ಬ್ರಹ್ಮಶ್ರೀ ನಾರಾಯಣಗುರು, ಡಿ.ದೇವರಾಜ ಅರಸು ಜಯಂತ್ಯೋತ್ಸವ
ಜೇವರ್ಗಿ,ಆ.21-ಡಿ.ದೇವರಾಜ ಅರಸ ಅವರು ತಮ್ಮ ಆಡಳಿತಾವಧಿಯಲ್ಲಿ 1978 ರಲ್ಲಿ ಭೂಸುದಾರಣೆ ಕಾಯ್ದೆ ಜಾರಿಗೆ ತಂದು ಅದರ ಮೂಲP ಬಡವರ ಬದುಕಿಗೆ ಹೊಲ ನೀಡಿ ಅವರ ಬಾಳಿಗೆ ಆಶಕಿರಣ ಆಗಿದಲ್ಲದೆ ಬಡಮಕ್ಕಳಿಗಾಗಿ ಪ್ರಪ್ರಥಮವಾಗಿ ವಸತಿ ನಿಲಯ ಸ್ಥಾಪಿಸಿ, ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದರು ಎಂದು ಜೇವರ್ಗಿ ತಹಶಿಲ್ದಾg ಮಲ್ಲಣ ್ಣಯಲಗೊಡ ತಿಳಿಸಿದರು.
ಅವರು ಜೇವರ್ಗಿ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ 109 ನೇ ಡಿ.ದೇವರಾಸ ಅರಸ ಹಾಗೂ ಬ್ರಹ್ಮಶ್ರೀ ನಾರಯಣಗುರುಗಳ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿ, ಬ್ರಹ್ಮಶ್ರೀನಾರಯಣಗುರುಗಳು 1903ರಲ್ಲಿ ಧರ್ಮಪರಿಪಾಲನ ಯೋಗಂ ಎಂಬ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಅವರು ಕೇರಳದ ಹಿಂದೂಳಿದ ಸಮೂದಾಯಗಳ ಸಾಮಾಜಿಕ ಶೈಕ್ಷಣಿಕ, ಆರ್ಥಿಕ, ಮತ್ತು ಸಾಂಸ್ಕøತಿಕ ಪ್ರಗತಿಗಾಗಿ ಶ್ರಮಿಸಿದರು ಎಂದುತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ ಕಲಬುರಗಿ ಸರಕಾರಿ ಮಹಿಳಾವಿದ್ಯಾಲಯದ ಉಪನ್ಯಾಸಕ ಪದ್ಮರಾಜ ರಾಸಣಗಿ ಮಾತನಾಡಿದರು. ಇದಕ್ಕೂ ಮೊದಲು ಬ್ರಹ್ಮಶ್ರೀ ನಾರಯಣಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಈಡಿಗ ಸಮುದಾಯದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಗುರುಶಾಂತ ಚಿಂಚೋಳ್ಳಿ ಅಚ್ಚುಕಟ್ಟಾಗಿನಿರ್ವಹಿಸಿದರು. ಭೀಮಯ್ಯ ಗುತ್ತೇದಾರ ಸೊನ್ನ ವಂದಿಸಿದರು.