ಆಡಳಿತ ಅವ್ಯವಹಾರ ತಡೆಯದೇ ಹೋದಲ್ಲಿ ಬೀದಿಗಿಳಿದು ಹೋರಾಟ
ಆಳಂದ:ಆ.21: ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಇಲಾಖೆ ಪೊಲೀಸ್ ಸೇರಿದಂತೆ ಆಡಳಿತದಲ್ಲಿ ಅವ್ಯವಹಾರ ಶಾಸಕರು ಮತ್ತು ಸೋಹದರ ಪುತ್ರ ಆರ್.ಕೆ. ಪಾಟೀಲ ಅವರ ತೀವ್ರತರಹ ಹಸ್ತಕ್ಷೇಪದಿಂದ ಜನ ಸಾಮಾನ್ಯರು ತತ್ತರಿಸಿಹೋಗಿದ್ದಾರೆ. ತಕ್ಷಣವೇ ಡಿಸಿ, ಸಿಇಒ ಅವರು ಇಲಾಖೆಗಳಲ್ಲಿನ ಭ್ರಷ್ಟಾಚಾರ ತನಿಖೆ ನಡೆಸಿ ಕ್ರಮ ಕೈಗೊಳ್ಳದೇ ಹೋದಲ್ಲಿ ಬೀದಿಗಿಳಿದು ಹೋರಾಟ ಕೈಗೊಳ್ಳಲಾಗುವುದು ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಇಂದಿಲ್ಲಿ ಜಿಲ್ಲಾಡಳಿತಕ್ಕೆ ಗಡುವು ನೀಡಿದರು.
ಪಟ್ಟಣದಲ್ಲಿ ಮಂಗಳವಾರ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ರೇಷÀನ ಡೀಲರ ಹತ್ತಿರ ಅಕ್ಕಿಯನ್ನು ಖರೀದಿ ಮಾಡಿ ಅಕ್ರಮವಾಗಿ ಸಾಗಿಸುತ್ತಾರೆ. ಇದರಲ್ಲಿ ಶಾಮೀಲಾದ ಅಂಬ್ರಿಷ ಶಿರಸ್ತೆದಾರ ಮತ್ತು ಟ್ರಾನ್ಸಪೊರ್ಟ ಏಜ್‍ಂಟ ಪಿಂಟು ಜಮಾದಾರ ಉರ್ಪ ಶಿವಕುಮಾರ ಶ್ರವಣಕುಮಾರ ಜಮಾದಾರ ಶಾಮಿಲಾಗಿ ಅವರ ಅಕ್ರಮ ಸಾಗಿಸುವ ಲಾರಿಗಳನ್ನು ಹಿಡಿದರೆ ಡುಪ್ಲಿಕೆಟ್ ಬಿಲ್ಲುಗಳನ್ನು ಸೃಷ್ಟಿಸುತ್ತಿದ್ದು, ಅಕ್ರಮ ಪತ್ತೆ ಹಚ್ಚಿ ಪೊಲೀಸರಿಗೆ ದೂರುಕೊಟ್ಟವರ ಮೇಲೆ ಸುಳ್ಳು ಆರೋಪ ಮಾಡಿ ಅಧಿಕಾರಿಗಳು ಲಂಚದ ಆಸೆಗೆಬಿದ್ದು ದೂರುದಾರರನ್ನೇ ಹೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಶಾಸಕರ ಪರ ಕೆಲಸ ಮಾಡದವರನ್ನು ಮತ್ತು ಯಾರಾದರು ಅಕ್ರಮ ಲಾರಿಗಳನ್ನು ತಡೆದು ಪೊಲಿಸ್ ಇಲಾಖೆಗೆ ಕೊಟ್ಟರೆ ಅಲ್ಲಿ ಶಾಸಕರ ಬೆಂಬಲಿತ 10-12 ಹುಡುಗರಿಗೆ ತೆಗೆದುಕೊಂಡು ಹೋಗಿ ಶಾಸಕರ ಸಹೋದರ ಪುತ್ರ ಆರ್.ಕೆ ಪಾಟೀಲ ಹೇಳಿದ್ದಾರೆ, ಕೇಸ್ ಮಾಡಬೇಡಿ ಅಂತ ಪೊಲೀಸರಿಗೆ ಒತ್ತಡ ಹಾಕುತ್ತಿದ್ದು, ಅಂದರೆ ಇಲ್ಲಿ ಪೊಲೀಸ್‍ರು ಕೂಡ ರಾಜಕಿಯವಾಗಿ ಲಂಚಕ್ಕೆ ಕೈಚಾಚುತ್ತಿದ್ದಾರೆ ಎಂದು ಪ್ರಶ್ನಿಸಿದ ಗುತ್ತೇದಾರ ಅವರು, ಆಹಾರಧಾನ್ಯ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಪೊಲೀಸ್ ಸ್ಟೇಷÀನ್ ಆಳಂದನಲ್ಲಿ ಹಿಡಿದು ಖಜೂರಿ ಬಾರ್ಡರ ದಿಂದ ತಂದರು ಪೊಲೀಸ್ ಸ್ಟೆಷÀನಲ್ಲಿ ಕೊಟ್ಟರೆ ಪೊಲೀಸರು ಶಾಸಕರ ಪೋನ್ ಹೊದಮೇಲೆ ಲಾರಿಗೆ ಈIಖ ಮಾಡದೆ ಬಿಟ್ಟಿದ್ದಾರೆ. ವಾಹನ ಸಂಖ್ಯೆ ಏಂ-56-5546 ಈ ಲಾರಿ ಬಿಟ್ಟಿದ್ದಾರೆ ಚೀಲ ಈಅI ಚೀಲ ಇದ್ದರು ಪ್ರಕರಣ ದಾಖಿಲಿಸದೆ ಶಿರಸ್ತೆದಾರ ಅಂಬ್ರಿಶ ಶಾಮೀಲಾಗಿದ್ದಾರೆ ಎಂದು ಗುಡಗಿದರು.
ಶಾಲೆಗಳ ಬಿಸಿಯೂಟದ ಆಹಾರವನ್ನು ಗೋದಾಮನಿಂದ ಲಾರಿ ಲೋಡ ಮಾಡಿಕೊಂಡು ಪಟ್ಟಣದ ಉಮರ್ಗಾ ರೋಡ ಹತ್ತಿರ ಪೆಟ್ರೋಲ ಬಂಕನಲ್ಲಿ ನಿಂತು ರಾತ್ರಿ ಅಕ್ಕಿ, ತೋಗರಿ ಬೆಳೆ, ಏಣ್ಣೆ ಬಾಕ್ಸ್, ಇವು ಕಡಿಮೆ ಮಾಡಿ ಕೊಡುತ್ತಾರೆ, ಬೆಳೆ ಅಕ್ಕಿ ಚಿಲ ಹರಿದು ಅದರಲ್ಲಿ 5-10 ಕೆಜಿ ತೆಗೆದು ಶಾಲೆಗಳಿಗೆ ಕೊಡುತ್ತಾರೆ ಶಾಲೆಯಲ್ಲಿ ಕೆಳಿದರೆ ತೆಗೆದುಕೊಳ್ಳದಿದ್ದರೆ ವಾಪಿಸು ತೆಗೆದುಕೊಂಡು ಹೋಗುತ್ತೇವೆ ಮತ್ತು ನಾವು ಒಐಂ ಯವರ ಕಡೆಯುವರು ಇದ್ದೆವೆ ಎಂದು ಭೋಸಲೆ ಟ್ರಾನ್ಸಪೋರ್ಟ ( ಮಾಲಿಕರು ಪಿಂಟು ಉರ್ಫ ಶಿವಕುಮಾರ ಶ್ರವಣಕುಮಾರ ಜಮಾದಾರ) ಹೇಳಿತ್ತಿದ್ದಾರೆ ಎಂದು ಗುತ್ತೇದಾರ ಹರಿಹಾಯ್ದರು.
ಮಹಿಳಾ ಮತ್ತು ಮಕ್ಕಳ ಅಭೀವೃದ್ಧಿ ಇಲಾಖೆ ಅಂಗನವಾಡಿಗಳಿಗೆ ವಿತರಿಸುವ ಕೊಳಿ ಮೊಟ್ಟೆ ಅಂಗನವಾಡಿ ಕೇಂದ್ರದಲ್ಲಿ ಹಂಚಿಕೆ ಹೋಗಿ ಅಲ್ಲಿ ಕೊಟ್ಟಂತ ರಸಿದಿಯಲ್ಲಿ 700 (ಏಳುನುರು ) ಇರುತ್ತದೆ ಅಆPಔ ಕಛೇರಿಯಲ್ಲಿ 1700 – 2000 ಮತ್ತು 15000 ನೂರು ಇರುತ್ತದೆ. ಅಂಗನವಾಡಿ ಶಿಕ್ಷಕಿಯರಿಗೆ ಹೆದರಿಕೆ ಹಾಕಿ ನಾವು ಶಾಸಕರ ಮನುಷ್ಯರು ಇದ್ದೆವೆ ತೆಗೆದುಕೊಳ್ಳದಿದ್ದರೆ ಕಚೇರಿಕಡೆಯಿಂದ ಹೈರಾಣ ಮಾಡಸ್ತಿವಿ ಅಂತ ಅಂಜಿಕೆ ಹಾಕಿ ಎಲ್ಲ ಸಹಿಗಳನ್ನು ತಗೆದುಕೊಳ್ಳುತ್ತಾರೆ. ಮತ್ತು ಒಂದು ಮೊಟ್ಟೆಗೆ 3 ರೂ ಯಂತೆ ಟಿಚರಗಳಿಗೆ ಕಮಿಶನ್ ಕೊಡುತ್ತಾರೆ. ಇದರಲ್ಲಿ ಅಆPಔ, ಸುಪರವೈಸರ್ ಹಾಗೂ ಪಿ.ಒ ಅಧಿಕಾರಿಗಳು ಕೂಡ ಶಾಮಿಲಾಗಿದ್ದಾರೆ ಎನ್.ಜೆ ರಂಗಾರಾವ ಇವರ ಹೆಸರಲ್ಲಿ (ಪಿಂಟು ಜಮಾದಾರ ಉರ್ಪ ಶಿವಕುಮಾರ ಶ್ರವಣಕುಮಾರ ಜಮಾದಾರ ರುದ್ರವಾಡಿ ಇವನು ವಿಲೆವಾರಿ ಮಾಡುತ್ತಾನೆ. ತಕ್ಷಣವೇ ಜಿಲ್ಲಾಧಿಕಾರಿಗಳ ಮತ್ತು ಜಿಪಂ ಸಿಇಒ ಅವರು ಇಂಥ ಅಕ್ರಮ ಕೃತ್ಯೆಗಳು ತಡೆಯದೇ ಹೋದಲ್ಲಿ ಬೀದಿಗಿಳಿದು ಡಿಸಿ, ಜಿಪಂ ತಾಲೂಕು ಆಡಳಿತ ಮುಂದೆ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ ಇದ್ದರು.