೩ರಂದು ಸಾಯಂಕಾಲ ಸಿದ್ಧಾಂತ ಶಿಖಾಮಣಿ ಶಿವದರ್ಶನ ಪ್ರವಚನ ನಡೆಯಲಿದೆ ಹಾಗೂ ಅ.೨೪ರಂದು ಬೆಳಿಗ್ಗೆ ೯:೩೦ ಗಂಟೆಗೆ ಲಕ್ಷ ಬಿಲ್ವಾರ್ಚನೆ ನಡೆಯಲಿದೆ.
ಶ್ರೀ ಸಿದ್ದಾಂತ ಶಿಖಾಮಣಿ ಅಭಿಯಾನದ ಸ್ವಾಗತ ಶ್ರೀ ಸಿದ್ದಾಂತ ಶಿಖಾಮಣಿಯ ಪಾರಾಯಣ, ಶಿವದರ್ಶನ ಪ್ರವಚನ, ಸಾಮೂಹಿಕ ಬಿಲ್ವಾರ್ಚನೆ ಇಷ್ಟಲಿಂಗ ಪೂಜೆ, ಲಿಂಗದೀಕ್ಷಾ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಪ್ರಯುಕ್ತ ಸಕಲ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸೇವಾ ಸಮಿತಿ ಮುಖಂಡರಾದ ಬಸವರಾಜ ದೇಶಮುಖ ಹಾಗೂ ಶರಣಪ್ಪ ಪಂಚಾಕ್ಷರಿ ಮನವಿ ಮಾಡಿದ್ದಾರೆ.